ಎನ್.ಆರ್ ಪುರ : ಆರೋಗ್ಯ ಇಲಾಖೆಯ ಸಿಬ್ಬಂದಿಗಳೆ ಮಾಸ್ಕ್ ಹಾಕಿಕೊಳ್ಳದೆ ಆರೋಗ್ಯ ಮೇಳ ನಡೆಸುತ್ತಿರುವುದು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆವರಣದಲ್ಲಿ ಕಂಡುಬಂದಿದೆ. ಈ ಆರೋಗ್ಯ ಶಿಬಿರ ಭಾಗವಹಿಸಿದ ಅನೇಕ ಸಾರ್ವಜನಿಕರು ಹೇಳಿದಂತಹ ಪ್ರಶ್ನೆ ಸಹ ಇದು.
ರಾಜ್ಯ ಸರ್ಕಾರದ ಆದೇಶಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಕೇರ್ ಮಾಡಿಲ್ಲ. ಜೊತೆಗೆ ಮಾಸ್ಕ್ ಇಲ್ಲದೆ ವೇದಿಕೆ ಮೇಲೆ ಶಾಸಕರು, ಅಧಿಕಾರಿಗಳ ದರ್ಬಾರ್ ಕಾಣಿಸಿದೆ.
ಶಾಸಕ ರಾಜೇಗೌಡ, ಡಿ.ಎಚ್.ಓ. ಉಮೇಶ್, ಪ.ಪಂ. ಅಧ್ಯಕ್ಷೆ ಜುಬೇದಾ ಯಾರೂ ಮಾಸ್ಕ್ ಹಾಕಿಕಲಿಲ್ಲ. ತಪಾಸಣೆಗೆ ಬಂದ ವೈದ್ಯರೂ ಮಾಸ್ಕ್ ಇಲ್ಲದೆ ಓಡಾಡಿದ್ದಾರೆ. ವೈದ್ಯರು, ಶೂಶ್ರುಕಿಯರು ಸೇರಿ ಇತರೆ ಆರೋಗ್ಯ ಸಿಬ್ಬಂದಿ ಅದನ್ನೇ ಅನುಸರಿಸಿದರು.
ಸರ್ಕಾರದ ಆದೇಶ ಜನಸಾಮಾನ್ಯರಿಗಷ್ಟೆ ಸೀಮಿತವಾಯ್ತಾ ? ಎನ್ನುವುದು ಈಗ ಪ್ರಶ್ನೆಯಾಗಿ ಉಳಿದಿದೆ.
Related