ಉದ್ಘಾಟನೆಗೊಂಡು ಒಂದೇ ವಾರಕ್ಕೆ ಕುಸಿದು ಬಿದ್ದ 30 ಲಕ್ಷ ರೂ. ವೆಚ್ಚದ ಸೇತುವೆ !

0
1653

ಕಳಸ: ವಾರದ ಹಿಂದೆ ವಾಹನ ಸಂಚಾರಕ್ಕೆ ಸಿದ್ದವಾಗಿದ್ದ ಸೇತುವೆಯಲ್ಲಿ ಕೇವಲ ಪಿಕಪ್‌ ವಾಹನ ತೆರಳಿ ಕುಸಿದು ಬಿದ್ದ ಘಟನೆ ತಾಲೂಕಿನ ನೆಲ್ಲಿಬೀಡು ಗ್ರಾಮದಲ್ಲಿ ಮಂಗಳವಾರ ನಡೆದಿದೆ.

30 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿತ್ತು. ಒಂದು ವಾರದ ಹಿಂದೆ ವಾಹನ ಸಂಚಾರಕ್ಕೆ ತೆರವಾಗಿದ್ದ ಸೇತುವೆಯಲ್ಲಿ ಪಿಕಪ್‌ ವಾಹನ ಚಲಿಸಿದ್ದು, ಈ ವೇಳೆ ಸೇತುವೆಯ ಕಾಂಕ್ರೀಟ್ ಗೋಡೆ ಕುಸಿದಿದೆ.

ಕಾಂಕ್ರೀಟ್‌ ಬಿದ್ದ ಪರಿಣಾಮ ಪಿಕಪ್‌ ಕಂದಕಕ್ಕೆ ಬೀಳುವ ಹಂತದಲ್ಲಿತ್ತು. ಪಿಕಪ್‌ನ್ನು ಮೇಲೆತ್ತಲು ಸ್ಥಳೀಯರ ಹರಸಾಹಸ ಪಟ್ಟರು. ಅದೃಷ್ಟವಶಾತ್ ಪಿಕಪ್ ಚಾಲಕ-ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚೌಡಿಬಿಳಲ್, ಕಟ್ಟೆಮನೆ, ಕೊಣೆಮನೆ, ಈಚಲಹೊಳೆ ಸೇರಿದಂತೆ ಐದಾರು ಹಳ್ಳಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ, ಕಳೆದ ವರ್ಷ ಅತಿವೃಷ್ಠಿಯಿಂದಾಗಿ ಕೊಚ್ಚಿ ಹೋಗಿತ್ತು.

ಒಂದು ವರ್ಷದ ಬಳಿಕ 30 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದರೆ ಒಂದೇ ವಾರಕ್ಕೆ ಸೇತುವೆ ಕುಸಿದು ಬಿದ್ದಿದ್ದು, ಇಂಜಿನಿಯರ್, ಕಂಟ್ರಾಕ್ಟರ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here