ಇನ್ನೂ ಆರಂಭವಾಗದ ಆಯುಷ್ ವಿವಿ ; ಖಂಡನೆ

0
129

ಶಿವಮೊಗ್ಗ: ನಗರದಲ್ಲಿ ಆಯುಷ್ ವಿಶ್ವವಿದ್ಯಾನಿಲಯವನ್ನು ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಮಂಜೂರು ಮಾಡಿದ್ದು, ದಿನಾಂಕ: 17-02-‌2022ರಂದು ರಾಜ್ಯಪತ್ರದಲ್ಲಿ ಮಂಜೂರಾತಿ ಆದೇಶ‌ ಪ್ರಕಟವಾಗಿದ್ದು, ಹಲವು ತಿಂಗಳು ಕಳೆದರೂ ಆಯುಷ್ ವಿವಿ ಪ್ರಾರಂಭವಾಗದೇ ಇರುವುದಕ್ಕೆ ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರ ಸಮೀಪದ ಸೋಗಾನೆಯಲ್ಲಿ ಅಂದಿನ ಸಭಾಪತಿ ಡಿ.ಹೆಚ್.ಶಂಕರಮೂರ್ತಿಯವರ ಶಿಫಾರಸ್ಸಿನ ಮೇರೆಗೆ ಮತ್ತು ನಮ್ಮ ಸಂಘಟನೆಯ ಪ್ರಯತ್ನದಿಂದ ಆಯುಷ್ ವಿವಿ ಶಿವಮೊಗ್ಗಕ್ಕೆ ಮಂಜೂರಾಗಿತ್ತು. ಸೋಗಾನೆಯ ಸರ್ವೆ ನಂ.120ರಲ್ಲಿ ಈ ಉದ್ದೇಶಕ್ಕೆ 100 ಎಕರೆ ಜಾಗ ಮಂಜೂರಾಗಿದ್ದು, 21-22ರ ಬಜೆಟ್‌ನಲ್ಲಿ 20 ಕೋಟಿ ರೂ. ಅನುದಾನವನ್ನು ಘೋಷಣೆ ಮಾಡಲಾಗಿತ್ತು. ಈ ವಿಶ್ವವಿದ್ಯಾನಿಲಯವನ್ನು 500 ಕೋಟಿ ರೂ. ಮೊತ್ತದಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ, ಬೊಮ್ಮಾಯಿ ಸರ್ಕಾರ ಈ ಎಲ್ಲಾ ಯೋಜನೆಗಳಿಗೆ ತಿಲಾಂಜಲಿ ಇಟ್ಟಿದೆ ಎನ್ನುವ ಸಂದೇಹ ಬರುತ್ತಿದೆ ಎಂದರು.

ಈ ಬಗ್ಗೆ ಜಿಲ್ಲೆಯವರೇ ಆದ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಕೆ.ಎಸ್.ಈಶ್ವರಪ್ಪ ಹಾಗೂ ಶಿವಮೊಗ್ಗೆಯ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು ಈ ಬಗ್ಗೆ ಕಾಳಜಿ ವಹಿಸಿ ಕೂಡಲೇ ಶಿವಮೊಗ್ಗದಲ್ಲಿ ಆಯುಷ್ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಮುಖಂಡರಾದ ಹೊಳೆಮಡಿಲು ವೆಂಕಟೇಶ್, ಎಲ್.ಆರ್. ಗೋಪಾಲಕೃಷ್ಣ, ಆರ್.ಎ. ಚಾಬುಸಾಬ್, ಶಂಕರನಾಯ್ಕ, ರಿಪ್ಪನ್‌ಪೇಟೆ ಮೋಹಿದ್ದೀನ್ ಮೊದಲಾದವರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here