ಇಂದಿನಿಂದ ಜೂ. 6 ರವರೆಗೆ ಇತಿಹಾಸ ಪ್ರಸಿದ್ಧ ಸಾಲಗೇರಿಯ ಉಮಾಮಹೇಶ್ವರ ದೇವರ ಪುನರ್ ಪ್ರತಿಷ್ಟಾಪನೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮ

0
420

ಹೊಸನಗರ: ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲಗೇರಿಯ ಇತಿಹಾಸ ಪ್ರಸಿದ್ಧ ಶಿಲಾಮಯ ಶ್ರೀ ಉಮಾಮಹೇಶ್ವರ ದೇವಸ್ಥಾನದ ಶ್ರೀ ಉಮಾಮಹೇಶ್ವರ ದೇವರ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಇಂದಿನಿಂದ ಜೂನ್ 6 ರ ಸೋಮವಾರದವರೆಗೂ ಧಾರ್ಮಿಕ ವಿಧಿ ವಿಧಾನಗಳು ಸಂಭ್ರಮದಿಂದ ನಡೆಯಲಿದೆ.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇವರಿಂದ ಜೀರ್ಣೋದ್ಧಾರಗೊಂಡ ಸಂರಕ್ಷಣಾ ಕಾಮಗಾರಿ ಅನಾವರಣ ಹಾಗೂ ಗೋಕರ್ಣ ಮಂಡಲಾಧೀಶ ಶ್ರೀರಾಮಚಂದ್ರಾಪುರಮಠದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಶ್ರೀ ಉಮಾಮಹೇಶ್ವರ ದೇವರ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯಲ್ಲಿದ್ದು, ಧಾರ್ಮಿಕ ಸಭೆಯಲ್ಲಿ ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು, ಸಂಸದ ಬಿ.ವೈ.ರಾಘವೇಂದ್ರ, ಗೃಹಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಬಿ.ಕೆ.ಸಂಗಮೇಶ್ವರ, ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡರು, ಆಯನೂರು ಮಂಜುನಾಥ್, ಡಿ.ಎಸ್.ಅರುಣ್, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಮೈಸೂರಿನ ಪುರಾತತ್ವ ಸಂರಕ್ಷಣಾ ಇಂಜಿನಿಯರ್ ಎಸ್.ಎಂ.ಪೂಜಾರಿ, ಸಹಾಯಕ ಇಂಜಿನಿಯರ್ ಶಿವಾನಂದ ಎಸ್ ಕಡನೀಕರ್, ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ನಾಗರಾಜ್, ಉಪಾಧ್ಯಕ್ಷೆ ಚಂದ್ರಕಲಾ ಶ್ರೀನಿವಾಸ್‌ ಪಾಲ್ಗೊಳ್ಳಲಿದ್ದಾರೆ.

ಶುಭಕೃತ ಸಂವತ್ಸರದ ವೈಶಾಖ ಬಹುಳ ಚತುರ್ದಶಿಯಿಂದ ಜೇಷ್ಠ ಶುದ್ಧ ಸಪ್ತಮಿವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಹನಿಯ ರವಿ ಕೋರಿದ್ದಾರೆ.

ಜೂನ್ 3ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮೂಲೆಗದ್ದೆ ಶ್ರೀ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಗಳು ಧರ್ಮ ಸಭೆ ನಡೆಸಲಿದ್ದು ಜೂನ್ 5ರ ಭಾನುವಾರ ಬೆಳಿಗ್ಗೆ ಶ್ರೀರಾಮಚಂದ್ರಾಪುರಮಠದ ಶ್ರೀಮದ್ ಜಗದ್ಗುರು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಬ್ರಹ್ಮಕಲಶಾಭಿಷೇಕ ಕಲಾನ್ಯಾಸ ಅಂಕುರಾರ್ಪಣೆ ಮಹಾಪೂಜೆ ನಂತರ ಆಶೀರ್ವಚನ ನೀಡಲಿದ್ದಾರೆ.

ಜೂನ್ 6ರ ಸೋಮವಾರ ಬೆಳಗ್ಗೆ ಮಹಾಪೂರ್ಣಾಹುತಿ ವಾರುಣ ಹವನ, ಯಾತ್ರಾ ಹವನ, ಅವಭೃತ ಸ್ನಾನ, ವಿಪ್ರ ಆಶೀರ್ವಾದ, ಅಂಕುರ ಪ್ರಸಾದ ವಿತರಣೆ ನಡೆಯಲಿದೆ.

ಪುರಾತನವಾದ ಐತಿಹಾಸಿಕ ಮಹತ್ವವುಳ್ಳ ಸಾಲಗೇರಿ ಗ್ರಾಮದ ಶ್ರೀ ಉಮಾಮಹೇಶ್ವರ ದೇವಸ್ಥಾನ ಶರಾವತಿ ನದಿಯ ತಟದಲ್ಲಿದೆ. ವಿಶಿಷ್ಟವಾದ ಶಿಲ್ಪಕಲೆಯಿಂದ ಕೂಡಿದ ದೇವಸ್ಥಾನ ವೈಭವದಿಂದ ಮೆರೆದ ಬಗ್ಗೆ ಇತಿಹಾಸವಿದೆ.

ಗ್ರಾಮಸ್ಥರ ಸಹಕಾರದಿಂದ ಈ ಹಿಂದೆ ಪುನರ್ ಪ್ರತಿಷ್ಠಾಪನೆಯಾಗಿ ಶ್ರೀರಾಮಚಂದ್ರಾಪುರ ಮಠದ ನಿರ್ವಹಣೆಯಲ್ಲಿ ಪೂಜಾ ವಿಧಿ ವಿಧಾನ ನೆರವೇರುತಲಿತ್ತು.

ಜಾಹಿರಾತು

LEAVE A REPLY

Please enter your comment!
Please enter your name here