ಆರಗ ಜ್ಞಾನೇಂದ್ರರಿಗೆ ತಲೆ ಕೆಟ್ಟಿದೆ, ಅವರೊಬ್ಬ ಮೆಂಟಲ್ ; ಕಿಮ್ಮನೆ ವಾಗ್ದಾಳಿ

0
527

ತೀರ್ಥಹಳ್ಳಿ: ಆರಗ ಜ್ಞಾನೇಂದ್ರರಿಗೆ ತಲೆ ಕೆಟ್ಟಿದೆ. ಅವರೊಬ್ಬ ಮೆಂಟಲ್ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ತೀರ್ಥಹಳ್ಳಿ ತಾಲೂಕಿನ ಗೃಹಸಚಿವರ ತವರೂರಾದ ಗುಡ್ಡೆಕೊಪ್ಪದಿಂದ ಶಿವಮೊಗ್ಗದವರೆಗೆ ನಾಲ್ಕು ದಿನಗಳ ಕಾಲ ಪಾದಯಾತ್ರೆ ನಡೆಸುತ್ತಿರುವ ಕಿಮ್ಮನೆ ರತ್ನಾಕರ್ ಭಾನುವಾರ ಮೂರನೇ ದಿನದ ಪಾದಯಾತ್ರೆಗೂ ಮುನ್ನ ಮಂಡಗದ್ದೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಉತ್ತಮ ರಸ್ತೆ ಮಾಡಿಸಿದ್ದೀನಿ ಕಿಮ್ಮನೆ ಪಾದಯಾತ್ರೆ ಮಾಡಲಿ ಎಂಬ ಆರಗ ಜ್ಞಾನೇಂದ್ರ ಅವರು ನಿನ್ನೆ ಶಿವಮೊಗ್ಗದಲ್ಲಿ ಹೇಳಿದ ಹೇಳಿಕೆ ಬಗ್ಗೆ ಮಾತನಾಡಿದ ಕಿಮ್ಮನೆ ನಾನು ಅಭಿವೃದ್ಧಿ ಮಾಡಿದ್ದನ್ನು ಇವರು ಶಂಕು ಸ್ಥಾಪನೆ, ಉದ್ಘಾಟನೆ ಮಾಡಿದ್ದೂ ಬಿಟ್ಟರೆ ಇವರು ಏನು ಮಾಡಿದ್ದಾರೆ ? ಶಿವಮೊಗ್ಗ – ತೀರ್ಥಹಳ್ಳಿ ರಸ್ತೆ ಮಾಡಿಸಿದ್ದು ನಾನು ಈಗ ಅವರು ಹೊಟ್ಟೆ ಹೊತ್ತುಕೊಂಡು ಓಡಾಡಲು ಅನುಕೂಲವಾಗಿದೆ ಎಂದರು. ತಲೆ ಮರೆಸಿಕೊಂಡಿರುವ ವ್ಯಕ್ತಿಗೆ ತಪ್ಪಿಸಿಕೊಂಡು ಹೋಗಿದ್ದಾನೆ ಎನ್ನಬೇಕು ಆದರೆ ಆರಗ ಜ್ಞಾನೇಂದ್ರ ಪ್ರವಾಸಕ್ಕೆ ಹೋಗಿದ್ದಾರೆ ಎಂದು ಹೇಳುತ್ತಾರೆ. ಅವರಿಗೆ ಕನ್ನಡ ಭಾಷೆಯಲ್ಲೇ ಸ್ವಲ್ಪ ಸಮಸ್ಯೆ ಇದೆ ಎಂದು ವ್ಯಂಗ್ಯವಾಗಿ ಟೀಕಿಸಿದರು.

ನಾನೇ ಬಹುತೇಕ ಕಡೆ ರಸ್ತೆ ಮಾಡಿಸಿದ್ದು, ಅವರು 15 ವರ್ಷಗಳ ಕಾಲ ಶಾಸಕರಾಗಿದ್ದರು ಆ ಸಮಯದಲ್ಲಿ ರಸ್ತೆ ಮಾಡಿಸಬಹುದಿತ್ತಲ್ಲ. ನೀವೇ ಹೋಗಿ ಎಂಟು ಹೋಬಳಿಗಳಲ್ಲಿ ಕೇಳಿ ಕಿಮ್ಮನೆ ಬಂದ ಮೇಲೆ ರಸ್ತೆ ಆಗಿದ್ದು ಎನ್ನುತ್ತಾರೆ ಹೊರತು ಆರಗ ಜ್ಞಾನೇಂದ್ರರ ಹೆಸರು ಹೇಳುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಅವರು ಕಳೆದು ಹೋಗುತ್ತಾರೆ ಎಂದು ತಿಳಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here