ಈಡಿಗ ಸಮಾಜದ ಅಭಿವೃದ್ಧಿ ಮತ್ತು ಸಂಘಟನೆಗೆ ಗುರುಪೀಠದ ಅವಶ್ಯಕವಿದೆ: ಬೇಳೂರು ಗೋಪಾಲಕೃಷ್ಣ

0
379

ಸೊರಬ: ಈಡಿಗ ಸಮಾಜದ ಅಭಿವೃದ್ಧಿ ಮತ್ತು ಸಂಘಟನೆಗೆ ಗುರುಪೀಠದ ಅವಶ್ಯಕವಿದೆ ಎಂದು ಸಾಗರದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು.

ಪಟ್ಟಣದ ರಂಗಮಂದಿರದಲ್ಲಿ ತಾಲ್ಲೂಕು ಆರ್ಯ ಈಡಿಗರ (ದೀವರ) ಸಂಘ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಸೇವಾ ಪ್ರತಿಷ್ಠಾನದಿಂದ ಮಂಗಳವಾರ ಹಮ್ಮಿಕೊಂಡ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ರಾಜ್ಯದಲ್ಲಿಯೇ ಈಡಿಗ ಸಮಾಜದ ಅನರ್ಘ್ಯ ರತ್ನವಾಗಿದ್ದರು. ಅವರ ತರುವಾಯ ಅಂತಹ ನಾಯಕರನ್ನು ಕಾಣಲು ಸಾಧ್ಯವಾಗಲಿಲ್ಲ. ಈಡಿಗ ಸಮಾಜದ ಅಭಿವೃದ್ಧಿಗೆ ಗುರುಪೀಠ ಭರ್ತಿಯಾಗಬೇಕು. ಸಣ್ಣ ಸಮುದಾಯಗಳು ಗುರುವಿನ ಮೂಲಕ ಸಂಘಟಕರಾಗುತ್ತಿದ್ದಾರೆ. ಈಡಿಗರು ಯಾವುದೇ ಪಕ್ಷದಲ್ಲಿ ಇರಲಿ ಸಮಾಜದ ವಿಷಯದಲ್ಲಿ ಒಗ್ಗಾಟಾಗಿ, ಸಮಾಜದ ಸತ್ಕಾರ್ಯಗಳಲ್ಲಿ ಕೈ ಜೋಡಿಸಬೇಕು. ಉನ್ನತ ಹುದ್ದೆ ಅಲಂಕರಿಸಿರುವ ಸಮಾಜದವರು ಸಮಾಜಕ್ಕೆ ಕೈಲಾದ ಸೇವೆಯನ್ನು‌ ಕೊಡುಗೆಯಾಗಿ ನೀಡಬೇಕು. ಸರ್ಕಾರವು ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ಅನುದಾನಗಳನ್ನು ಒದಗಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಪಿಎಸ್ ಐ ಟಿ.ಬಿ. ಪ್ರಶಾಂತ್ ಕುಮಾರ್, ಪತ್ರಕರ್ತರಾದ ಶಿವಪ್ಪ ಹಿತ್ಲರ್, ಹಾಗೂ ದಂತ ವೈದ್ಯ ಡಾ. ಎಚ್. ಈ. ಜ್ಞಾನೇಶ್ ಸೇರಿದಂತೆ ಸಮಾಜದ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ಸನ್ಮಾನಿಸಲಾಯಿತು.

ತಾಲೂಕು ಆರ್ಯ ಈಡಿಗರ ಸಂಘದ ತಾಲ್ಲೂಕು ಅಧ್ಯಕ್ಷ ಕೆ. ಅಜ್ಜಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ತಾರಾ ಶಿವಾನಂದ್, ರಾಜೇಶ್ವರಿ ಗಣಪತಿ, ಪುರಸಭೆ ಅಧ್ಯಕ್ಷ ಎಂ.ಡಿ. ಉಮೇಶ್, ಆರ್ಯ ಈಡಿಗ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ, ಎಸ್.ಎಸ್.ಜಿ.ವಿ. ಜಿಲ್ಲಾಧ್ಯಕ್ಷ ಪ್ರವೀಣ್‌ ಹಿರೇಇಡಗೋಡು, ತಾಲ್ಲೂಕು ಅಧ್ಯಕ್ಷ ಶಿವಕುಮಾರ್ ಬಿಳವಗೋಡು, ಪುರಸಭೆ ಸದಸ್ಯೆ ಪ್ರೇಮಾ, ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್. ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಪ್ರಮುಖರಾದ ಪಾಣಿ ರಾಜಪ್ಪ, ಜಗದೀಶ ಕುಳವಳ್ಳಿ, ಜಿ. ಪ್ರಕಾಶ್, ನಾಗರಾಜ ಚಿಕ್ಕಸವಿ, ಸಿ.ಕೆ. ಬಲೀಂದ್ರಪ್ಪ, ಶಾಂತಮ್ಮ ಉಳವಿ, ಸೇರಿದಂತೆ ಸಮಾಜದ ಮುಖಂಡರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here