ಆನೆಗಳ ಕಾಟಕ್ಕೆ ಮತ್ತೆ ಕಂಗಾಲಾದ ಉಂಬ್ಳೇಬೈಲು ಗ್ರಾಮದ ರೈತರು !

0
350

ಶಿವಮೊಗ್ಗ: ಉಂಬ್ಳೇಬೈಲು ಗ್ರಾಮದ ಚಂದ್ರಶೇಖರ್ ಗೌಡ ಎಂಬುವವರು ಜಮೀನಿನಲ್ಲಿ ಬೆಳೆದಿದ್ದ ಭತ್ತದ ಬೆಳೆಗೆ ರಾತ್ರಿ ಆನೆಗಳು ದಾಳಿ ನಡೆಸಿ ಬೆಳೆಯನ್ನು ತಿಂದಿದ್ದಲ್ಲದೆ ತುಳಿದು ಸಂಪೂರ್ಣ ಹಾಳುಮಾಡಿದೆ.

ಕೊರೊನಾ ಮಹಾಮಾರಿಯಿಂದ ತತ್ತರಿಸಿದ ಜನರು ಮತ್ತೆ ಆನೆಗಳ ದಾಳಿಯಿಂದ ತತ್ತರಿಸುತ್ತಿದ್ದಾರೆ. ಅನೇಕ ಬಾರಿ ಅರಣ್ಯಾಧಿಕಾರಿಗಳಿಗೆ ತಿಳಿಸಿದರು ಇದನ್ನು ತಡೆಗಟ್ಟಲು ಸಂಪೂರ್ಣ ವಿಫಲರಾಗಿದ್ದಾರೆ. ಅರಣ್ಯಾಧಿಕಾರಿಗಳು ಆನೆಗಳು ದಾಳಿ ಮಾಡಿದಂತಹ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಹಾಗೂ ಮತ್ತೆ ಮನೆಗಳ ಕಡೆ ಆನೆಗಳು ಬಾರದಂತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here