ಇನ್ನೂ ಹಸನಾಗದ ಅತಿವೃಷ್ಟಿ ಸಂತ್ರಸ್ಥರ ಬದುಕು

0
285

ಚಿಕ್ಕಮಗಳೂರು: ಅತಿವೃಷ್ಟಿಯಿಂದ ಮನೆ ಮತ್ತು ಜಮೀನು ಕಳೆದುಕೊಂಡಿರುವ ಜನರಿಗೆ ಜಿಲ್ಲಾಡಳಿತ 282. 12 ಎಕರೆ ಜಮೀನು ಅಗತ್ಯವಿದ್ದು, ಮಳೆಗಾಲ ಆರಂಭಗೊಳ್ಳುತ್ತಿರುವಾಗಲೇ ಸಮಸ್ಯೆಗಳೇ ಬಗೆಹರಿಯದಂತಾಗಿದೆ.

ಮೂಡಿಗೆರೆ ತಾಲೂಕಿನ ಮಧುಗುಂಡಿ, ಅಲೇಖಾನ್‍ಹೊರಟ್ಟಿ, ಮಲೆಮನೆ ಮೇಗೂರು, ಜಾವಳಿ ಮಲೆಮನೆ, ದುರ್ಗದಹಳ್ಳಿ, ಹಲಗಡಕ ಎಸ್ಟೇಟ್ ಗ್ರಾಮದ ಜನರಿಗೆ ಪುನರ್ವಸತಿ ಕಲ್ಪಿಸಬೇಕಾಗಿದ್ದು, ಅವರುಗಳು ಹೊಂದಿರುವ ಹಿಡುವಳಿ ಜಮೀನನ್ನು ಸರ್ಕಾರಕ್ಕೆ ಪಡೆದು ಬದಲಿ ಜಮೀನು ನೀಡಬೇಕಾಗಿದೆ.

ಮಲೆನಾಡಿನಲ್ಲಿ 2019-20ನೇ ಸಾಲಿನಲ್ಲಿ ಅತಿವೃಷ್ಟಿ ಸಂಭವಿಸಿದ್ದು, ಮನೆ ಮತ್ತು ಜಮೀನು ಕಳೆದುಕೊಂಡು 216 ಕುಟುಂಬಗಳ ಬೀದಿಗೆ ಬಿದ್ದವು. ಕೆಲವರು ನೆಂಟರಿಷ್ಟರ ಮನೆಯಲ್ಲಿ ಆಶ್ರಯ ಪಡೆದರೆ, ಮತ್ತೆ ಕೆಲವರು ಬಾಡಿಗೆ ಮನೆಯಲ್ಲಿ ಜೀವನ ನಡೆಸುವಂತಾಯಿತು.

ವಾಸದ ಮನೆ ಹಾಗೂ ಜಮೀನು ಕಳೆದುಕೊಂಡವರು 59 ಕುಟುಂಬಗಳಲ್ಲಿ 54 ಕುಟುಂಬಗಳು ಪುನರ್ವಸತಿಗೆ ಒಪ್ಪಿಗೆ ನೀಡಿದ್ದರೆ, 5 ಕುಟುಂಬಗಳ ಒಪ್ಪಿಗೆ ನೀಡಿಲ್ಲ, 25 ಕುಟುಂಬಗಳು ಜಮೀನು ಕಳೆದುಕೊಂಡಿದ್ದು, ಇವರೆಲ್ಲ ಜಮೀನು ಬಿಟ್ಟುಕೊಟ್ಟು ಬೇರೆಕಡೆ ಜಮೀನು ಪಡೆಯಲು ಒಪ್ಪಿಗೆ ನೀಡಿದ್ದಾರೆ.

ಮನೆಮಾತ್ರ ಕಳೆದುಕೊಂಡವರು 216 ಜನರಲ್ಲಿ ಬೇರೆಕಡೆ ಮನೆಕಟ್ಟಿಕೊಳ್ಳಲು ಒಪ್ಪಿಗೆ ಸೂಚಿಸಿದ್ದರೆ, 55 ಜನರು ಒಪ್ಪಿಗೆಯನ್ನೆ ನೀಡಿಲ್ಲ. ಮನೆಕಳೆದುಕೊಂಡವರಿಗೆ 19.14 ಎಕರೆ ಜಮೀನು ನೀಡಬೇಕಾಗಿದೆ. ಮನೆ ಮತ್ತು ಜಮೀನುಕಳೆದುಕೊಂಡಟವರಿಗೆ 187.16 ಎಕರೆ ಭೂಮಿ ಬೇಕಿದ್ದು, ಜಮೀನು ಕಳೆದಕೊಂಡವರಿಗೆ 94.26 ಎಕರೆ ಜಮೀನಿನ ಅಗತ್ಯವಿದೆ. ಒಟ್ಟು ವಿಸ್ತೀರ್ಣ 300 ಎಕರೆ ಬೇಕಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜಾಹಿರಾತು

LEAVE A REPLY

Please enter your comment!
Please enter your name here