ಆಧುನಿಕ ಯುಗದಲ್ಲಿ ಯೋಗ-ಧ್ಯಾನ-ಕ್ರೀಡೆ ಹೆಚ್ಚು ಸಹಕಾರಿ

0
105

ಚಿಕ್ಕಮಗಳೂರು: ಆಧುನಿಕ ಯುಗದಲ್ಲಿ ಕೆಲಸದ ಒತ್ತಡದಿಂದ ಹೊರಬರಲು ಯೋಗ, ಧ್ಯಾನ ಮತ್ತು ಕ್ರೀಡೆ ಮನುಷ್ಯನಿಗೆ ಹೆಚ್ಚು ಸಹಕಾರಿ ಆಗುತ್ತದೆ ಎಂದು ಕಣಚೂರು ಮೆಡಿಕಲ್ ಕಾಲೇಜಿನ ಹಿರಿಯ ಮಕ್ಕಳ ತಜ್ಞ ಶಂಶಾದ್‍ಖಾನ್ ತಿಳಿಸಿದರು.

ಐ. ಜಿ ರಸ್ತೆಯ ಉರ್ದು ಶಾಲೆಯಲ್ಲಿ ನ್ಯಾಷನಲ್ ವೆಲ್ಫೇರ್ ಮತ್ತು ಚಾರಿಟೆಬಲ್ ಟ್ರಸ್ಟ್ ಮತ್ತು ಮಂಗಳೂರಿನ ಕಣಚೂರು ಮೆಡಿಕಲ್, ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಮನುಷ್ಯ ಪ್ರತಿನಿತ್ಯ ವ್ಯಾಯಾಮ ಕ್ರೀಡೆ ಮತ್ತು ಮಿಥವ್ಯಯ ಆಹಾರ ಪದ್ಧತಿಯಿಂದ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು, ನ್ಯಾಷನಲ್ ವೆಲ್ಫೇರ್ ಮತ್ತು ಚಾರಿಟೆಬಲ್ ಟ್ರಸ್ಟ್‍ನಿಂದ ಪ್ರತಿವರ್ಷ ಎಲ್ಲಾ ವರ್ಗದ ಜನರಿಗೆ ಮತ್ತು ಜನರಿಗೆ ಅನುಕೂಲ ಆಗಲೆಂದು ಉಚಿತ ವೈಧ್ಯಕೀಯ ಶಿಬಿರವನ್ನು ಆಯೋಜಿಸಿ ಎಲ್ಲಾ ಸಂಘ ಸಂಸ್ಥೆಗಳಿಗೆ ಮಾದರಿ ಆಗಿದ್ದಾರೆ ಎಂದರು.

ನಗರಸಭೆ ಸದಸ್ಯ ಶಾದಾಬ್ ಅಲಂ ಖಾನ್ ಮಾತನಾಡಿ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡುವುದರಿಂದ ಅನೇಕ ಜನ ಬಡವರಿಗೆ ಅನುಕೂಲವಾಗುತ್ತದೆ ಜಿಲ್ಲೆಗೆ ಈ ಸಂಘಟನೆ ಮಾದರಿಯಾಗಿ ಕೆಲಸ ಮಾಡುತ್ತಿದೆ ಎಂದರು.

ನಗರಸಭೆ ಸದಸ್ಯ ಮುನೀರ್ ಅಹಮದ್ ಮಾತನಾಡಿ, ಚಿಕ್ಕಮಗಳೂರಿನ ನ್ಯಾಷನಲ್ ವೆಲ್ಫೇರ್ ಮತ್ತು ಚಾರಿಟೆಬಲ್ ಟ್ರಷ್ಟ್ ಕಣಚೂರು ಮೆಡಿಕಲ್ ಕಾಲೇಜಿನೊಂದಿಗೆ ಸೇರಿಕೊಂಡು ಜಿಲ್ಲೆಯಲ್ಲಿಯೆ ಅತ್ಯುತ್ತಮ ಕೆಲಸ ಮಾಡಿಕೊಂಡು ಬಡವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದೆ, ಇವರಿಗೆ ನಾವುಸಹ ಸಹಕಾರ ನೀಡುತ್ತೇವೆಂದು ತಿಳಿಸಿದರು.

ಮಂಗಳೂರಿನ ಕಣಚೂರು ಮೆಡಿಕಲ್, ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸಂಪರ್ಕ ಅಧಿಕಾರಿ ರಶೀದ್ ಖಾನ್ ಮಾತನಾಡಿ ಈ ಶಿಬಿರಗಳಲ್ಲಿ ಮೂಳೆ, ಕಣ್ಣಿನ, ಕಿವಿ, ಮೂಗು, ಗಂಟಲು, ಸ್ತ್ರೀ ರೋಗದ ಬಗ್ಗೆ ತಜ್ಞರಿಂದ ತಪಾಸಣೆ ನೆಡೆಸಿ ಅಗತ್ಯ ಇರುವ ಔಷದಗಳನ್ನು ಉಚಿತವಾಗಿ ನೀಡಲಾಗುತ್ತದೆ ಮುಸ್ಲಿಂ ಮಕ್ಕಳಿಗೆ ಖತ್ನಾ ಮಾಡಲಾಗುವುದು ಎಂದರು.

ಹೆಚ್ಚಿನ ಚಿಕಿತ್ಸೆಯನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ನಡೆಸಲಾಗುವುದು ಬಡವರಿಗೆ ಅನುಕೂಲ ಆಗಲೆಂದು ಬಿಪಿಎಲ್ ಕಾರ್ಡ್ ಇರುವವರಿಗೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆ, ಎಪಿಎಲ್ ಕಾರ್ಡ್ ಅವರಿಗೆ ರಾಜೀವ್ ಆರೋಗ್ಯ ಶ್ರೀ ಯೋಜನೆ, ಆಯುಷ್ ಮಾನ್ ಆರೋಗ್ಯ ವಿಮಾ ಯೋಜನೆಯಲ್ಲಿ ಆರೋಗ್ಯ ತಪಾಸಣೆ ನೆಡೆಸಿ ಚಿಕಿತ್ಸೆ ನೆಡೆಸಲಾಗುವುದು ಎಂದರು.

ನ್ಯಾಷನಲ್ ವೆಲ್ಫೇರ್ ಮತ್ತು ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷ ರಿಯಾಜ್ ಖಾನ್ ಮಾತನಾಡಿ, ಪ್ರತಿ ವರ್ಷ ಎಲ್ಲಾ ವರ್ಗದವರಿಗೆ ವೈದ್ಯಕೀಯ ಶಿಬಿರ ಆಯೋಜನೆ ಮಾಡಿ ಮುಸ್ಲಿಂ ಮಕ್ಕಳಿಗೆ ಉಚಿತವಾಗಿ ಖತ್ನಾ ಮಾಡಿಸಲಾಗುವುದು, ಕ್ಯಾನ್ಸರ್, ಮಂಡಿನೋವು, ಹೃದಯಕ್ಕೆ ಸಂಬಂದಪಟ್ಟ ಖಾಯಿಲೆಗಳಿಗೆ ಸಂಸ್ಥೆಯ ವತಿಯಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕಣಚೂರು ಆಸ್ಪತ್ರೆಗೆ ಕಳಿಸಿ ಕೊಡಲಾಗುವುದು ಎಂದರು.

ಸಿಡಿಎ ಮಾಜಿ ಅಧ್ಯಕ್ಷ ಅತಿಕ್ ಕೈಸರ್, ಸಿಪಿಐ ಮುಖಂಡ ಅಮ್ಜದ್, ಕಾರ್ಯದರ್ಶಿ ಷಫೀ ಉಲ್ಲಾ, ಖಜಾಂಚಿ ಯುನಸ್ ಸಲೀಮ್, ಸಹಕಾರ್ಯದರ್ಶಿ ಅಫರಫ್ ನವಾಜ್ ಖಾನ್, ಟ್ರಸ್ಟಿಗಳಾದ ಅಕ್ಮಲ್, ಇಕ್ಬಾಲ್ ಅಹಮದ್, ಅನ್ವರ್ ಆಲಿ, ರಫಿಕ್ ಅಹಮದ್, ಸುಹೀಲ್ ತಾಜ್, ಅಸ್ಲಂ, ಪರ್ವೀಜ್, ಜಿಯಾ, ಫರ್ವೀಜ್ ಅಹಮದ್, ನವೀದ್ ಪಾಷಾ, ಪಿ. ಆರ್. ಓ ರಶೀದ್ ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here