ಆರ್‌.ಎಂ. ಮಂಜುನಾಥಗೌಡರನ್ನು ಪಕ್ಷದಿಂದ ಹೊರಹಾಕುವುದು ಅನಿವಾರ್ಯವಾಗಬಹುದು: ಕಿಮ್ಮನೆ ರತ್ನಾಕರ್

0
1196

ತೀರ್ಥಹಳ್ಳಿ: ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕ್ಷೇತ್ರ ಘಟಕವನ್ನು ಕಡೆಗಣಿಸಿ ಕಾಂಗ್ರೆಸ್ ಪಕ್ಷದ ಮುಖಂಡರ ಫೋಟೋಗಳನ್ನು ಕರಪತ್ರದಲ್ಲಿ ಪ್ರಕಟಿಸಿ ಖಾಸಗಿಯಾಗಿ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಕಾಂಗ್ರೆಸಿಗರನ್ನು ಕೇಳಿಕೊಳ್ಳುವುದು, ಒತ್ತಾಯಿಸುವ ಆರ್.ಎಂ. ಮಂಜುನಾಥಗೌಡರ ಪಕ್ಷ ವಿರೋಧಿ ಚಟುವಟಿಕೆ ಎಂದು ನಾನು ಭಾವಿಸಿದ್ದೇನೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಕ್ಷಕ್ಕೆ ಸೇರಿದ ಮರು ದಿನದಿಂದ ಗುಂಪುಗಾರಿಕೆ ಪ್ರಾರಂಭ ಮಾಡಿ ಪಕ್ಷಕ್ಕಾಗಿ ಹತ್ತಾರು ವರ್ಷದಿಂದ ದುಡಿದವರಿದ್ದಾರೆ ಅವರ ಕಡೆಗಣನೆ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಜಿಲ್ಲಾ ಕಾಂಗ್ರೆಸ್ ಮತ್ತು ರಾಜ್ಯ ಕಾಂಗ್ರೆಸ್‌ ಆರ್‌.ಎಂ. ಮಂಜುನಾಥಗೌಡರನ್ನು ಪಕ್ಷದಿಂದ ಹೊರಹಾಕುವುದು ಅನಿವಾರ್ಯವಾಗಬಹುದು. ಪಕ್ಷಕ್ಕೆ ಸೇರಿ ಇನ್ನು ಐದು ತಿಂಗಳೂ ಆಗಿಲ್ಲ. ಅಷ್ಟರೊಳಗೆ ಖಾಸಗಿ ಸಭೆ, ಸಮಾರಂಭಗಳು ನಡೆಯುತ್ತಿವೆ. ಹಣ, ಶರಾಬು, ಬಿರಿಯಾನಿ, ರೌಡಿಸಂ ಮೂಲಕ ತೀರ್ಥಹಳ್ಳಿ ಕ್ಷೇತ್ರದಲ್ಲಿ ಜನಮನ್ನಣೆ ಪಡೆಯಬಹುದು ಎಂದು ಯಾವುದಾದರೂ ರಾಜಕಾರಣಿ ಭಾವಿಸಿದ್ದರೆ, ಹಣ, ಬಿರಿಯಾನಿ, ಶರಾಬು ಖಾಲಿಯಾದಂತೆ ಜನಮನ್ನಣೆಯೂ ಖಾಲಿಯಾಗುತ್ತೆ ಎನ್ನುವ ಅರಿವು ಮೂಡಿದರೆ ಯಾವುದೇ ರಾಜಕಾರಣಿಗೆ ಒಳ್ಳೆಯದೆಂದು ನನ್ನ ಭಾವನೆ.

ಮಂಡಗದ್ದೆ ಹೋಬಳಿ ಕಲ್ಲುಕೊಪ್ಪ-ಕರಕುಚ್ಚಿಯಿಂದ ತೀರ್ಥಹಳ್ಳಿವರೆಗೆ ನಡೆಸುವ ಪಾದಯಾತ್ರೆ ಮುಳುಗಡೆ ರೈತರು, ಬಗರ್‌ಹುಕುಂ ಸಾಗುವಳಿದಾರರ ಜೀವಂತ ಸಮಸ್ಯೆಗಳನ್ನು ಕಾಗೋಡು ಸಾಹೇಬ್ರು, ನಾವುಗಳು ಈಗಾಗಲೇ ಅನೇಕ ಹೋರಾಟಗಳು, ಸಭೆಗಳು ಪ್ರಯತ್ನಗಳನ್ನು ಮಾಡಿದ್ದೇವೆ. ಅವರುಗಳಿಗೆ ನ್ಯಾಯ ಕೊಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪಕ್ಷದಲ್ಲಿದ್ದು ಪಕ್ಷದ ಕ್ಷೇತ್ರ ಘಟಕವನ್ನು ದೂರಮಾಡಿ, ಪಕ್ಷದ ಪ್ರಮುಖರ ಫೋಟೋ ಹಾಕಿ, ಪಕ್ಷದ ಚಿಹ್ನೆ ಬಳಸದೇ ಮಂಜುನಾಥಗೌಡರ ಖಾಸಗಿ ಕಾರ್ಯಕ್ರಮದಂತೆ ಮಾಡಿದ್ದಾರೆ. ಅನೇಕ ವರ್ಷಗಳಿಂದ ಮಂಜುನಾಥಗೌಡರು ಮೇಲ್ಕಂಡ ಸಮಸ್ಯೆಗಳಿಂದ ಬಳಲುತ್ತಿರುವವರ ಪರವಾಗಿ ಕಳೆದ 35 ವರ್ಷ ಈ ಹೋರಾಟ ಯಾಕೆ ಮಾಡಲಿಲ್ಲ. ಸಮಯ ಇರಲಿಲ್ಲವೆ, ವಯಸ್ಸು ಇರಲಿಲ್ಲವೆ ಅಥವಾ ಸಕ್ರಿಯ ರಾಜಕೀಯದಲ್ಲಿ ಇರಲಿಲ್ಲವೆ. ಸಮಯಕ್ಕೆ ಸರಿಯಾಗಿ, ಸಂದರ್ಭಕ್ಕೆ ಸರಿಯಾಗಿ ಮಂಜುನಾಥಗೌಡರ ಅವರ ರಾಜಕೀಯ ಗುರುಗಳೆಲ್ಲ ಮುಖ್ಯಮಂತ್ರಿಗಳಾಗಿದ್ದು, ಜೆ.ಹೆಚ್. ಪಟೇಲ್, ಬಂಗಾರಪ್ಪನವರು, ಯಡಿಯೂರಪ್ಪನವರು, ಇತ್ತೀಚೆಗೆ ಒಂದು ವರ್ಷದ ಹಿಂದೆ ನೀವೆ ಜೆ.ಡಿ.ಎಸ್. ಜಿಲ್ಲಾಧ್ಯಕ್ಷರು, ನಿಮ್ಮ ಮುಖಂಡರಾದ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದು, ನಿಮ್ಮ ಮನೆ ಸುತ್ತಮುತ್ತಲಿನ ಸಮಸ್ಯೆಗಳಿಗೆ ಅವರ ಗಮನಕ್ಕೆ ಯಾಕೆ ತರಲಿಲ್ಲ. ಪಕ್ಷದ ಮುಖಂಡರಲ್ಲಿ ಗೊಂದಲ ಸೃಷ್ಟಿಸಿ, ಇಕ್ಕಟ್ಟಿನಲ್ಲಿ ಸಿಕ್ಕಿಸಿ, ಡಿ.ಸಿ.ಸಿ. ಬ್ಯಾಂಕಿನಲ್ಲಿ ಮಾಡಿದ ಹಾಗೆ ಕಾಂಗ್ರೆಸ್‌ನಲ್ಲಿ ಮಾಡದಿರುವುದು ಅವರಿಗೆ ಒಳ್ಳೆಯದು, ಪಕ್ಷಕ್ಕೂ ಒಳ್ಳೆಯದು.

ಮಂಜುನಾಥಗೌಡರ ಈ ಹೋರಾಟ ಮುಂದಿನ ವಿಧಾನಸಭೆಯ ಚುನಾಯಣೆಯಲ್ಲಿ ಯಾವುದಾದರೂ ಪಕ್ಷದ ಟಿಕೆಟ್‌ಗಾಗಿ ಎಂದು ಸಣ್ಣ ಮಗುವಿನಿಂದ ಹಿಡಿದು ಅಕ್ಷರಸ್ಥರೆಲ್ಲರಿಗೂ ಅರಿವಾಗುತ್ತೆ.

ಮಂಜುನಾಥಗೌಡರು ಪ್ರಯತ್ನ ಮುಂದುವರೆಸಲಿ ಅವರ ಹತ್ತಿರ ಹಣ ಇದೆ, ಬಂಗಾರ ಇದೆ, ಆಸ್ತಿ ಇದೆ. ನನ್ನದೊಂದು ವಿನಂತಿ ಕರ್ನಾಟಕ ಸಹಕಾರಿ ಇಲಾಖೆ ನಿಮ್ಮ ಮೇಲೆ ಹೊರಡಿಸಿದ ಆಪಾದನೆಯಿಂದ ಹೊರಬನ್ನಿ, ಸರ್ಕಾರಕ್ಕೆ ಕಟ್ಟಬೇಕಾದ 122 ಕೋಟಿ ಹಣ ಕಟ್ಟಿ, ಆ ಮೇಲೆ ಯಾವ ಪಕ್ಷದಲ್ಲಿ ಅವಕಾಶ ಸಿಗುತ್ತೆ ಅಲ್ಲಿಂದ ನಿಲ್ಲಿ, ನಿಮಗೆ ಎಲ್ಲಾ ಪಕ್ಷದ ಸಿದ್ಧಾಂತ, ಎಲ್ಲಾ ಪಕ್ಷದ ಮುಖಂಡರ ಸ್ನೇಹ, ಯಾವ ಪಕ್ಷಕ್ಕೂ ಹೋದರೂ ಆ ಪಕ್ಷದ ಟಿಕೆಟ್ ಕೇಳುವ ಆರ್ಥಿಕ ಸಾಮರ್ಥ್ಯ ಇದೆ. ದೇವರು ಮತ್ತು ಡಿ.ಸಿ.ಸಿ. ಬ್ಯಾಂಕ್ ಆ ಸಾಮರ್ಥ್ಯ ಒದಗಿಸಿದೆ. ಆದರೆ ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಬೇಡಿ. ಈ ಹಿಂದೆ ಪಕ್ಷಕ್ಕೆ ಬಂದು ಮೋಸ ಮಾಡಿ ಚುನಾವಣಾ ಸಂದರ್ಭದಲ್ಲಿ ಜೆ.ಡಿ.ಎಸ್.ಗೆ ಹೋಗಿದ್ದು ಸಾಕು, ಮೋಸಗಾರಿಕೆ ಇಲ್ಲಿಗೆ ನಿಲ್ಲಿಸಿ ಎಂದು ವಿನಂತಿ.

ಮುಂದೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ಬರುತ್ತೆ, ತುಂಬಾ ಅರ್ಹ ಆಕಾಂಕ್ಷಿಗಳಿದ್ದಾರೆ. ಅವರುಗಳಿಗೆ ನೀವು ಕರೆದ ಸಭೆಗೆ ಬನ್ನಿ ಇಲ್ಲದೇ ಇದ್ದರೆ ಟಿಕೆಟ್ ತಪ್ಪಿಸ್ತೀನಿ, ಇಲ್ಲದೆ ಇದ್ದರೆ ಸೋಲಿಸ್ತೀನಿ ಎಂದು ಬೆದರಿಕೆ ಹಾಕುತ್ತಿದ್ದೀರಿ ಎಂದು ಅನೇಕ ಮಂದಿ ನನ್ನ ಬಳಿ ತಿಳಿಸಿದ್ದಾರೆ. ಅನೇಕ ವರ್ಷಗಳಿಂದ ನಿಮ್ಮ ಈ ರೀತಿಯ ನಡವಳಿಕೆಯ ಅರಿವು ನಮಗಿದೆ ಎಂದು ನಿಮಗೆ ತಿಳಿದಿರಲಿ‌.

ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾದ ಗೌರವಾನ್ವಿತ ಡಿ.ಕೆ. ಶಿವಕುಮಾರ್‌ರವರು ಅ. 02 ರಿಂದ ಗಾಂಧೀ ಜಯಂತಿಯ ಅಂಗವಾಗಿ ಗಾಂಧಿಚಿಂತನೆಯ ‘ಗ್ರಾಮ ಸ್ವರಾಜ್’ ಕಾರ್ಯಕ್ರಮವನ್ನು ಮಾಡಲು ನಿರ್ದೇಶಿಸಿದ್ದಾರೆ. ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ “Tolstoy Farm” ನಲ್ಲಿ ನಿಯಮಗಳ ವಿರುದ್ಧ ಕಸ್ತೂರಬಾ ಕಪಾಟಿನಲ್ಲಿ ತಮ್ಮ ತಂದೆ-ತಾಯಿ ನೀಡಿದ ಹಣವನ್ನು 20-30 ರೂ.ಗಳನ್ನು ನಿಯಮದ ವಿರುದ್ಧ ಇಟ್ಟಿದ್ದರು ಎಂದು ತಿಳಿದ ಗಾಂಧಿ ಸಂಜೆ ಪ್ರಾರ್ಥನಾ ಸಭೆಯಲ್ಲಿ ನಮ್ಮಿಂದ ತಪ್ಪಾಗಿದೆ. ನಾವು ನಿಯಮಕ್ಕೆ ವಿರುದ್ಧವಾಗಿ ನಡೆದಿದ್ದೇವೆ ಆ ಕಾರಣಕ್ಕೆ ಶಿಕ್ಷೆ ನೀಡಬೇಕು, ಆ ಕಾರಣ ಗಾಂಧೀಜಿ ಶಿಕ್ಷೆಯನ್ನು ಘೋಷಿಸುತ್ತಾರೆ. ತಾನು ಮೂರು ದಿನ ಉಪವಾಸ ಮಾಡುತ್ತೇನೆ ಎಂದು. ನಿಮ್ಮೊಂದಿಗೆ ಕುಳಿತು (ಡಿ.ಸಿ.ಸಿ. ಬ್ಯಾಂಕ್ ಹಗರಣ ಕಟ್ಟಿಕೊಂಡು) ಗಾಂಧೀಜಿ ಗ್ರಾಮ ಸ್ವರಾಜ್ ಬಗೆಗೆ ಗಾಂಧೀಜಿ ಚಿಂತನೆಗಳನ್ನು ಯಾರಿಗೆ ಹೇಳೋದು ಇವುಗಳು ನಿಮ್ಮ ಗಮನದಿರಲಿ ಎಂದು ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here