ಶಿಕಾರಿಪುರ : ಮಾನವನ ಆತ್ಮವು ಯಾವಾಗ ಆನಂದಮಯವಾಗಿರುತ್ತದೇಯೋ ಆಗ ಅವರಿಗೆ ಹಸಿವಿನ ಅರಿವಿರುವುದಿಲ್ಲ, ಹಸಿವಿನ ಅರಿವಿರುವಿದ್ದವರಿಗೆ ಆನಂದದ ಅರಿವಿರುವುದಿಲ್ಲ. ಮನುಷ್ಯನಿಗೆ ಯಾವುದಾರೊಂದು ದುಡಿಯುವ ಮನೋಭಾವವಿರಬೇಕು. ಅದು ಕೇವಲ ಅನ್ನ ವಸ್ತ್ರ ಧಾರಣೆ ಮಾಡುವ ಲೌಕಿಕ ಜೀವನದ ಭೋಗ ಭಾಗ್ಯಗಳಿಗೆ ಮೀಸಲಿಡದೇ, ಅದರಾಚೆಗಿನ ಆಧ್ಯಾತ್ಮಿಕ ಜೀವನದ ಬಗ್ಗೆಯೂ ಕೂಡ ಚಿಂತನೆ ನಡೆಸಿದಾಗ ಮಾತ್ರ ಮಾನವರಾಗಿ ಹುಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಹಿರೇಕೆರೂರು ತಾಲ್ಲೂಕಿನ ರಟ್ಟಿಹಳ್ಳಿಯ ಕಬ್ಬಿಣಕಂಠಿ ಮಠದ ಶ್ರೀ ಷ ಬ್ರ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಶನಿವಾರ ತಾಲ್ಲೂಕಿನ ನಾಗೀಹಳ್ಳಿ ಗ್ರಾಮದಲ್ಲಿ ನಡೆದ 395ನೇ ಶ್ರೀ ಶಿವಾಜಿ ಮಹಾರಾಜರ ಜಯಂತಿ ಆಚರಣೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಸಾದು ಸಂತರು, ಶರಣರು ಮಹಾತ್ಮರಲ್ಲದೇ ನಮ್ಮ ಪೂರ್ವಜರೂ ಸಹ ತಮ್ಮ ಬದುಕನ್ನು ಸಮಾಜದ ಏಳಿಗೆಗಾಗಿ, ಅದರ ಪೂರಕವಾಗಿ ಚಿಂತನೆ ನಡೆಸುವುದಲ್ಲದೇ, ಸಾರ್ವಜನಿಕರಿಗೆ ಸೇವೆಗಾಗಿ ಹಂಬಲಿಸುತ್ತಿದ್ದರು. ಆ ನಿಟ್ಟಿನಲ್ಲಿ ಭಗವಂನನ ಸಾಕ್ಷಾತ್ಕಾರ್ಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡು ಭಗವಂತನ ಕೃಪೆಗೆ ಪಾತ್ರರಾಗುತ್ತಿದ್ದರು. ಅಂತಹಾ ಮಹಾನೀಯರ ಜಯಂತಿಯನ್ನು ಆಚರಿಸುವುದರಲ್ಲೂ ಒಂದು ಅರ್ಥವಿದೆ. ಅವರು ಇತರರ ಬದುಕಿಗಾಗಿ ತಮ್ಮ ಬದುಕನ್ನು ತ್ಯಾಗ ಮಾಡಿರಿತ್ತಾರೆ. ಈಗಿನವರು ಸಾಮಾಜಿಕ ಹೋರಾಟ, ಸಮಾಜದ ಏಳಿಗೆಗೆ ಬೇಕಾದ ವ್ಯವಸ್ಥೆಯನ್ನು ಮಾಡಲಾಗದ ಈಗಿನ ಮಾನವರ ಜಯಂತಿಯನ್ನು ಆಚರಿಸಲು ಸಾದ್ಯವೇ ಎಂದು ಪ್ರಶ್ನಿಸಿದ ಅವರು, ಶಿವಾಜಿ ಮಹಾರಾಜರ ಜಯಂತಿ ಆಚರಣೆಯಲ್ಲಿಯೂ ಕೂಡ ವಿಶೇಷ ಅರ್ಥವಿದೆ ಎಂದು ಹೇಳಿದರು.
ಶಿವಾಜಿ ಮಹಾರಾಜರು ಕೇವಲ ಮರಾಠ ಜನಾಂಗದವರ ಒಳಿತ್ತಿಗಾಗಿ ಶ್ರಮಿಸದೇ ಇಡೀ ದೇಶದ ಸಂಸ್ಕೃತಿಯ ಜೊತೆಗೆ ಹಿಂದವೀ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ಕೀರ್ತಿ ಅವರಿಗಿದೆ. ಶಿವಾಜಿ ಮಹಾರಾಜರು ಚಿಕ್ಕ ವಯಸ್ಸಿನಲ್ಲೇ ತನ್ನ ತಾಯಿಯ ಮಡಿಲಲ್ಲೇ ಬೆಳೆದು ಅವರ ಆಜ್ಞೆಯಂತೆ ನಡೆಯುತ್ತಿದ್ದರು. ಶಿವಾಜಿ ಮಹಾರಾಜರಿಗೆ ಇಬ್ಬರು ತಾಯಂದಿರ ಕೃಪಾ ಕಟಾಕ್ಷ ಇತ್ತು. ಒಬ್ಬರು ಅವರಿಗೆ ಹೆತ್ತ ಜೀಜಾಬಾಯಿ ಇನ್ನೋಬ್ಬರು ಅವರು ನಂಬಿದ್ದ ಅವರ ಆರಾಧ್ಯ ದೇವತೆ ಶ್ರೀ ಅಂಬಾಭವಾನಿ ಮಾತೆ. ಈ ಇಬ್ಬರ ಆಶೀರ್ವಾದದಿಂದ ದೇಶದ ಎಲ್ಲಾ ಮಹಿಳೆಯರ ರಕ್ಷಣೆ ದೇಶದ ಸಂಸ್ಕೃತಿಯ ರಕ್ಷಣೆಗಾಗಿ ಪಣತೊಟ್ಟು ನಿಂತಿದ್ದರು.
ಶಿವಾಜಿ ಮಹಾರಾಜರು ಒಂದೊಮ್ಮೆ ಜುನಾಘಡ ಕೋಟೆಯನ್ನು ಮುತ್ತಿಗೆ ಹಾಕಿ ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದರು ಆ ಜುನಾಘಡ ಕೋಟೆಯನ್ನು ಗೆಲ್ಲುವುದು ಅಷ್ಟು ಸುಲಭದ ಮಾತಾಗಿರಲಿಲ್ಲ, ಯುದ್ಧ ಮಾಡಿ ವಿಶ್ರಾಂತಿ ಪಡೆಯುವ ವೇಳೆ ಅಲ್ಲಿಯ ಒಬ್ಬ ಮಹಿಳೆ ಶಿವಾಜಿ ಮಹಾರಾಜರಿಗೆ ತಿನ್ನಲು ರೊಟ್ಟಿ ಪಲ್ಯ ತಂದು ಕೊಟ್ಟಳು ಆ ರೊಟ್ಟಿಯನ್ನು ಅರ್ಧದಷ್ಟು ಮುರಿದ ಶಿವಾಜಿ ಮಹಾರಾಜರು ರೊಟ್ಟಿಯಿಂದ ಪಲ್ಯ ಸೋರಲಾರಂಭಿಸಿತು.ಆಗ ಆ ಮಹಿಳೆ ರೊಟ್ಟಿಯನ್ನೇ ತಿನ್ನಲು ಬರದ ನೀವು ಜುನಾಘಡ ಕೋಟೆಯನ್ನು ಹೇಗೆ ಗೆಲುವಿರಿ ಎಂದು ಪ್ರಶ್ನಿಸಿದ ಆ ಮಹಿಳೆ ರೊಟ್ಟಿಯನ್ನು ಸ್ವಲ್ಪ ಸ್ವಲ್ಪ ಮುರಿದು ತಿನ್ನಬೇಕು ಆಗ ಪಲ್ಯ ಸೋಲುವುದಿಲ್ಲ ಅದೇರೀತಿ ಈ ಜುನಾಘಡ ಕೋಟೆಯನ್ನು ಕೂಡ ಸ್ವಲ್ಪ ಸ್ವಲ್ಪ ಗೆಲ್ಲುವುದರ ಮೂಲಕ ಕೋಟೆಯನ್ನು ಸಂಪೂರ್ಣವಾಗಿ ಗೆಲ್ಲಲು ಸಾಧ್ಯ ಎಂದು ತಿಳಿಸಿದ ಕೂಡಲೇ ಎಚ್ಚೆತ್ತ ಶಿವಾಜಿ ಮಹಾರಾಜರು ಆ ಕೋಟೆಯನ್ನು ಹಂತಹಂತವಾಗಿ ಗೆಲ್ಲುವ ಮೂಲಕ ಎಲ್ಲಾ ಕೋಟೆಯನ್ನು ಕೂಡ ಗೆಲುವು ಸಾಧಿಸಿದರು. ಅದೇರೀತಿಯಲ್ಲಿ ಪೋಷಕರು ತಮ್ಮ ತಮ್ಮ ಮಕ್ಕಳನ್ನು ಹಂತ ಹಂತವಾಗಿ ವಿದ್ಯಾಭ್ಯಾಸ ಹಿಂದೂ ಧರ್ಮದ ಸಂಸ್ಕೃತಿಯನ್ನು ಉತ್ತಿ ಬೆಳೆಸಿದಾಗ ಮಾತ್ರ ಅವರು ಸುಸಂಸ್ಕೃತರಾಗಿ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.
ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣ ಮಾಡುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಎಂಎಡಿಬಿ ಅಧ್ಯಕ್ಷ ಕೆ ಎಸ್ ಗುರುಮೂರ್ತಿ, ದೇಶದಲ್ಲಿ ಹಿಂದೂ ಧರ್ಮದ ಹಿಂದವೀ ಸಾಮ್ರಾಜ್ಯದ ಸಂಸ್ಕೃತಿಯನ್ನು ಕಟ್ಟಿ ಉಳಿಸಿ ಬೆಳೆಸುವ ಪ್ರಯತ್ನ ನಡೆದಿದೆ ಎಂದರೆ ಅದು ಶ್ರೀ ಛತ್ರಪತಿ ಶಿವಾಜಿ ಮಹಾರಾಜರೇ ಕಾರಣರಾಗಿದ್ದಾರೆ. ಆಗ ಈ ದೇಶದ ಜನರು ಸಹಬಾಳ್ವೆಯ ಸಮನ್ವಯದ ಮುಖಾಂತರ ಜೀವನ ಸಾಗಿಸುತ್ತಿದ್ದರು. ಅನೇಕ ದೇಶದ್ರೋಹಿಗಳು ಹುಟ್ಟಿನಿಂದ ದೇಶದ ಸಂಸ್ಕೃತಿಯು ಅವನತಿಯತ್ತ ಸಾಗಿತ್ತು ಆಗ ಶಿವಾಜಿ ಮಹಾರಾಜರು ಚಿಕ್ಕ ವಯಸ್ಸಿನಲ್ಲೇ ತನ್ನ ತಾಯಿಯ ಆಜ್ಞೆಯಂತೆ ನಡೆಯುತ್ತಿದ್ದರು ಅವರು ಹೇಳಿದ ರೀತಿಯಲ್ಲೇ ಹಿಂದೂ ಧರ್ಮದ ರಕ್ಷಣೆಗಾಗಿ ಪಣತೊಟ್ಟು ನಿಂತಿದ್ದರು.
ಶಿಕಾರಿಪುರಕ್ಕೆ ಆರ್ಎಸ್ಎಸ್ ಮೂಲಕ ಆಗಮಿಸಿದ ಬಿ ಎಸ್ ಯಡಿಯೂರಪ್ಪರವರು ಕಳೆದ 30-40 ವರ್ಷಗಳ ಕಾಲ ಎಲ್ಲಾ ಜನಾಂಗದವರೊಡನೆ ಉತ್ತಮ ಭಾಂದವ್ಯ ಹೊಂದಿದ್ದಾರೆ. ಎಲ್ಲ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಾಸಿದ್ದಾರೆ. ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕಾಗಿ ಜಾತಿ ಧರ್ಮ ಆಚರಣೆ ವಿಷಯದಲ್ಲಿ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತದೆಯಲ್ಲದೇ ಜಾತಿ ಧರ್ಮಗಳಲ್ಲಿ ಒಡಕು ಉಂಟಾಗಿ ನ್ಯಾಯಾಲಯದ ಮೆಟ್ಟಿಲೇರಿದೆ. ನ್ಯಾಯಾಲಯದ ನ್ಯಾಯಾಧೀಶರ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು. ನ್ಯಾಯಾಧೀಶರ ಆದೇಶವನ್ನು ಎಲ್ಲರೂ ಒಗ್ಗಟ್ಟಿನಿಂದ ಒಪ್ಪಲೇಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಮರಾಠ ಸಮಾಜದ ಅಧ್ಯಕ್ಷ ಗುರುರಾಜ್ ಜಗತಾಪ್ ಹೆಚ್ ಎಲ್, ಉಪಾಧ್ಯಕ್ಷ ದಾನಪ್ಪ ಬೆಂಡೇಕಟ್ಟೆ, ಹಾಲು ಒಕ್ಕೂಟದ ನಿರ್ದೇಶಕ ಸಿದ್ಧಲಿಂಗಪ್ಪ ನಿಂಬೇಗೊಂದಿ,ನಾಗೀಹಳ್ಳಿ ಮರಾಠ ಸಮಾಜದ ಅಧ್ಯಕ್ಷ ದೇವರಾಜ್ ಟಿ ಶಿಂಧೆ, ಶಿವಗಿರಿ ವಿವಿದ್ದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ರಾವ್ ಕರಾಡೆ,ಹಿರೇಜಂಬೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮಲ್ಲಿಕಾರ್ಜುನ, ಸದಸ್ಯರಾದ ಕುಮಾರ್ ಹೆಚ್, ಕುಸುಮ, ಜ್ಯೋತಿಬಾಯಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಂಗಾರಿ ನಾಯ್ಕ್, ತಾಲ್ಲೂಕು ಮರಾಠ ಸಮಾಜದ ಎಲ್ಲಾ ನಿರ್ದೇಶಕರು, ಶಿವಗಿರಿ ಮರಾಠ ಸಮಾಜದ ಸದಸ್ಯರು, ಹಳಿಯೂರು ಮರಾಠ ಸಮಾಜದ ಸದಸ್ಯರು ಹಾಗೂ ನಾಗೀಹಳ್ಳಿ ಗ್ರಾಮದ ವಿವಿಧ ಮುಖಂಡರು ಗ್ರಾಮಸ್ಥರು ಭಾಗವಹಿಸಿದ್ದರು.