ಉತ್ತಮ ಸಮಾಜ ನಿರ್ಮಾಣಕ್ಕೆ ಶಂಕರಾಚಾರ್ಯರ ತತ್ವಗಳು ಅನುಸರಿಸಬೇಕು :‌ ಬಸವರಾಜ್ ಬೊಮ್ಮಾಯಿ

0
233

ಕೊಪ್ಪ : ಶಂಕರಾಚಾರ್ಯರು ಚಾರಿತ್ರ್ಯಹೀನ ಸಮಾಜದಲ್ಲಿ ನ್ಯಾಯ, ನೀತಿ ಹಾಗೂ ಧರ್ಮವನ್ನು ಸ್ಥಾಪನೆ ಮಾಡಿದವರು. ಅವರ ತತ್ವಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹರಿಹರಪುರದಲ್ಲಿ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಪೀಠ ಮಹಾ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಂಕರಾಚಾರ್ಯರ ಮಾರ್ಗದರ್ಶನದಂತೆ ಲಕ್ಷ್ಮೀ ನರಸಿಂಹ ಪೀಠದ ಪರಮಪೂಜ್ಯರು ನಡೆಯುತ್ತಿದ್ದು, ಸಮಾಜದಲ್ಲಿ ಜನರ ಮನಸ್ಸುಗಳನ್ನು ಬೆಸೆಯುತ್ತಾ, ಭಾವೈಕ್ಯತೆಯ ಸಂಕೇತವಾಗಿ ನಾವೆಲ್ಲಾ ಮನುಜರು ಒಂದೇ ಎಂಬ ಸಂದೇಶವನ್ನು ಸಾರುತ್ತಿದ್ದಾರೆ ಎಂದರು.

ದೇವರು ಹಾಗೂ ಗುರುವಿನಲ್ಲಿ ಭಕ್ತಿ ಇರಬೇಕು. ಆ ಭಕ್ತಿಯು ಉತ್ಕೃಷ್ಟ ವಾದ ಪ್ರೀತಿಯಾಗಿ ಹೊರಹೊಮ್ಮಿ, ದೇವರು ಮತ್ತು ಗುರುವಿನಲ್ಲಿ ಕರಗಿ ಲೀನವಾಗಬೇಕು. ಸಮಾಜದಲ್ಲಿ ತನ್ನ ಅಸ್ತಿತ್ವವನ್ನು ಪರ ವಿಮರ್ಶಿಸಿಕೊಂಡು, ನಾನು ಎಂಬ ಅಹಂ ಅನ್ನು ಸಮರ್ಪಣೆ ಮಾಡಿದಾಗ ಜೀವನದಲ್ಲಿ ಸಾರ್ಥಕತೆ ದೊರೆಯುತ್ತದೆ ಎಂದರು.

ಮಾನವಜನ್ಮ ಅತಿ ಶ್ರೇಷ್ಠವಾದ ಜನ್ಮವಾಗಿದ್ದು, ಅಭಿವ್ಯಕ್ತ ಪಡಿಸುವ ವೈಶಿಷ್ಟ್ಯ ಕೇವಲ ಮನುಜನಿಗಷ್ಟೆ ಇದೆ. ಈ ಜನ್ಮವನ್ನು ಪಡೆದ ನಾವು ಸಮಾಜದಿಂದ ಸಹಕಾರ ಹಾಗೂ ಜ್ಞಾನವನ್ನು ಪಡೆದು ಸಶಕ್ತರಾದ ನಂತರ ಅದೇ ಸಮಾಜಕ್ಕೆ ಕೊಡುಗೆಯಾಗಿ ಕೈಲಾದದ್ದು ಹಿಂದಿರುಗಿಸಬೇಕು ಎಂದರು.

ಸಮಾರಂಭದಲ್ಲಿ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಪೀಠದ ಪೀಠಾಧಿಪತಿ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ, ಶೃಂಗೇರಿ ಶಾಸಕ ರಾಜೇಗೌಡ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್ ಹಾಗೂ ಹೊರನಾಡು ಕ್ಷೇತ್ರದ ಧರ್ಮಾಧಿಕಾರಿ ಭೀಮೇಶ್ವರ ಜೋಷಿ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here