ತೀರ್ಥಹಳ್ಳಿ : ಸ್ಥಳೀಯ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದ ಸಂದೇಶ್ ಕುಮಾರ್ ರವರು ಕುಶಾವತಿಯಲ್ಲಿ ಕುಶಾವತಿ ಪಾರ್ಕ ಹಿಂಭಾಗ ತುಂಗಾ ನದಿಯಲ್ಲಿ ಈಜಲು ಹೋದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.
ಕುಶಾವತಿ ಶಂಕರ್ ಗುಡ್ಡ ನಿವಾಸಿ ಬಸ್ಟ್ಯಾಂಡ್ ಸಮೀಪ ಅಂಗಡಿ ಮಾಲೀಕರಾಗಿರುವ ಕೃಷ್ಣರವರ ಪುತ್ರರಾದ ಇವರು, ಅನೇಕ ವರ್ಷದಿಂದ ಪ್ರಸಿದ್ಧ ವಕೀಲರಾದ ಎಂ.ಎಂ ರಮೇಶ್ ರವರ ಕಚೇರಿಯಲ್ಲಿ ಸಹಾಯಕ ವಕೀಲರಾಗಿ ತೀರ್ಥಹಳ್ಳಿ ನ್ಯಾಯಾಲಯದಲ್ಲಿ ವೃತ್ತಿ ನಡೆಸುತ್ತಿದ್ದರು.
ಈ ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
Related