ಆರೋಗ್ಯದಲ್ಲಿ ಹಠಾತ್‌ ಏರುಪೇರು: ಮಾರುತಿಪುರದ ಯುವಕ ಸಾವು

0
14007

ಹೊಸನಗರ: ತಾಲೂಕಿನ ಮಾರುತಿಪುರ ಗ್ರಾಮದ ಹಿಂಡ್ಲೆಮಠದ ವಾಸಿ ಹರೀಶ್ (21) ಗಾರೆ ಕೆಲಸ ಮಾಡುತ್ತಿದ್ದು ಭಾನುವಾರವು ಸಹ ಕೆಲಸ ಮಾಡಿದ್ದು ಸೋಮವಾರ ಏಕಾಏಕಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಹೊಸನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ದೇಹದ ಪರೀಕ್ಷೆ ನಡೆಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.

ಬಡತನದ ಕುಟುಂಬದ ಆಧಾರಸ್ಥಂಭವಾಗಿದ್ದ ಈತ ವೃದ್ಧ ತಂದೆ-ತಾಯಿ, ಇಬ್ಬರು ಅಕ್ಕಂದಿರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾನೆ.

ಮೃತದೇಹ ಸಂಜೆ 5 ಘಂಟೆಯ ಸುಮಾರಿಗೆ ಸ್ವಗ್ರಾಮಕ್ಕೆ ತಲುಪಿದ್ದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ರಾತ್ರಿ 9ರ ಸುಮಯಕ್ಕೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದುಬಂದಿದೆ.

ಜಾಹಿರಾತು

LEAVE A REPLY

Please enter your comment!
Please enter your name here