ಇದೇ 28ರಂದು ಕಾಫಿ ಕೃಷಿ ಒತ್ತುವರಿ ಸಮಸ್ಯೆ ಸಮಾವೇಶದಲ್ಲಿ ಕಂದಾಯ ಸಚಿವರು ಭಾಗಿ

0
114

ಚಿಕ್ಕಮಗಳೂರು: ಕಾಫಿ ಬೆಳೆಗಾರರ ಅನೇಕ ದಶಕಗಳ ಬೇಡಿಕೆಯಾದ ಕೃಷಿ ಉದ್ದೇಶಕ್ಕೆ ಬಳಸಿರುವ ಕಂದಾಯ ಭೂಮಿ ಒತ್ತುವರಿಯನ್ನು ಗುತ್ತಿಗೆ ನೀಡಬೇಕೆಂಬ ಬೇಡಿಕೆ ಸಂಬಂಧ ಚರ್ಚಿಸಲು ಇದೇ ತಿಂಗಳ 28 ರಂದು ಚಿಕ್ಕಮಗಳೂರಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 11 ಗಂಟೆಗೆ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಇತರ ಸಂಘಟನೆಗಳ ಆಶ್ರಯದಲ್ಲಿ ನಡೆಯುವ ಸಮಾವೇಶದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಸೇರಿದಂತೆ ಕಾಫಿ ಬೆಳೆಯುವ ಪ್ರದೇಶದ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ಗ್ರೋವರ್ಸ್ ಫೆಡರೇಷನ್ ಅಧ್ಯಕ್ಷ ಎಚ್. ಟಿ. ಮೋಹನ್ ಕುಮಾರ್ ತಿಳಿಸಿದ್ದಾರೆ.

ಒತ್ತುವರಿ ಸಮಸ್ಯೆ ಪರಿಹಾರಕ್ಕೆ ಪೂರಕವಾದ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಈ ಸಮಾವೇಶ ನಡೆಯಲಿದ್ದು ಸರಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಇರುವುದಾಗಿ ಹೇಳಿದ್ದಾರೆ.

ಕಾಫಿ ಬೆಳೆಗಾರರ 10 ಎಚ್. ಪಿ. ವಿದ್ಯುತ್ ಪಂಪ್‌ಸೆಟ್ ಗೆ ಉಚಿತ ವಿದ್ಯುತ್ ನೀಡುವ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿರುವ ಅವರು ತಕ್ಷಣ ಆದೇಶ ಹೊರಡಿಸುವಂತೆ ಒತ್ತಾಯಿಸಿದ್ದಾರೆ.

ಭೂ ಕಬಳಿಕೆ ಕಾಯ್ದೆಯಿಂದ ಕೃಷಿ ಭೂಮಿಯನ್ನು ಹೊರಗಿಡುವುದು, ಫೆಸಿಫಿಕ್ ಕಾಯ್ದೆಯನ್ನು ರದ್ದುಪಡಿಸುವುದು ತಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಹೇಳಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here