ಆಸ್ಪತ್ರೆ ಮೇಲ್ದರ್ಜೆಗಾಗಿ ಬಾಳೆಹೊನ್ನೂರು ಬಂದ್ ಯಶಸ್ವಿ

0
109

ಎನ್.ಆರ್.ಪುರ: ಬಾಳೆಹೊನ್ನೂರು ಪಟ್ಟಣದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವು ಸುಮಾರು 20 ವರ್ಷಗಳಿಂದಲೂ ಮೇಲ್ದರ್ಜೆಗೇರದೆ ಯಥಾಸ್ಥಿತಿಯಲ್ಲಿದ್ದು, ಸೋಮವಾರ ಆಸ್ಪತ್ರೆ ಮೇಲ್ದರ್ಜೆ ಹೋರಾಟ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಹಳ್ಳಿ ಹಳ್ಳಿಗಳಿಂದ ಬಂದ ಸಾವಿರಾರು ಜನರು ಬೆಳಗ್ಗೆ ಹತ್ತು ಗಂಟೆಗೆ ಪಟ್ಟಣದಲ್ಲಿ ಜಮಾಯಿಸಿ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಪಟ್ಟಣದ ವಿದ್ಯಾಗಣಪತಿ ಸಮುದಾಯ ಭವನದಿಂದ ಹೊರಟ ಮೆರವಣಿಗೆ ಸರಕಾರಿ ಆಸ್ಪತ್ರೆಯವರೆಗೆ ಸಂಬಂಧಪಟ್ಟ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಆಸ್ಪತ್ರೆಗೆ ಸ್ಥಳ ದಾನ ಮಾಡಿದ ದಿ. ದ್ಯಾವೇಗೌಡರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಮೆರವಣಿಗೆಯು ಇಲ್ಲಿನ ಜೇಸಿ ವೃತ್ತದಲ್ಲಿ ಸಮಾವೇಶಗೊಂಡಿತು.

ಜಾಹಿರಾತು

LEAVE A REPLY

Please enter your comment!
Please enter your name here