ಇತಿಹಾಸ ಪರಂಪರೆ ಹೊಂದಿರುವ ಭಾಷೆಯೇ ನಮ್ಮ ಕನ್ನಡ ಭಾಷೆ: ಬಿ.ಜಿ. ಚಂದ್ರಮೌಳಿ

0
146

ಹೊಸನಗರ: ಇಡೀ ವಿಶ್ವದಲ್ಲಿರುವ ನಮ್ಮ ಕನ್ನಡ ಜನರು ಇಂದು ಹಬ್ಬವನ್ನಾಗಿ ಆಚರಿಸುತ್ತಿದ್ದು ನಮ್ಮ ನಾಡಿನ ಕಲೆ ಸಾಂಸ್ಕೃತೀಕ ಪರಂಪರೆ ಇಂದಿಗೂ ಜೀವಂತವಾಗಿದ್ದು ಅದನ್ನು ಅಂದಿನಿಂದ ಇಂದಿನ ಜನಾಂಗವೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಇಂತಹ ಕನ್ನಡ ನಾಡಿನಲ್ಲಿ ನಾವುಗಳು ಹುಟ್ಟಿರುವುದೇ ಒಂದು ಹೆಮ್ಮೆಯ ವಿಷಯವಾಗೆ ಎಂದು ಹೊಸನಗರ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕಾಂಗ್ರೆಸ್ ಪಕ್ಷದ ಮುಖಂಡ ಚಂದ್ರಮೌಳಿಯವರು ಹೇಳಿದರು.

ತಾಲ್ಲೂಕಿನ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯಾದಾಯಿನಿ ಎಜುಕೇಶನ್ ಟ್ರಸ್ಟ್ ಬ್ಲಾಸಂ ಅಕಾಡಮಿ ಆಂಗ್ಲ ಮಾದ್ಯಮ ಶಾಲೆಯ ಆವರಣದಲ್ಲಿ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಕನ್ನಡಾಂಬೆಗೆ ಫೋಟೋಗೆ ಪೂಜೆ ಸಲ್ಲಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಲೆಯ ನಿರ್ದೆಶಕರಾದ ದಿವಾಕರ್ ಶೆಟ್ಟಿ, ಬಿ.ಎಸ್ ಸುರೇಶ್, ಗುರುರಾಜ್ ಭಟ್, ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here