ಇಬ್ಬರು ವ್ಯಕ್ತಿಗಳಿಂದ ಪತ್ರಿಕಾ ವಿತರಕನ ಮೇಲೆ ಹಲ್ಲೆ !

0
1744

ಶಿವಮೊಗ್ಗ : ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಪ್ರಿಯದರ್ಶಿನಿ ಶಾಲೆಯ ಸಮೀಪ ಇಬ್ಬರು ವ್ಯಕ್ತಿಗಳಿಂದ ಪತ್ರಿಕಾ ವಿತರಕನ ಮೇಲೆ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ.

ಪ್ರಕರಣದ ವಿವರ :

ಪತ್ರಿಕೆ ಹಂಚುವ ಓರ್ವ ಯುವಕ ಇಂದು ಬೆಳಗ್ಗೆ ಮಾಮೂಲಿಯಂತೆ ಮನೆಗೆ ಪೇಪರ್ ಹಾಕಿ ಬರುತ್ತಿದ್ದಾಗ ಇನ್ನೋರ್ವ ಪತ್ರಿಕಾ‌ ವಿತರಕ ಫೋನ್ ಮಾಡಿದಾಗ ಹಲ್ಲೆಗೊಳಗಾದ‌ ಯುವಕ ಫೋನಿನಲ್ಲಿ ಮಾತನಾಡುತ್ತಾ ಬರುವಾಗ KA 14 P 6123 ಎಂಬ ಮಾರುತಿ‌ ಸುಜುಕಿ ಕಾರೊಂದು ಬಂದಿದ್ದೆ. ಪತ್ರಿಕಾ ವಿತರಕ ಕಾರಿಗೂ ಸಹ ಡಿಕ್ಕಿ ಹೊಡೆದಿಲ್ಲ ಆದರೆ ಕಾರಿನ ಮಾಲೀಕನಿಗೆ ಸರಿಯಾಗಿ ಹೋಗಿ ಎಂದಿದ್ದಕ್ಕೆ ಆ ವ್ಯಕ್ತಿ‌ ವಿತರಕನ ಮೇಲೆ ಕೈಯನ್ನು ತಿರುಗಿಸಿ ಅವ್ಯಾಚ ಶಬ್ಧಗಳಿಂದ ನಿಂದಿಸಿದ್ದಾನೆ. ಆ ನಂತರ ಬಾರೋ ಬೋ.. ಮಗನೆ ವಿನೋಬನಗರ ಠಾಣೆಗೆ ಹೋಗೊಣ ಎಂದು ಅವನನ್ನು ಎದುರಿಸಿ ಆತನ ಫೋಟೋ ಹಾಗೂ ಗಾಡಿಯ ಫೋಟೊವನ್ನು ಸಹ ಹೊಡೆದು ಕೊಂಡು ಬಂದಿದ್ದಾನೆ.

ಹಲ್ಲೆಗೊಳಗಾದ ಯುವಕನ ಕೈಗೆ ಸ್ವಲ್ಪ‌ಹೊಡೆತ‌ ಬಿದಿದೆ ಎನ್ನಲಾಗಿದೆ.

ಮಾನವೀಯತೆ ಇಲ್ಲದ ಈ ಮನುಷ್ಯನ ವಿರುದ್ಧ ಅಲ್ಲಿನ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ..

ಜಾಹಿರಾತು

LEAVE A REPLY

Please enter your comment!
Please enter your name here