ಇತಿಹಾಸ ನಿರ್ನಾಮ ಮಾಡುವ ಪ್ರಯತ್ನ ಮಾಡಬಾರದು ; ಶ್ರೀಗಳು

0
208

ಶಿಕಾರಿಪುರ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ವತಿಯಿಂದ ಗುರುವಾರದಂದು ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರರ ಭಾವಚಿತ್ರದೊಂದಿಗೆ ಡೊಳ್ಳು ಕುಣಿತ ವೀರಗಾಸೆ ನೃತ್ಯ ಕಂಸಾಳೆ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳಿಂದ ಅದ್ದೂರಿ ಮೆರವಣಿಗೆ.

ಈ ಮೆರವಣಿಗೆಗೆ ವೃಷಭ ಸ್ವರೂಪಿ ಶ್ರೀ,ಷ, ಬ್ರ ಮೂಕಪ್ಪ ಶಿವಯೋಗಿ ಶಿವಾಚಾರ್ಯರು, ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿ ಶ್ರೀ,ಮ ನಿ,ಶ್ರೀ ಗುರು ಬಸವ ಮಹಾಸ್ವಾಮಿಗಳು, ಪಟ್ಟಣದ ವಿರಕ್ತಮಠದ ಶ್ರೀ,ಮ ನಿ ಶ್ರೀ ಚನ್ನಬಸವ ಸ್ವಾಮೀಜಿಗಳು, ಬಸವಾಶ್ರಮದ ಮಾತೆ ಶರಣಾಂಬಿಕೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಎನ್ ವಿ ಈರೇಶ್, ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ರವರಿಂದ ಪಟ್ಟಣದ ಅಕ್ಕಮಹಾದೇವಿ ವೃತ್ತದಲ್ಲಿ ಚಾಲನೆ ನೀಡಲಾಯಿತು.

ಮೆರವಣಿಗೆಗೆ ಚಾಲನೆ ನೀಡುವ ಮುನ್ನ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀ ಮೂಕಪ್ಪ ಶಿವಯೋಗಿ ಶಿವಾಚಾರ್ಯರು, ಯಾವುದೇ ಒಬ್ಬ ವ್ಯಕ್ತಿಯು ಇತಿಹಾಸವನ್ನು ನಿರ್ಮಿಸಬೇಕೇ ಹೊರತು ಇತಿಹಾಸವನ್ನು ನಿರ್ನಾಮ ಮಾಡುವ ಪ್ರಯತ್ನ ಮಾಡಬಾರದು. ಈಗಿನ ವಾಸ್ತವ ಸಂಗತಿಯಲ್ಲಿ ದುಷ್ಟ ಶಕ್ತಿಯ ದುಷ್ಟ ಯೋಚನೆಗಳನ್ನು ಮತ್ತು ಹಲವು ರೀತಿಯ ದುರಂತ ಘಟನೆಗಳನ್ನ ನಿರ್ನಾಮ ಮಾಡಬೇಕಿದೆ, ಅದೇ ರೀತಿಯಲ್ಲಿ ಹಿಂದೆ ಸಾಮಾಜಿಕ ಕಳಕಳಿಯನ್ನು ಹೊತ್ತು ಮನುಕುಲದ ಒಳಿತಿಗಾಗಿ ಶ್ರಮಿಸಿದ ಮಹಾನ್ ಚೇತನವೆಂದರೆ ಅದು ಜಗಜ್ಯೋತಿ ಬಸವೇಶ್ವರರು ಇಂತಹ ಶರಣರು ದಾರ್ಶನಿಕರು ತೋರಿದ ಮಾರ್ಗವನ್ನು ಪಾಲಿಸಬೇಕಲ್ಲದೇ, ಅಂತಹಾ ಮಹಾನ್ ಪುರುಷರ ಆದರ್ಶಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಬಸವಣ್ಣನವರು ಎಂದರೆ ಒಂದು ಕಾಲದಲ್ಲಿ ಬೇರೆ ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತಿತ್ತು. ಆದರೆ 1913 ನೇ ಇಸವಿಯಲ್ಲಿ ಕರ್ನಾಟಕದ ಗಾಂಧಿ ಎಂದೇ ಪ್ರಸಿದ್ಧಿ ಪಡೆದ ಅವೈಕರ್ ಮಂಜಪ್ಪನವರು ಮೊಟ್ಟ ಮೊದಲ ಬಾರಿಗೆ ಜಾತಿ ಭೇದವನ್ನು ನಿರ್ನಾಮ ಮಾಡಿ, ಎಲ್ಲರಲ್ಲೂ ಪ್ರೀತಿಯನ್ನ ನಿರ್ಮಾಣ ಮಾಡುವುದರ ಮೂಲಕ ಹೆಣ್ಣು ಗಂಡು ಎಂಬ ಭೇದ ತೊರೆದು ಎಲ್ಲರೂ ಒಗ್ಗಟ್ಟಿನಿಂದ ಬಸವೇಶ್ವರರ ಜಯಂತ್ಯೋತ್ಸವಕ್ಕೆ ಚಾಲನೆ ನೀಡಿದರು.

ಬಸವಣ್ಣನವರ ವಚನಗಳು ಎಂದರೆ ನಮ್ಮ ಗುಡಿ ಗೋಪುರಗಳಿಗೆ ಸಂವಿಧಾನವಿದ್ದಂತೆ. ಸಂವಿಧಾನಕ್ಕೆ ಹಾಗೂ ಕಾನೂನುಗಳಿಗೆ ಗೌರವವನ್ನು ಕೊಟ್ಟಂತೆ, ಬಸವೇಶ್ವರರ ವಚನಗಳ ಆಧಾರದ ಮೇಲೆ ‌ಸಂವಿಧಾನ ರಚನೆಯಾಗಿದೆ ಎಂದಾದರೆ ವಚನಗಳಿಗೂ ಗೌರವ ಕೊಡಬೇಕಿದೆ. ವಿಶ್ವದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರಂಥಾಲಯವಿದೆ ಎಂದರೆ ಅದು ಲಂಡನ್ ನಲ್ಲಿ, ಆ ಲಂಡನ್ ನಲ್ಲಿ ಇರುವಂತಹ ಪುಸ್ತಕಗಳನ್ನ ಓದಿರುವಂಥವರು ವಿಶ್ವದಲ್ಲಿ ಐದು ಜನ ಮಾತ್ರ. ಈ ಐದು ಜನರಲ್ಲಿ ಮೊದಲು ಓದಿದವರು ಎಂದರೆ ಅದು ನಮ್ಮ ದೇಶದ ಹೆಮ್ಮೆಯ ಪುತ್ರ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರು ಮಾತ್ರ. ಅಂಬೇಡ್ಕರ್ರವರು ಲಂಡನ್ನಿನ ಗ್ರಂಥಾಲಯದಲ್ಲಿ ಬಸವೇಶ್ವರರ ವಚನಗಳ ಪುಸ್ತಕಗಳನ್ನು ಓದಿ ಅದರ ಮೂಲಕ ನಮ್ಮ ದೇಶದ ಸಂವಿಧಾನವನ್ನ ರಚಿಸಿದ್ದಾರೆ. ಕವಿ ಕುವೆಂಪು ರವರು ಸಹ ತಮ್ಮ ಒಂದು ಪುಸ್ತಕದಲ್ಲಿ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಉಲ್ಲೇಖಿಸಿ ಬರೆದಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ, ಜಗಜ್ಯೋತಿ ಬಸವೇಶ್ವರರು ಕೇವಲ ಒಂದು ಜಾತಿಗೆ ಸೀಮಿತವಾದವರಲ್ಲ. ಎಲ್ಲಾ ಜಾತಿಯ ಎಲ್ಲಾ ವರ್ಗದ ಜನರಿಗೆ ಬೇಕಾದವರಾಗಿದ್ದಾರಲ್ಲದೇ, ಅನೇಕರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಬಸವಣ್ಣನವರು ದೇಶ ವಿದೇಶಗಳಲ್ಲಿ ಸಮಾನತೆಯ ಬಗ್ಗೆ ಹೋರಾಟ ನಡೆಸಿದವರು. ಇಂತಹ ಮಹಾತ್ಮರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಎಲ್ಲಾ ಸಮಾಜದವರಿಗೆ ಸಮಾನವಾಗಿ ಕಂಡು ಎಲ್ಲರಿಗೂ ನ್ಯಾಯ ಒದಗಿಸುವಲ್ಲಿ ‌ಫಲರಾಗಿದ್ದಾರೆ. ಹನ್ನೆರಡನೇ ಶತಮಾನದ ಶರಣರ ವಚನಗಳನ್ನು ಅಧ್ಯಯನ ಮಾಡಿದ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಲಂಡನ್ ನಲ್ಲಿ ಬಸವಣ್ಣನವರ ಪ್ರತಿಮೆಯನ್ನು ಅನಾವರಣ ಮಾಡಿದ್ದಾರೆ ಎಂದರೆ ಬಸವಣ್ಣನವರ ತತ್ವ ಸಿದ್ದಾಂತ ವಚನಗಳು ಎಷ್ಟರ ಮಟ್ಟಿಗೆ ಪ್ರಚಲಿತವಾಗಿದೆ ಎಂಬುದು ಜನಸಾಮಾನ್ಯರು ಅರಿಯಬೇಕಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಚನ್ನಗಿರಿ ತಾಲ್ಲೂಕಿನ ಪಾಂಡೋಮಣಿಯ ಶ್ರೀ, ಮ, ನಿ, ಪ್ರ, ಗುರು ಬಸವ ಮಹಾಸ್ವಾಮಿಗಳು, ವಿರಕ್ತಮಠದ ಶ್ರೀ, ಮ, ನಿ, ಪ್ರ, ಚನ್ನಬಸವ ಸ್ವಾಮೀಜಿಗಳು, ತೊಗರ್ಸಿಯ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಬಸವಾಶ್ರಮದ ಮಾತೆ ಶರಣಾಂಬಿಕೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಎನ್ ವಿ ಈರೇಶ್, ಪುರಸಭಾ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ ಸೇರಿದಂತೆ ಅನೇಕರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here