ಆರೋಪಿಯ ವಿರುದ್ದ ದೂರು ದಾಖಲಿಸುವಲ್ಲಿ ಪಿಎಸ್‌ಐ ನಿರ್ಲಕ್ಷ್ಯ: ಕಟ್ಟುಕೋವಿಯ ಗುಂಡು ಸಿಡಿದು ರೈತನ ಬಲಗಾಲು ಪೀಸ್ ಪೀಸ್..!

0
2408

ರಿಪ್ಪನ್‌ಪೇಟೆ: ಕಾಡು ಪ್ರಾಣಿಗಳ ಬೇಟೆಯಾಡಲು ಬೇಲಿಗೆ ಅಳವಡಿಸಲಾದ ಕಟ್ಟುಕೋವಿ (ಪ್ರಾಣಿಗಳು ಬರುವ ಜಾಗದಲ್ಲಿ ಸ್ವಯಂ ಚಾಲಿತವಾಗಿ ಗುಂಡು ಸಿಡಿಯಲು ಸಿದ್ದಪಡಿಸುಟ್ಟಿರುವ ಬಂದೂಕು) ಗುಂಡು ಸಿಡಿದ ಪರಿಣಾಮ ರಸ್ತೆಯಲ್ಲಿ ಹೋಗುತ್ತಿದ್ದ ರೈತನಿಗೆ ತಗುಲಿ ಬಲಗಾಲು ಚೂರುಚೂರುಯಾಗಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬರುವುದರೊಂದಿಗೆ ಕಳೆದ ಐದಾರು ತಿಂಗಳ ಹಿಂದೆ ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯ ಬೆನವಳ್ಳಿ ಗ್ರಾಮದಲ್ಲಿ ನಡೆದಿದ್ದು ಅವಘಡಕ್ಕೊಳಗಾದ ರೈತನ ದೂರು ದಾಖಲಿಸಿಕೊಳ್ಳಲು ಇಲ್ಲಿನ ಈ ಹಿಂದಿನ ಪಿಎಸ್‌ಐ ಪಾರ್ವತಿ ಭಾಯಿ ನಿರ್ಲಕ್ಷ್ಯ ವಹಿಸಿ ಯುವಕನ ಬದುಕನ್ನು ಸರ್ವನಾಶ ಮಾಡಿದ್ದಾರೆಂದು ಬಿಜೆಪಿ ಮುಖಂಡ ಕೆಂಚನಾಲ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಎಸ್.ಉಮೇಶ್ ಆರೋಪಿಸಿ, ಗೃಹ ಸಚಿವರಿಗೆ ಮತ್ತು ಶಾಸಕರಿಗೆ ತನಿಖೆಗೆ ಆಗ್ರಹಿಸಿ ಮನವಿ ನೀಡುವುದಾಗಿ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಬೆನವಳ್ಳಿ ಗ್ರಾಮದ ಯುವ ರೈತ ಬಿ.ಎಲ್.ಪ್ರವೀಣ್ ತನ್ನ ಜಮೀನಿನಲ್ಲಿ ಜಾನುವಾರುಗಳನ್ನು ಹೊಡೆದುಕೊಂಡು ಬರಲು ಹೋದ ಸಂದರ್ಭದಲ್ಲಿ ಇವರ ಜಮೀನಿನ ಪಕ್ಕದ ರೈತ ಪುಟ್ಟಪ್ಪ ಎಂಬುವರು ಕಾಡುಪ್ರಾಣಿಗಳನ್ನು ಬೇಟೆಯಾಡಲು ಬೇಲಿಯಲ್ಲಿ ಕಟ್ಟುಕೋವಿ ಅಳವಡಿಸಲಾಗಿ ಆ ಕೋವಿಯಲ್ಲಿನ ಗುಂಡು ಆಕಸ್ಮಿಕವಾಗಿ ಸ್ಫೋಟಗೊಂಡ ಪರಿಣಾಮ ಯುವ ರೈತ ಬಿ.ಎಲ್.ಪ್ರವೀಣ್ ಬಲಗಾಲು ಸಂಪೂರ್ಣವಾಗಿ ಚೂರುಚೂರುಯಾಗಿ ಕಾಲು ಕಟ್ ಮಾಡಲಾಗಿದ್ದರೂ ಕೂಡಾ ಆ ನೋವಿನಲ್ಲೂ ಸ್ಥಳೀಯ ಪಿಎಸ್‌ಐ ಗಾಯಳುವನ್ನು ಠಾಣೆಗೆ ಕರೆಯಿಸಿ ರಾಜಿ ಸಂಧಾನಕ್ಕೆ ಮುಂದಾದರೂ ಎಂದು ನೊಂದ ರೈತ ಪ್ರವೀಣ್ ಸುದ್ದಿಗೋಷ್ಟಿಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟರು.

ಒಮ್ಮೆ ಹತ್ತು ಸಾವಿರ ಹಣ ಕೊಡುತ್ತಾರೆ ತೆಗೆದುಕೊಳ್ಳಿ ಎಂದು ಹೆದರಿಸುವುದು ಅಲ್ಲದೆ ನಂತರದಲ್ಲಿ ಒಂದು ಲಕ್ಷ ಹಣ ಕೊಡಿಸುತ್ತೇನೆ ದೂರು ಹಿಂಪಡೆ ಎಂದು ಬೆದರಿಸುತ್ತಿದ್ದು ನಾನು ಒಪ್ಪದೆ ಇದ್ದಾಂಗ ನಿನಗೆ ಸರಿಯಾಗಿ ನಯಾ ಪೈಸೆ ಸಿಗದಂತೆ ಮಾಡುತ್ತೇನೆಂದು ಹೆದರಿಸಿ ಕೋವಿಯಲ್ಲಿನ ಗುಂಡು ಹಾರಿದ್ದಲ್ಲ ನೀನೆ ಮರಕ್ಕೆ ಡಿಕ್ಕಿ ಹೊಡೆದು ಕಾಲು ಮುರಿದುಕೊಂಡಿದ್ದೀಯಾ ಎಂದು ದೂರು ದಾಖಲಿಸುತ್ತೇನೆಂದು ಹೇಳಿ ರೈತ ಯುವಕನ ಕುಟುಂಬವನ್ನು ಸರ್ವನಾಶ ಮಾಡಿ ಬೀದಿಗೆ ಹಾಕಿದ್ದಾರೆಂದು ಪಿಎಸ್‌ಐ ಮತ್ತು ಇತರ ಸ್ಥಳೀಯ ರಾಜಕೀಯ ಮುಖಂಡರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕೋವಿ ಗುಂಡು ಸ್ಫೋಟಗೊಂಡ ಪರಿಣಾಮದಿಂದಾಗಿ ದಿಕ್ಕು ತೋಚದ ಸ್ಥಿತಿಯಲ್ಲಿ ಕೆಲಕಾಲ ಘಟನಾ ಸ್ಥಳದಲ್ಲಿ ವಿಶ್ರಮಿಸಿಕೊಂಡು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ನಂತರ ತನ್ನ ಮೊಬೈಲ್‌ಯನ್ನು ತಡಕಾಡಿ ಹುಡುಕಿ ತನ್ನ ಮನೆಯವರಿಗೂ ಮತ್ತು ಸ್ನೇಹಿತರನ್ನು ಸಂಪರ್ಕಿಸಿ ಹೀಗೆ ಅನಾಹುತಕ್ಕೊಳಗಾಗಿದ್ದೇನೆ ಎಂದು ತಿಳಿಸಿದಾಗ ತಕ್ಷಣ ಸ್ಥಳಕ್ಕಾಗಮಿಸಿದ ಇಬ್ಬರು ಸಹೋದ್ಯೋಗಿಗಳು ಮತ್ತು ನನ್ನ ದೊಡ್ಡಪ್ಪನ ಮಗ ಬಂದು ರಕ್ತದ ಮಡುವಿನಲ್ಲಿ ಗಾಯಗೊಂಡು ಬಿದ್ದಿದ್ದ ನನ್ನನ್ನು ಎತ್ತಿಕೊಂಡು ರಿಪ್ಪನ್‌ಪೇಟೆ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಿ ನಂತರದಲ್ಲಿ ಶಿವಮೊಗ್ಗ ಮೆಗ್ಗಾನ್ ಅಸ್ಪತ್ರೆಗೆ ಕಳುಹಿಸಿದರು ಆದರೂ ಗಾಯಾಳು ಬಳಿ ಹೇಳಿಕೆ ತಗೆದುಕೊಳ್ಳಲು ಪೊಲೀಸ್ ಇಲಾಖೆ ಬಾರದೆ ಕಟ್ಟುಕೋವಿ ಇಟ್ಟ ಆರೋಪಿ ಪರವಾಗಿ ವಕಾಲತು ವಹಿಸಿ ನನಗೆ ವಂಚಿಸಿದ್ದಾರೆ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಪಿಎಸ್‌ಐ ಮತ್ತು ಸಹಕರಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಅನ್ಯಾಯಕೊಳ್ಳಗಾದ ಯುವಕ ಬಿ.ಎಲ್ ಪ್ರವೀಣ್‌ ಮನವಿ ಮಾಡಿದ್ದಾರೆ.

ತಂದೆ ಮತ್ತು ತಮ್ಮ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ತಾಯಿ ಜೊತೆ ಸಂಸಾರದ ಹೊಣೆಯನ್ನು ಹೊತ್ತ ಈ ರೈತ ಯುವಕನಿಗೆ ಕೊನೆಗೂ ಇಂತಹ ಅವಘಡದಿಂದ ಕಾಲು ಕಳೆದುಕೊಂಡು ಮೂಲೆ ಸೇರುವ ಸ್ಥಿತಿ ಎದುರಾಗಿದೆ ಎಂದು ತನ್ನ ಅಂತರಾಳದ ನೋವನ್ನು ತೋಡಿಕೊಂಡಿದ್ದು ಹೀಗೆ ಕಷ್ಟದಲ್ಲಿರುವವರಿಗೂ ಭಗವಂತ ಪರೀಕ್ಷೆ ಮಾಡುವುದು ಹೀಗೆ ಎಂದಾಗ ಎಲ್ಲರ ಕಣ್ಣಲ್ಲಿ ನೀರು ಇಣುಕಿತು.

ಇನ್ನಾದರೂ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಮತ್ತು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ರೈತಯವಕ ಬಿ.ಎಲ್.ಪ್ರವೀಣ್‌ಗೆ ನ್ಯಾಯಕೊಡಿಸಲು ಮುಂದಾಗುವರೆ ಕಾದುನೋಡಬೇಕಾಗಿದೆ.

ಸುದ್ದಿಗೋಷ್ಟಿಯಲ್ಲಿ ಕುಷನ್‌ ದೇವರಾಜ್, ವಿಜಯ ಇನ್ನಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here