ಚಿಕ್ಕಮಗಳೂರು: ಇಂದಿನಿಂದ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಇಲ್ಲದಿದ್ದರೆ ಮಾರ್ಸೆಲ್ ಗಳು 100 ರೂ ದಂಡದ ಜೊತೆಗೆ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಎಚ್ಚರಿಸಿದ್ದಾರೆ.
ನಗರದ ಕೋವಿಡ್ ವಾರ್ ರೂಂ ನಲ್ಲಿ ಜಿಲ್ಲೆಯ ಕೊರೊನಾ ಅಂಕಿ ಅಂಶಗಳು ವೀಕ್ಷಣೆ ಮಾಡಿದ ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಜಿಲ್ಲೆಯ ಕೊರೊನಾ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಪಾಲಿಸಬೇಕು.
ಇಂದಿನಿಂದ ಮಾರ್ಸೆಲ್ ತಂಡ ಜನ ಸಾಂದ್ರತೆಗೆ ತಕ್ಕಂತೆ ರಚನೆಯಾಗಿದ್ದು, ನಗರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತದೆ ಎಂದು ಹೇಳಿದರು.