ಸಾಗರ: ಇಬ್ಬರು ಮನೆಗಳ್ಳತನದ ಆರೋಪಿಗಳನ್ನು ಬಂಧಿಸಲಾಗಿದ್ದು ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಜು. 14 ರಂದು ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀಧರ ನಗರದ ವಾಸಿಯೊಬ್ಬರ ಮನೆಯ ಬೀಗವನ್ನು ಒಡೆದು ಬೆಳ್ಳಿ ಮತ್ತು ಬಂಗಾರದ ಒಡವೆಗಳು ಹಾಗೂ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ನೀಡಿದ ದೂರಿನ ಮೇರೆಗೆ ಕಲಂ 454, 457, 380 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.
ಸಾಗರ ಟೌನ್ ಪೊಲೀಸ್ ಠಾಣೆಯ ಪಿಐ, ಪಿಎಸ್ಐ ಮತ್ತು ಸಿಪಿಐ ಕಾರ್ಗಲ್ ವೃತ್ತ ಮತ್ತು ಪಿಎಸ್ಐ ಕಾರ್ಗಲ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡವು ಈ ಪ್ರಕರಣದ ತನಿಖೆ ಕೈಗೊಂಡು ಇಂದು ಪ್ರಕರಣದ ಆರೋಪಿಗಳಾದ ಸಾಗರ ಟೌನ್ ಶ್ರೀಧರ್ ನಗರ ಶಿವರಾಜ (23) ಹಾಗೂ ಸಾಗರ ತಾಲೂಕಿನ ಸೂರನಗದ್ದೆ ದೊರೆರಾಜ (22) ಇವರುಗಳನ್ನು ಬಂಧಿಸಿ ಆರೋಪಿಗಳಿಂದ ಅಂದಾಜು 3,30,000 ರೂ. ಗಳ ಮೌಲ್ಯದ 74 ಗ್ರಾಂ ತೂಕದ ಬಂಗಾರದ ಆಭರಣಗಳು, ಅಂದಾಜು 8,000 ರೂ.ಗಳ ಮೌಲ್ಯದ 200 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು ಮತ್ತು 4,000 ರೂ. ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
Related