‘ಈ ಸಲ ಕಪ್ ನಮ್ದೆ’ RCB ಮೇಲಿನ ಅಭಿಮಾನಕ್ಕೆ ಇಲ್ಲೊಬ್ಬ ಏನು ಮಾಡಿದ್ದಾನೆ ಗೊತ್ತಾ?

0
742

ಸಾಗರ: ಇಂದಿನಿಂದ ಐಪಿಎಲ್ 14ನೇ ಆವೃತ್ತಿಯ ಕ್ರಿಕೆಟ್ ಟೂರ್ನಿ ಆರಂಭವಾಗುತ್ತಿದೆ. ಐಪಿಎಲ್ ಕ್ರಿಕೆಟ್ ಮ್ಯಾಚ್ ಆರಂಭವಾದ ದಿನದಿಂದ ಕ್ರಿಕೆಟ್ ಪ್ರೇಮಿಗಳಲ್ಲಿ ಕ್ರಿಕೆಟ್ ಫೀವರ್ ಹೆಚ್ಚಾಗುತ್ತಿದೆ. ಕ್ರಿಕೆಟ್ ಅಭಿಮಾನಿಗಳು ಒಬ್ಬೊಬ್ಬರು ಒಂದೊಂದು ತಂಡದ ಮೇಲೆ ಅಭಿಮಾನ ಇಟ್ಟುಕೊಂಡಿರುತ್ತಾರೆ. ಅದೇ ಮಾದರಿಯಲ್ಲಿ ಸಾಗರದಲ್ಲಿ ಆರ್‌ಸಿಬಿ ಅಭಿಮಾನಿಯೊಬ್ಬರು ‘ಈ ಸಲ ಕಪ್ ನಮ್ದೆ’ ಎಂದು ತನ್ನ ಹೋಟೆಲ್ ಬಿಲ್ ನಲ್ಲಿ ಪ್ರಿಂಟ್ ಹಾಕಿಸುವ ಮೂಲಕ ಆರ್.ಸಿ.ಬಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಾಗರದಲ್ಲಿರುವ ಹೋಟೆಲ್ ಸದ್ಗುರು ಮಾಲೀಕ ಸಂತೋಷ್ ಆರ್‌ಸಿಬಿ ಅಭಿಮಾನಿ ಆಗಿದ್ದು, ಈ ಸಲವಾದರು ಐಪಿಎಲ್ ನಲ್ಲಿ ಆರ್‌ಸಿಬಿ ಕಪ್ ಗೆಲ್ಲಲಿ ಎಂಬ ಮಹಾದಾಸೆ ಹೊಂದಿದ್ದಾರೆ. ಹೀಗಾಗಿ ಈ ಬಾರಿ ತನ್ನ ಹೋಟೆಲ್‍ನ ಬಿಲ್ ನಲ್ಲಿಯೇ ಈ ಸಲ ಕಪ್ ನಮ್ದೆ, ಆರ್‌ಸಿಬಿ ಎಂದು ಪ್ರಿಂಟ್ ಹಾಕಿಸಿದ್ದಾರೆ. ಇದನ್ನು ನೋಡಿದ ಗ್ರಾಹಕರು ಕೂಡ ಇವರ ಅಭಿಮಾನಕ್ಕೆ ಖುಷಿಯಾಗಿದ್ದಾರೆ.

ಸಂತೋಷ್ ಅವರು ಆರ್‌ಸಿಬಿ ಮೇಲಿನ ಅಭಿಮಾನದಿಂದಾಗಿ ತನ್ನ ಪ್ರೀತಿಯ ಬಜಾಜ್ ಚೇತಕ್ ಬೈಕ್ ಮೇಲೂ ಸಹ ಈ ಸಲ ಕಪ್ ನಮ್ದೆ ಎಂದು ಬರೆಸುವ ಮೂಲಕ ಆರ್‌ಸಿಬಿ ತಂಡಕ್ಕೆ ಶುಭ ಕೋರಿದ್ದಾರೆ. ಪ್ರತಿ ಬಾರಿ ಈ ಸಲ ಕಪ್ ನಮ್ದೆ ಎಂಬ ಅಭಿಮಾನ ಇರುತ್ತದೆ. ಆದರೆ ಪ್ರತಿ ಬಾರಿ ಕೈ ತಪ್ಪಿ ಹೋಗುತ್ತಿದೆ. ಆದರೂ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ. ಈ ಬಾರಿಯೂ ಅದೇ ಅಭಿಮಾನ, ಆಸೆ ಇದೆ ನೋಡೋಣ ಏನು ಆಗುತ್ತೆ ಎಂದು ಹೋಟೆಲ್ ಉದ್ಯಮಿ, ಆರ್‌ಸಿಬಿ ಅಭಿಮಾನಿ ಸಂತೋಷ್ ತಮ್ಮ ಅಭಿಪ್ರಾಯವನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here