24.3 C
Shimoga
Friday, December 9, 2022

ಆನ್‌ಲೈನ್ ತಂದ ಎಡವಟ್ಟು ; ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳು !

ಚಿಕ್ಕಮಗಳೂರು : ಆನ್‌ಲೈನ್‌ನಲ್ಲಿ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡುವ ವೇಳೆ ಎರಡು ಬಾರಿ ಪ್ರತ್ಯೇಕ ಸೆಂಟರ್ ತೋರಿಸಿದ ಪರಿಣಾಮ ಬಳ್ಳಾರಿಯಿಂದ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಬ್ಬರು ಪರೀಕ್ಷೆಯಿಂದ ವಂಚಿತರಾದ ಘಟನೆ ಬೆಳಕಿಗೆ ಬಂದಿದೆ.

ಬಳ್ಳಾರಿಯಿಂದ ಚಿಕ್ಕಮಗಳೂರಿಗೆ ವಿದ್ಯಾರ್ಥಿಗಳು ಟಿಇಟಿ ಪರೀಕ್ಷೆ ಬರೆಯಲು ಬಂದಿದ್ದಾರೆ, ಅದಕ್ಕೂ ಮೊದಲು ಆನ್‌ಲೈನ್‌ನಲ್ಲಿ ಪರೀಕ್ಷಾ ಕೇಂದ್ರ ಪರಿಶೀಲಿಸಿದಾಗ ಒಂದು ಕೇಂದ್ರದ ವಿವರ ಬಂದಿದೆ ಅದರಂತೆ ವಿದ್ಯಾರ್ಥಿ ಆ ವಿಳಾಸಕ್ಕೆ ಹೋಗಿ ತನ್ನ ರಿಜಿಸ್ಟರ್ ನಂಬರ್ ಪರಿಶೀಲಿಸಿದಾಗ ಅಲ್ಲಿ ಆತನ ವಿವರ ಇರಲಿಲ್ಲ, ಇದರಿಂದ ವಿಚಲಿತನಾದ ವಿದ್ಯಾರ್ಥಿ ಆನ್‌ಲೈನ್‌ನಲ್ಲಿ ಮತ್ತೊಮ್ಮೆ ತನ್ನ ಹಾಲ್ ಟಿಕೆಟ್ ಪರಿಶೀಲಿಸಿದಾಗ ಇನ್ನೊಂದು ಶಾಲೆಯ ವಿಳಾಸ ತೋರಿಸಿದೆ ಕೂಡಲೇ ಅಲ್ಲಿಂದ ಎರಡನೇ ವಿಳಾಸಕ್ಕೆ ಬಂದಾಗ ವಿದ್ಯಾರ್ಥಿಗೆ ಅಲ್ಲಿನ ಸಿಬ್ಬಂದಿಗಳು ಇಲ್ಲದ ಸಬೂಬು ನೀಡಿ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶ ನಿರಾಕರಿಸಿದ್ದಾರೆ.

ವಿಚಲಿತನಾದ ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತನಾಗಿದ್ದಾನೆ. ಈ ಕುರಿತು ವಿದ್ಯಾರ್ಥಿ ಬಸವನಹಳ್ಳಿ ಶಾಲೆ ಪರೀಕ್ಷಾ ಕೇಂದ್ರದ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

“ನಾನು ಟಿಇಟಿ ಪರೀಕ್ಷೆ ಬರೆಯಲು ಹುಬ್ಬಳ್ಳಿಯಿಂದ ನಿನ್ನೆ ರಾತ್ರಿಯೇ ನಗರಕ್ಕೆ ಆಗಮಿಸಿದ್ದೆ. ಮೊದಲು ಆನ್‍ಲೈನ್‍ನಲ್ಲಿ ಪಡೆದ ಪ್ರವೇಶ ಚೀಟಿಯಲ್ಲಿ ಪರೀಕ್ಷಾ ಕೇಂದ್ರದ ಹೆಸರು ಬೇರೆ ಇತ್ತು. ಭಾನುವಾರ ಡೌನ್‍ಲೋಡ್ ಮಾಡಿದ ಪ್ರವೇಶ ಚೀಟಿಯಲ್ಲಿ ಪರೀಕ್ಷಾ ಕೇಂದ್ರದ ಹೆಸರು ಬಸವನಹಳ್ಳಿ ಕಾಲೇಜು ಎಂದು ನಮೂದಾಗಿದೆ. ಆದರೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಪರೀಕ್ಷೆ ಬರೆಯಲು ಅವಕಾಶ ನೀಡದೇ ಹಿಂದಕ್ಕೆ ಕಳುಹಿಸಿದ್ದಾರೆ. ನನ್ನಂತೆ ಹಲವಾರು ಅಭ್ಯರ್ಥಿಗಳಿಗೆ ಇದೇ ಸಮಸ್ಯೆ ಎದುರಾಗಿದೆ. ಹೊರ ಜಿಲ್ಲೆಗಳಿಂದ ಬಂದಿರುವ ನಾವು ಪರೀಕ್ಷಾ ಕೇಂದ್ರದ ವಿಳಾಸ ತಿಳಿಯದೇ, ಸಕಾಲದಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳಲೂ ಸಾಧ್ಯವಾಗದೇ ಪರೀಕ್ಷೆಯನ್ನೂ ಬರೆಯಲು ಸಾಧ್ಯವಾಗಿಲ್ಲ. ಆನ್‍ಲೈನ್ ಎಡವಟ್ಟಿನಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ. ಸಂಬಂಧಿಸಿದ ಇಲಾಖಾಧಿಕಾರಿಗಳೇ ಇದಕ್ಕೆ ಹೊಣೆ.”
– ಅವಿನಾಶ್, ಟಿಇಟಿ ಪರೀಕ್ಷೆ ಬರೆಯಲು ಹುಬ್ಬಳ್ಳಿಯಿಂದ ಬಂದಿದ್ದ ಅಭ್ಯರ್ಥಿ

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!