ಉತ್ತಮ ಮಾನಸಿಕ ತಜ್ಞರನ್ನು ಕರೆಸಿ ಡಿಕೆಶಿ ಮಾನಸಿಕ ಸ್ಥಿತಿ ಪರೀಕ್ಷಿಸಬೇಕು: ಸಚಿವ ಆರಗ ಜ್ಞಾನೇಂದ್ರ ತಿರುಗೇಟು

0
394

ಶಿವಮೊಗ್ಗ: ಉತ್ತಮ ಮಾನಸಿಕ ತಜ್ಞರನ್ನು ಕರೆಸಿ ಡಿ.ಕೆ.ಶಿವಕುಮಾರ್ ಮಾನಸಿಕ ಸ್ಥಿತಿ ಪರೀಕ್ಷಿಸಬೇಕು. ಯಾವುದೇ ವಿಷಯವಿಲ್ಲದೆ ಒದ್ದಾಡುತ್ತಿರುವ ಕಾಂಗ್ರೆಸ್ಸಿಗರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮಾನಸಿಕ ಸ್ಥಿತಿ ಕುರಿತು ಟೀಕೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿ, ಡಿ.ಕೆ. ಶಿವಕುಮಾರ್ ಮಾನಸಿಕ ಸ್ಥಿತಿಯನ್ನೇ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.

ಯುವ ಕಾಂಗ್ರೆಸ್ಸಿನ ಅನೇಕರು ತಮಗೆ ಕರೆ ಮಾಡಿ ತಮ್ಮ ಅಧ್ಯಕ್ಷರ ಚುನಾವಣೆಯಲ್ಲಿ ನಡೆದ ಹ್ಯಾಕಿಂಗ್ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದರು ಎಂದ ಅವರು, ಶ್ರೀಕಿ ಹ್ಯಾಕಿಂಗ್ ಕುರಿತು ಚರ್ಚೆಯಾಗುತ್ತಿದೆ. ಈ ಸಂದರ್ಭ ಯುವ ಕಾಂಗ್ರೆಸ್‌ನ ಕೆಲವರು ಕರೆ ಮಾಡಿ ತಮ್ಮ ಅಧ್ಯಕ್ಷರ ಚುನಾವಣೆ ಸಂದರ್ಭ ಹ್ಯಾಕಿಂಗ್ ಆಗಿರುವ ಸಾಧ್ಯತೆ ಇದೆ. ಇದನ್ನು ತನಿಖೆ ನಡೆಸಲು ಸಾಧ್ಯವಾಗಲಿದೆಯೇ? ಎಂದು ಕೇಳಿದ್ದರು. ದೂರು ನೀಡುವಂತೆ ನಾನು ತಿಳಿಸಿದ್ದೇನೆ ಎಂದರು.

ಕಾಂಗ್ರೆಸ್ ನಾಯಕರ ಮಕ್ಕಳು ಶ್ರೀಕಿ ಉಪಯೋಗಿಸಿಕೊಂಡಿದ್ದಾರೆಂಬುದು ಬೆಳಕಿಗೆ ಬರಲಿದೆ. ಗೋವಾ ಹೋಟೆಲ್‌ನಲ್ಲಿ ಕಾಂಗ್ರೆಸ್ಸಿನವರ ಜೊತೆ ಶ್ರೀಕಿ ಸಿಕ್ಕಿಬಿದ್ದಿದ್ದ, ಯುಬಿ ಸಿಟಿ ಗಲಾಟೆಯಲ್ಲೂ ಕಾಂಗ್ರೆಸ್ ನಾಯಕರ ಜೊತೆ ಶ್ರೀಕಿ ಇದ್ದ. 2018ರಲ್ಲಿ ಶ್ರೀಕಿಯನ್ನು ಬಂಧಿಸದೆ ಬಿಟ್ಟಿದ್ದೇಕೆ? ಎಂಬ ಬಗ್ಗೆ ಕಾಂಗ್ರೆಸ್ ಉತ್ತರಿಸಬೇಕು ಎಂದರು.

ಜಾಹಿರಾತು

LEAVE A REPLY

Please enter your comment!
Please enter your name here