ಇತ್ತೀಚಿನ ದಿನದಲ್ಲಿ ಭ್ರಷ್ಠಾಚಾರ ಪ್ರಕರಣಗಳು ಹೆಚ್ಚಳವಾಗುತ್ತಿದೆ ; ನ್ಯಾಯಾಧೀಶ ರವಿಕುಮಾರ್ ಕೆ

0
414

ಹೊಸನಗರ: ಭಾರತ ದೇಶದಲ್ಲಿ ಇತ್ತೀಚಿನ ದಿನದಲ್ಲಿ ಲಂಚ ಪಡೆಯುವ ಅಧಿಕಾರಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ಸಾಮಾನ್ಯ ಸರ್ಕಾರಿ ಕೆಲಸ ಮಾಡುವ ಅಟೆಂಡರ್ ಮನೆಯಲ್ಲಿ ಕೋಟಿಗಟ್ಟಲೆ ಅಕ್ರಮ ಹಣ, ಚಿನ್ನ ದೊರೆಯುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿದೆ ಎಂದು ಹೊಸನಗರ ನ್ಯಾಯಾಲಯದ ಪ್ರಧಾನ ವ್ಯವಹಾರ ನ್ಯಾಯಾಧೀಶ ರವಿಕುಮಾರ್ ಕೆ ಯವರು ಹೇಳಿದರು.

ತಾಲ್ಲೂಕು ಪಂಚಾಯಿತಿಯ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ, ತಾಲ್ಲೂಕು ಪಂಚಾಯಿತಿ ಮತ್ತು ಶಿವಮೊಗ್ಗ ಲೋಕಯುಕ್ತ ಇವರ ಆಶ್ರಯದಲ್ಲಿ ಸ್ವಾತಂತ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಭ್ರಷ್ಠಾಚಾರ ಕಾಯ್ದೆಯ ಬಗ್ಗೆ ಮಾಹಿತಿ ಶಿಬಿರವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭ್ರಷ್ಠಾಚಾರ ಎಲ್ಲಿಂದ ಪ್ರಾರಂಭವಾಗುತ್ತದೆ ಎಂದರೆ ಖಾಸಗಿ ಶಾಲೆಯಿಂದ ಪ್ರಾರಂಭವಾಗುತ್ತದೆ ತಂದೆ-ತಾಯಿಗಳು ಮಕ್ಕಳನ್ನು ಮಾಕ್ಸ್ ಮೀಶನ್‌ರಾಗಿ ಮಾಡುತ್ತಿದ್ದು ಪ್ರತಿಯೊಬ್ಬರು 90ಕ್ಕಿಂತ ಹೆಚ್ಚು ಅಂಕ ಬರಬೇಕು ಎಂಬ ಕಾರಣಕ್ಕೆ ಖಾಸಗಿ ಶಾಲೆಗಳಲ್ಲಿ ಓದಿಸಲು ಪ್ರಾರಂಭಿಸುತ್ತಾರೆ ಖಾಸಗಿ ಶಾಲೆಯವರು ಒಬ್ಬ ವಿದ್ಯಾರ್ಥಿಯ ಓದಿಗೆ ಲಕ್ಷಗಟ್ಟಲೇ ಸುಲಿಗೆ ಮಾಡುತ್ತಾನೆ. ಲಕ್ಷಗಟ್ಟಲೇ ಹಣ ಸಂಗ್ರಹಿಸಲು ಒಬ್ಬ ಸಾಮಾನ್ಯ ಸೌಕರನಿಂದ ಸಾಧ್ಯವಿಲ್ಲ ಅದಕ್ಕಾಗಿ ಕಛೇರಿಗೆ ಬರುವ ಸಾರ್ವಜನಿಕರಿಂದ ಹಣ ಪಡೆದು ಭ್ರಷ್ಟಾಚಾರಿಯಾಗುತ್ತಾರೆ. ಅದರ ಜೊತೆಗೆ ಓದಲು ಖರ್ಚು ಮಾಡಿದ ಹಣವನ್ನು ಸಂಗ್ರಹಿಸಲು ಹಾಗೂ ಸರ್ಕಾರಿ ಕೆಲಸಕ್ಕೆ ಸೇರಲು ಖರ್ಚು ಮಾಡಿದ ಹಣವನ್ನು ದುಡಿಯಲು ಮಗನು ಭ್ರಷ್ಠಾಚಾರಿಯಾಗಿ ಸರ್ಕಾರಿ ಕೆಲಸಕ್ಕೆ ಸೇರುವುದರ ಜೊತೆಗೆ ಸಾಮಾನ್ಯ ಸಾರ್ವಜನಿಕರ ಕೆಲಸವನ್ನು ದುಡ್ಡು ನೀಡದೇ ಕೆಲಸ ಮಾಡುವುದಿಲ್ಲ ಇದರಿಂದ ಭ್ರಷ್ಠಾಚಾರ ನಮ್ಮ ದೇಶದಲ್ಲಿ ಬೆಳೆಯುತ್ತಿದೆ ಇದನ್ನು ತಡೆಯುವ ಉದ್ದೇಶದಿಂದ 1984ರಲ್ಲಿ ಭ್ರಷ್ಠಾಚಾರ ನಿರ್ಮೂಲನೆ ಕಾಯ್ದೆ ಜಾರಿಗೆ ತರಲಾಗಿದ್ದು ಯಾವುದೇ ಅಧಿಕಾರಿ ಸಾರ್ವಜನಿಕರ ಕೆಲಸ ಮಾಡಿಕೊಡಲು ತೊಂದರೆ ನೀಡಿದರೇ ತಕ್ಷಣ ಲೋಕಯುಕ್ತ ಅಧಿಕಾರಗಳಿಗೆ ತಿಳಿಸುವುದರ ಜೊತೆ ಈ ನಮ್ಮ ಭಾರತ ದೇಶವನ್ನು ಭ್ರಷ್ಠಾಚಾರ ಮುಕ್ತ ದೇಶವನ್ನಾಗಿ ಮಾಡಲು ಕೈಜೋಡಿಸೋಣ ಎಂದರು.

ಶಿವಮೊಗ್ಗದ ಲೋಕಯುಕ್ತ ಡಿವೈಎಸ್‌ಪಿ ಎನ್ ಮೃತ್ಯುಂಜಯರವರು ಮಾತನಾಡಿ, 1984ರಲ್ಲಿ ಜಾರಿಗೆ ತಂದಿರುವ ಭ್ರಷ್ಠಾಚಾರ ನಿರ್ಮೂಲನ ಲೋಕಯುಕ್ತ ಕಾಯ್ದೆಯನ್ನು ಸಾರ್ವಜನಿಕರು ತಿಳಿದುಕೊಳ್ಳುವುದರ ಜೊತೆಗೆ ಎಲ್ಲ ಸರ್ಕಾರಿ ನೌಕರರು ತಿಳಿದುಕೊಂಡಿರಬೇಕು ಈ ಕಾಯ್ದೆಯಲ್ಲಿ 26ಸೆಕ್ಷನ್‌ಗಳಿದ್ದು ಪ್ರತಿಯೊಬ್ಬರು ಓದಿ ಸಾರ್ವಜನಿಕರಿಗೆ ತಿಳಿಸುವುದರ ಜೊತೆಗೆ ಸರ್ಕಾರಿ ಕೆಲಸದಲ್ಲಿರುವ ನೌಕರ ವರ್ಗ ಒಂದು ತಪ್ಪು ಮಾಡಿದರೆ ಜೀವನ ಪರಿಯಂತ ಚಿಂತಿಸಬೇಕು. ನೀವು ಸಾಮಾನ್ಯ ಜನರಂತೆ ಸಾರ್ವಜನಿಕರ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿ ಮುಂದಿನ ದಿನಗಳು ಸಂತೋಷವಾಗಿ ಕಳೆಯಬಹುದು ಇಲ್ಲವಾದರೆ ಇಂದು ಮಾಡಿದ ತಪ್ಪು ಮುಂದಿನ ದಿನದಲ್ಲಿ ನಿಮಗೆ ಮುಳ್ಳಾಗುತ್ತದೆ ಎಂದು ಸರ್ಕಾರಿ ನೌಕರರಿಗೆ ಎಚ್ಚರಿಕೆ ನೀಡಿದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಸಿ ಯವರು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ತಾಲ್ಲೂಕು ಕಛೇರಿಯ ಗ್ರೇಡ್ 2 ತಹಶೀಲ್ದಾರ್ ರಾಕೇಶ್, ಸಬ್ಇನ್ಸ್‌ಪೆಕ್ಟರ್ ನೀರರಾಜ್ ಬಿ ನರಲಾರ, ವಕೀಲರ ಸಂಘದ ಅಧ್ಯಕ್ಷರಾದ ವಾಲೆಮನೆ ಶಿವಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಲೋಕ ಅದಾಲತ್ ಗುರುರಾಜ್, ರೇಖಾ ಹಾಗೂ ಹೊಸನಗರ ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here