ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ: ರಾಕೇಶ್ ಕಾಂಬ್ಳೆ

0
191

ಚಿಕ್ಕಮಗಳೂರು: ಆಕಸ್ಮಿಕ ಕಾರಣದಿಂದ ಕಾರಾಗೃಹದಲ್ಲಿದ್ದು, ತಮ್ಮ ಮುಂದಿನ ದಿನಗಳಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಮಾದರಿಯಾಗಿ ಬಾಳಲು ಉತ್ತಮವಾದ ಗ್ರಂಥಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ರಾಕೇಶ್ ಕಾಂಬ್ಳೆ ತಿಳಿಸಿದರು.

ನಗರ ಕೇಂದ್ರ ಗ್ರಂಥಾಲಯ ವತಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ರಾಮನಹಳ್ಳಿ ಸಮೀಪದ ಜಿಲ್ಲಾ ಕಾರಾಗೃಹದಲ್ಲಿ ಕಾರಾಗೃಹ ಬಂಧಿಗಳಿಗೆ ಆಯೋಜಿಸಿದ್ದ ಪುಸ್ತಕದಿಂದ ಪರಿವರ್ತನೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಮಾದರಿಯಾಗಿ ಬಾಳಲು ಉತ್ತಮವಾದ ಗ್ರಂಥಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು, ಪುಸ್ತಕ ಓದಿನಿಂದ ಮಾನಸಿಕವಾಗಿ ಸಧೃಢರಾಗಬಹುದು ಜತೆಗೆ ಮನಃ ಪರಿವರ್ತನೆಯಾಗಲಿದೆ, ತಮ್ಮಲ್ಲಿ ವಿವಿಧ ಪ್ರತಿಭೆಗಳಿದ್ದು ಅದರ ಜತೆಗೆ ಗ್ರಂಥಾಲಯದ ಸದುಪಯೋಗಪಡಿಸಿಕೊಳ್ಳಲು ಹೇಳಿದರು.

ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಉಮೇಶ್ ಮಾತನಾಡಿ, ಗ್ರಂಥಾಲಯವು ಪ್ರಾಚೀನ ಕಾಲದಿಂದ ಮಹತ್ವ ಪಡೆದಿದ್ದು. ರಾಜ್ಯದಲ್ಲಿ ಶರಣ ಬಸವಣ್ಣವನರ ಅನುಭವ ಮಂಟಪದಿಂದ ಗ್ರಂಥಾಲಯದ ಮತ್ತಷ್ಟು ಮಹತ್ವ ಪಡೆಯುವ ಮೂಲಕ ಮುನ್ನೆಲೆಗೆ ಬಂದಿದೆ. ಜಿಲ್ಲಾ ಕಾರಾಗೃಹದಲ್ಲಿ ಸಾಹಿತ್ಯ, ಕೃಷಿ, ಸಾಂಸ್ಕೃತಿಕ, ಕಲೆ, ಒಳಗೊಂಡಂತೆ ಸುಮಾರು 7000 ಕ್ಕೂ ಅಧಿಕವಾದ ಪುಸ್ತಕಗಳಿದ್ದು ಎಲ್ಲಾ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳು ಲಭ್ಯವಿದ್ದು ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಗ್ರಂಥಾಲಯ ಸಿಬ್ಬಂದಿ ಮಹೇಶಪ್ಪ ಜವಹಾರ್‌ಲಾಲ್‌ನೆಹರು ಹಾಗೂ ಗಾಂಧೀಜಿ ಸೇರಿದಂತೆ ಅನೇಕ ಮಹನೀಯರ ಬಗ್ಗೆ ಪರಿಚಯಿಸಿದರು. ಕಾರಾಗೃಹ ಗ್ರಂಥಪಾಲಕ ರಾಜ್‌ಕುಮಾರ್, ಗ್ರಂಥಾಲಯ ಸಿಬ್ಬಂದಿಗಳಾದ ರಾಘವೇಂದ್ರ, ವೀಣಾ, ರೂಪಾ ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here