ಭದ್ರಾವತಿ: ತಾಲೂಕಿನ ಹೆಂಚಿನ ಸಿದ್ದಾಪುರ ಗ್ರಾಮದಲ್ಲಿ ಭದ್ರ ಬಲನಾಲೆಗೆ ಈಜಲು ಹೋಗಿ ನೀರು ಪಾಲಾಗಿದ್ದ ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿದೆ.
ಬರೊಬ್ಬರಿ ಎರಡು ದಿನದ ಹುಡುಕಾಟದಲ್ಲಿ ಅವರ ದೇಹಗಳು ಪತ್ತೆಯಾಗಿವೆ. ಆ ಇಡೀ ಭಾಗ ಮಕ್ಕಳ ಹೆತ್ತವರು, ಸಂಬಂಧಿಕರ ಜೊತೆ ಕಣ್ಣೀರಧಾರೆಯಲ್ಲಿ ಮೌನ ರೋಧನೆಯಲ್ಲಿ ಮುಳುಗಿತ್ತು.
ದೊಡ್ಡಪ್ಪನ ಜೊತೆ ನಾಲ್ವರು ಮಕ್ಕಳು ನಾಲೆಗೆ ಸ್ನಾನಕ್ಕೆ ಹೋಗಿದ್ದು ನೀರುಪಾಲಾಗಿದ್ದರು. ಇಬ್ಬರನ್ನ ಜೀವಂತವಾಗಿ ರಕ್ಷಿಸಲಾಗಿದ್ದು ಇಬ್ಬರು ನೀರುಪಾಲಾಗಿದ್ದರು.
ಚಂದನಾ ಮತ್ತು ಹರ್ಷ ಎಂಬ ಇಬ್ಬರು ಲೋಕೇಶ್ ಅವರ ಮಕ್ಕಳಾಗಿದ್ದು ನಿನ್ನೆ ಬೆಳಿಗ್ಗೆ ದೊಡ್ಡಪ್ಪ ಕುಬೇರಪ್ಪನವರೊಂದಿಗೆ ಸ್ನಾನಕ್ಕೆ ಬಂದು ನೀರುಪಾಲಾಗಿದ್ದರು. ಮೊದಲು ಅಕ್ಕ ಚಂದನಾಳ ಶವ ಪತ್ತೆಯಾದರೆ ಎರಡು ಗಂಟೆಯ ಅಂತರದಲ್ಲಿ ತಮ್ಮ ಹರ್ಷನೂ ಸಹ ಶವವಾಗಿ ಪತ್ತೆಯಾಗಿದ್ದಾನೆ. ಚಂದನಾಳ ಶವ ಸಿಕ್ಕ ಸ್ವಲ್ಪ ಅಂತರದಲ್ಲಿ ಹರ್ಷನ ಮೃತದೇಹ ಪತ್ತೆಯಾಗಿದೆ.