ಆನ್‌ಲೈನ್ ಗುಂಗು ಮೊಬೈಲ್‌ನಿಂದ ದೂರವಿರಿ ; ಚಿಣ್ಣರಿಗೆ ಪಪಂ ಮುಖ್ಯಾಧಿಕಾರಿ ಬಾಲಚಂದ್ರ ಕಿವಿಮಾತು

0
332

ಹೊಸನಗರ: ಈಗ ಅಂಬೆಗಾಲಿಕ್ಕುವ ಮಕ್ಕಳು ಸಹ ಮೊಬೈಲ್ ಇಲ್ಲದೆ ಊಟ ಸಹ ಮಾಡುವುದಿಲ್ಲ ದಯವಿಟ್ಟು ಮಕ್ಕಳನ್ನು ಮೊಬೈಲ್ ಸಾಧನದಿಂದ ದೂರವಿಡಿ ಎಂದು ಹೇಳಿದ ವರು ಹೊಸನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಟಿ. ಬಾಲಚಂದ್ರ ರವರು ಎಂದರು.

ಅವರು ಸೋಮವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಪಾಠಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಲಭವನ ಸೊಸೈಟಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಜಿಲ್ಲಾ ಪಂಚಾಯತ್ ತಾಪಂ ಸಂಯುಕ್ತಾಶ್ರಯದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಳೆದೆರಡು ವರ್ಷಗಳಿಂದ ಮಹಾಮಾರಿ ಕೋವಿಡ್ ಹಿನ್ನೆಲೆಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಚಿಂತನಾ ಕೌಶಲ್ಯ ಕುಂಠಿತಗೊಂಡಿದ್ದು ಇಲಾಖೆ ಹಮ್ಮಿಕೊಂಡ ಮಕ್ಕಳ ಬೇಸಿಗೆ ಶಿಬಿರ ಬೆಳೆಯುವ ಮಕ್ಕಳಿಗೆ ಪುನಶ್ಚೇತನ ಎಂಬ ಆಕ್ಸಿಜನ್ ನೀಡಿದಂತಾಗಿದೆ‌ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚಂದ್ರಬಾಬು, ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಮುಖ್ಯ ಶಿಕ್ಷಕಿ ಡಿಸೋಜ, ಪಟ್ಟಣ ಪಂಚಾಯಿತಿ ಅಭಿಯಂತರ ಗಣೇಶ್ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಈ ಬೇಸಿಗೆ ಶಿಬಿರ ಮಕ್ಕಳ ಕಲಿಕಾ ಸಾಮರ್ಥ್ಯ ಪುನಶ್ಚೇತನಗೊಳ್ಳಲು ಕೋವಿಡ್ ಸಮಯದಲ್ಲಿ ಮಕ್ಕಳಿಗೆ ಮೊಬೈಲ್ ಅನಿವಾರ್ಯವಾಗಿತ್ತು. ಇನ್ನಾದರೂ ಪೋಷಕರು ಎಚ್ಚೆತ್ತು ಮೊಬೈಲ್ ಸಾಧನದಿಂದ ಮಕ್ಕಳನ್ನು ದೂರವಿಡುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಬೇಕು ಎಂದು ಕರೆ ನೀಡಿ, ಮಕ್ಕಳಲ್ಲಿ ಈಗಿನಿಂದಲೇ ನಿರೂಪಣಾ ಕೌಶಲ್ಯ ಕಲಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ಶಿಶು ಅಭಿವೃದ್ಧಿಯೋಜನಾಧಿಕಾರಿ ಶಶಿರೇಖಾ ಪ್ರಸ್ತಾವಿಕವಾಗಿ ಮಾತನಾಡಿ, ಬೇಸಿಗೆ ಶಿಬಿರದಲ್ಲಿ 5 ರಿಂದ 16 ವರ್ಷದೊಳಗಿನ 50 ಮಕ್ಕಳಿಗೆ ಶಿಬಿರದಲ್ಲಿ ನಮ್ಮ ಸಂಸ್ಕೃತಿ ಬಿಂಬಿಸುವ ಪಠ್ಯೇತರ ಚಟುವಟಿಕೆಗಳು ನಡೆಸುವ ಮೂಲಕ ಚಿಣ್ಣರನ್ನು ಹತ್ತುದಿನಗಳ ಕಾಲ ಪ್ರತ್ಯೇಕ ಲೋಕಕ್ಕೆ ಕೊಂಡೊಯ್ಯಲಾಗಿತ್ತು ಎಂದು ತಿಳಿಸಿದರು.

ವನಮಾಲ ಸ್ವಾಗತಿಸಿದರು‌. ಸುಜಾತ ಕಾರ್ಯಕ್ರಮ ನಿರೂಪಿಸಿದರು. ದಿವ್ಯ ವಂದಿಸಿದರು. ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆ ನಡೆಸಲಾಯಿತು.

ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಮುಖ್ಯ ಅತಿಥಿಗಳು ಪ್ರಶಂಸನಾ ಪತ್ರ ವಿತರಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here