ಇಲ್ಲ ಸಲ್ಲದ ಗೋಡೆ ಬರಹ: ವ್ಯಕ್ತಿಯ ಕೈಯಲ್ಲೇ ಬಸ್ ನಿಲ್ದಾಣಕ್ಕೆ ಸುಣ್ಣ-ಬಣ್ಣ !

0
5546

ಮೂಡಿಗೆರೆ: ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ ಹಾಗೂ ಇನ್ನಿತರೆ ಸರ್ಕಾರಿ ಕಟ್ಟಡಗಳು ಪ್ರತಿಯೊಬ್ಬರ ಆಸ್ತಿ. ಅವುಗಳನ್ನು ಕಾಪಾಡಬೇಕಾಗಿರುವುದು ಎಲ್ಲರ ಕರ್ತವ್ಯ. ಆದರೇ, ವ್ಯಕ್ತಿಯೊಬ್ಬ ತನಗೆ ತೋಚಿದ ಹಾಗೇ ಬಸ್ ನಿಲ್ದಾಣದ ಗೋಡೆ ಮೇಲೆ ಇಲ್ಲಸಲ್ಲದನ್ನು ಬರೆದು ಪೊಲೀಸ್ ಠಾಣೆಯ ಮೆಟ್ಟಿಲು ಏರಿ ಬುದ್ದಿ ಕಲಿತ ಘಟನೆಯೊಂದು ನಡೆದಿದೆ.

ಮಂಡ್ಯ ಮೂಲದ ವ್ಯಕ್ತಿಯೋರ್ವನು ಮೂಡಿಗೆರೆ ತಾಲ್ಲೂಕಿನ ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಕಲ್ ಗ್ರಾಮದ ಬಸ್ ನಿಲ್ದಾಣಕ್ಕೆ ಮಣ್ಣಿನಿಂದ ಅವನ ಪ್ರೇಯಸಿ ಹೆಸರು, ಲವ್ ಸಿಂಬಲ್, ಅವನು ಊರಿನ ಹೆಸರು, ಮೊಬೈಲ್ ನಂಬರ್, ಸ್ನೇಹಿತರ ಹೆಸರು ಸೇರಿದಂತೆ ಇಡೀ ಬಸ್ ತಂಗುದಾಣವನ್ನ ಹಾಳು ಮಾಡಿದ್ದ. ಇತ್ತೀಚೆಗಷ್ಟೆ ಈ ಬಸ್ ನಿಲ್ದಾಣ ದುರಸ್ಥಿಯಾಗಿ ಸುಣ್ಣ-ಬಣ್ಣ ಕಂಡಿತ್ತು.

ವ್ಯಕ್ತಿಯ ಗೋಡೆ ಮೇಲಿನ ಬರಹದಿಂದ ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು, ಮಹಿಳೆಯರು ಇರುಸು- ಮುರುಸಿಗೊಳಗಾಕುತ್ತಿದ್ದರು. ಬಸ್ ನಿಲ್ದಾಣದ ಗೋಡೆಯ ಹೊರಭಾಗ ಹಾಗೂ ಒಳಭಾಗದ ನಾಲ್ಕು ಗೋಡೆಗಳ ಮೇಲೆ ಮನಸ್ಸೋ ಇಚ್ಛೆ ಮನಸ್ಸಿಗೆ ತೋಚಿದ್ದೆಲ್ಲವನ್ನೂ ಗೀಚಿದ್ದರು. ಇದನ್ನ ಗಮನಿಸಿದ ನಿಡುವಾಳೆ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಹಾವಳಿ ಹಾಗೂ ನಿಡುವಾಳೆ ಗ್ರಾಮ ಪಂಚಾಯಿತಿ ಗ್ರಾಮಸ್ಥರು ಬಾಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಬಾಳೂರು ಪೊಲೀಸರು ಆ ಮಂಡ್ಯದ ಗಂಡನ್ನು ಹುಡುಕಿ ಕರೆತಂದು ಪೊಲೀಸ್ ಭಾಷೆಯಲ್ಲಿ ಬುದ್ಧಿ ಹೇಳಿದ್ದಾರೆ.

ಈ ಬಸ್ ನಿಲ್ದಾಣವನ್ನ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಹಾವಳಿ ತನ್ನ ಆರು ತಿಂಗಳ ಸಂಬಳದಲ್ಲಿ ಬಸ್ ನಿಲ್ದಾಣವನ್ನ ದುರಿಸ್ಥಿ ಮಾಡಿದ್ದರು. ಸಂಪೂರ್ಣ ಹಾಳಾಗಿದ್ದ ಈ ಬಸ್ ನಿಲ್ದಾಣ ಮತ್ತೆ ಮೊದಲಿನಂತೆ ನಳನಳಿಸಲು ಬಾಳೂರು ಪೊಲೀಸರು ಶ್ರಮವೂ ಇತ್ತು. ಬಸ್ ನಿಲ್ದಾಣವನ್ನ ಹಾಳು ಮಾಡಿದ್ದ ಮಂಡ್ಯದ ಗಂಡು ಸಾಗರ್ ಎಂಬ ಯುವಕನನ್ನ ಹುಡುಕಿ ಕರೆತಂದ ಬಾಳೂರು ಪಿ. ಎಸ್. ಐ. ರೇಣುಕಾ ಹಾಗೂ ಸಿಬ್ಬಂದಿಗಳಾದ ಮಹೇಶ್, ಹೇಮಂತ್, ಸತೀಶ್‍ಗೆ ನಿಡುವಾಳೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here