ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ನುಸುಳುವಿಕೆ ಸಲ್ಲದು ; ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಹೊಸನಗರ ವೈದ್ಯರುಗಳ ಅಭಿಮತ

0
391

ಹೊಸನಗರ: ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ನುಸುಳುವಿಕೆ ದುರಂತಕ್ಕೆ ದಾರಿಯಾಗಲಿದೆ. ಆದುದರಿಂದ ವೈದ್ಯರುಗಳ ಸೇವೆಯಲ್ಲಿ ಹಾಗೂ ಶಿಕ್ಷಣ ಕ್ಷೇತ್ರದಿಂದ ರಾಜಕೀಯ ನುಸುಳದೆ ಅವರುಗಳಿಗೆ ಮುಖ್ಯವಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸುವುದು ಅಗತ್ಯವಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಹೊಸನಗರ ಜೆಸಿಐ ಸಂಸ್ಥೆಯವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಏರ್ಪಡಿಸಿದ ರಾಷ್ಟ್ರೀಯ ವೈದ್ಯ ದಿನಾಚರಣೆ ಹಾಗೂ ಪತ್ರಕರ್ತರ ದಿನಾಚರಣೆಯಲ್ಲಿ ಸಾರ್ವಜನಿಕ ಆಸ್ಪತ್ರೆ ವೈದ್ಯರುಗಳಾದ ಡಾ. ಲಿಂಗರಾಜ್, ಡಾ. ಹೇಮಂತ್ ಶಿವಯೋಗಿ, ಡಾ. ಆತ್ಮ, ಡಾ. ಶೃತಿ, ಡಾ. ರಕ್ಷಿತ್ ಮೊದಲಾದವರು ಮಾತನಾಡಿ, ಸರ್ವರ ಆರೋಗ್ಯವನ್ನು ಸುಧಾರಿಸುವ ನಂಬಿ ಬಂದ ರೋಗಿಗಳನ್ನು ಮಮತೆಯಿಂದ ಆದರಿಸುವ ಸಹನೆಯಿಂದ ವಿಚಾರಿಸುವ ಸ್ನೇಹಿತರಂತೆ ನಗುಮೊಗದ ಭರವಸೆಯ ನುಡಿಗಳನ್ನು ಹೇಳಿ ರೋಗಿಗಳ ಮನಸ್ಸಿಗೆ ಆತ್ಮಸ್ಥೈರ್ಯ ತುಂಬುವ ಹಾಗೂ ಎಂತಹ ಕಠಿಣ ಸಂದರ್ಭದಲ್ಲಿಯು ರೋಗಿಗಳೊಂದಿಗೆ ಬೆರೆತು ಅವರ ಸೇವೆಗೆ ಸಿದ್ದರಾಗಿ ಮಾನವೀಯತೆ ಮೆರೆದಾಗ ಮಾತ್ರ ಆರೋಗ್ಯ ಪೂರ್ಣ ಸಮಾಜ ಕಾಣಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶಾಂತರಾಜ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರವಿ ಬಿದನೂರು, ಜೆಸಿಐ ಅಧ್ಯಕ್ಷೆ ಸೀಮಾ ಕಿರಣ್, ಜೆಸಿ ಪದಾಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಇಂದು ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಿನ್ನೆಲೆಯಲ್ಲಿ ‘ಮಲ್ನಾಡ್ ಟೈಮ್ಸ್’ ಹಿರಿಯ ವರದಿಗಾರರಾದ ಉಡುಪಿ ಸದಾನಂದ ರವರನ್ನು ಜೆಸಿಐ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಕ್ಷಯ ರೋಗಿಯೊಬ್ಬರಿಗೆ ರಾಷ್ಟ್ರೀಯ ವೈದ್ಯರ ದಿನಾಚರಣೆ ಸವಿನೆನಪಿಗಾಗಿ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಯಿತು.

ಸಾರ್ವಜನಿಕ ಆಸ್ಪತ್ರೆಯ ಗಜೇಂದ್ರರವರು ಸ್ವಾಗತಿಸಿ ದಿನಾಚರಣೆಯ ಮಹತ್ವದ ಬಗ್ಗೆ ವಿವರಿಸಿದರು.

ಜೆಸಿಐನ ಪೂರ್ಣೇಶ್ ಕಾರ್ಯಕ್ರಮ ನಿರೂಪಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here