24.3 C
Shimoga
Friday, December 9, 2022

ಇಬ್ಬರು ಮನೆಗಳ್ಳರು ಅಂದರ್ ! ಚಿನ್ನಾಭರಣ ವಶಕ್ಕೆ

ಶಿವಮೊಗ್ಗ : ಸೆ.25 ರಂದು ತುಂಗಾನಗರ ಠಾಣಾ ವ್ಯಾಪ್ತಿಯ ಮೇಲಿನ ತುಂಗಾನಗರದ ವಾಸಿಯೊಬ್ಬರ ಮನೆಯ ಹಿಂಭಾಗದ ಬಾಗಿಲನ್ನು ಮುರಿದು ಯಾರೋ ಕಳ್ಳರು ಬೀರುವಿನಲ್ಲಿದ್ದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.

ಪಿಐ ತುಂಗಾನಗರ ಮತ್ತು ಸಿಬ್ಬಂದಿಗಳ ತಂಡ ಈ ಪ್ರಕರಣದ ತನಿಖೆ ಕೈಗೊಂಡು ಅ.19 ರಂದು ಪ್ರಕರಣದ ಆರೋಪಿಗಳಾದ ಶಿವಮೊಗ್ಗದ ಕೆಳಗಿನ ತುಂಗಾನಗರ ವಾಸಿ ತಬ್ರಕ್‌ ಉಲ್ಲಾ‌ (20) ಮತ್ತು ಅಣ್ಣಾನಗರ ವಾಸಿ ಸಯ್ಯದ್ ಸುಭಾನ್‌‌ (20) ಈ ಇಬ್ಬರನ್ನು ಬಂಧಿಸಿ ಇವರಿಂದ 02 ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ 64 ಗ್ರಾಂ ಬಂಗಾರದ ಆಭರಣಗಳು, 200 ಗ್ರಾಂ ಬೆಳ್ಳಿಯ ಆಭರಣಗಳು ಮತ್ತು 5 ಸಾವಿರ ರೂ ನಗದು ಹಣವನ್ನು ಅಮಾನತು ಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಪಿಐ ತುಂಗಾನಗರ ಮತ್ತು ಸಿಬ್ಬಂದಿಗಳ ತಂಡದ ಉತ್ತಮ ಕಾರ್ಯವನ್ನು ಶ್ಲಾಘಿಸಲಾಗಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!