ಶಿಕಾರಿಪುರ : ತಾಲ್ಲೂಕಿನ ಅಂಜನಾಪುರದ ಕೊರ್ಲಳ್ಳಿ ಗ್ರಾಮದಲ್ಲಿರುವ ಗ್ರಾಮಠಾಣದ ಸರ್ವೇ ನಂಬರ್ ಒಂದರಲ್ಲಿ ಸುಮಾರು 89 ಎಕರೆ ಭೂ ಪ್ರದೇಶದಲ್ಲಿ, ಪಾರಿಬಾಯಿಯ ತಂದೆ ತಾಯಿಯವರು ಹಲವಾರು ವರ್ಷಗಳಿಂದ ವಾಸವಾಗಿದ್ದು, ಈ ಸರ್ವೇ ನಂಬರ್ ನಲ್ಲಿ ಮೂರುವರೆ ಎಕರೆ ಜಮೀನು ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದರು. ಈಗ ಆ ಜಮೀನಿನಲ್ಲಿ 2 ಎಕರೆಯಷ್ಟು ಜಮೀನಿನಲ್ಲಿ ಕೆಇಬಿ ಇಲಾಖೆಯ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ 110 ಕೆ ವಿ ಯ ವಿದ್ಯುತ್ ಸ್ಥಾವರ ಸ್ಥಾಪನೆಗೆ ಮುಂದಾಗಿರುವುದು ಸರಿಯಲ್ಲ ಎಂದು ತಾಲ್ಲೂಕು ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ರಾಘವೇಂದ್ರ ನಾಯ್ಕ್ ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಬಂಜಾರ ಸಮಾಜದ ಪಾರಿಬಾಯಿ ವಿಧವೆಯಾಗಿದ್ದು, ಇವರು ಜನಿಸಿದ ಅಂಜನಾಪುರದ ಕೊರ್ಲಳ್ಳಿ ಗ್ರಾಮದ ಗ್ರಾಮ ಠಾಣಾದಲ್ಲಿ ಒಟ್ಟು 89 ಎಕರೆ ಭೂ ಪ್ರದೇಶದಲ್ಲಿ ಪಾರಿಬಾಯಿಯ ತಂದೆ ನಾಗರಾಜ್ ನಾಯ್ಕ್ ರವರು ನೂರಾರು ವರ್ಷಗಳಿಂದ ಮೂರುವರೆ ಎಕರೆ ಜಮೀನು ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದರು. ಈ ಜಮೀನಿನಲ್ಲಿ ಸುಮಾರು ಎರಡು ಎಕರೆಯಷ್ಟರಲ್ಲಿ ತಾಲ್ಲೂಕಿನ ಶಾಸಕರ ಆದೇಶದ ಮೇರೆಗೆ ಕೆಇಬಿಯವರು ವಿದ್ಯುತ್ ಸ್ಥಾವರ (ಗ್ರಿಡ್) ಸ್ಥಾಪನೆ ಮಾಡಲು ಹೊರಟಿದ್ದಾರೆ. ಇಲ್ಲಿ ಒಟ್ಟು ನಾಲ್ಕು ಗ್ರಾಮ ಠಾಣಾಗಳಿದ್ದರೂ, ಅಲ್ಲಿ ಮೇಲ್ವರ್ಗದ ಮತ್ತು ಬಿಎಸ್ವೈ ರವರ ಸಂಬಂಧಿಕರ ಜಮೀನುಗಳಿರುವುದರಿಂದ ಅಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣ ಮಾಡದೇ, ಕೆಳವರ್ಗದ ಜನರಾದವರ ಮತ್ತು ಅಲ್ಪ ಪ್ರಮಾಣದ ಭೂಮಿ ಹೊಂದಿರುವ ಜಮೀನಿನುಗಳಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ ಎಂದರು.
ಕೊರಟಿಗೆರೆ ನಾಗರಾಜ್ ನಾಯ್ಕ್ 50-53 ರಲ್ಲಿ ಅರ್ಜಿ ಸಲ್ಲಿಸದರೂ ಅವರಿಗೆ ಇದುವರೆಗೂ ಯಾವುದೇ ರೀತಿಯ ಜಮೀನಿನ ಮಂಜುರಾತಿ ಪತ್ರ ಅಥವಾ ಹಕ್ಕು ಪತ್ರ ನೀಡಿಲ್ಲ. ಅಲ್ಲದೆ ಇದೇರೀತಿ ತಾಲ್ಲೂಕಿನ ಮುಳುಕೊಪ್ಪ ಗ್ರಾಮದಲ್ಲೂ ಕೂಡ ಇಂತಹ ಘಟನೆ ನಡೆದಿದೆ. ಸುಮಾರು 150 ಎಕರೆ ಜಾಗೆ ಖಾಲಿ ಇದ್ದು, ಅಲ್ಲಿ ಅರ್ಧ ಮುಕ್ಕಾಲು ಎಕರೆ ಜಮೀನು ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದ ಸುಮಾರು 30-40 ಕುಟುಂಬಗಳಿಗೂ ಸಹ ಮೇಲ್ವರ್ಗದ ಜನರಿಂದ ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ. ಅಲ್ಲದೆ
ಉಡುಗುಣಿಯಲ್ಲಿ ಅಕ್ಕಮಹಾದೇವಿ ಪುತ್ಥಳಿ ನಿರ್ಮಾಣಕ್ಕಾಗಿ, ಅಲ್ಲಿನ ತಾಂಡಾದಲ್ಲಿ ಕೂಲಿ, ಹಮಾಲಿ ಮಾಡಿ ಜೀವನ ಸಾಗಿಸುತ್ತಿದ್ದ 7-8 ಕುಟುಂಬದ ಜಮೀನು ವಶಕ್ಕೆ ಅಕ್ಕಮಹಾದೇವಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಇಂತಹ ಬಹಳ ಉದಾಹರಣೆ ಇದೆ. ಉದ್ದೇಶಪೂರ್ವಕ ನಮ್ಮ ಬಂಜಾರ ಜಾತಿಯ ಜನಾಂಗವನ್ನು ತುಳಿಯುವ ಕೆಲಸ ಆಗುತ್ತಿದೆ.ಇವರು ಪೊಲೀಸರಿಗೆ ದೂರು ನೀಡಿದ್ದರು ಇವರಿಗೆ ನ್ಯಾಯ ಒದಗಿಸುವ ಕೆಲಸ ಆಗುತ್ತಿಲ್ಲ.
ಇವರು ನ್ಯಾಯ ಕೇಳಲು ಶಾಸಕರ ಮನೆಗೆ ಹೋದಾಗ ಗುರುಮೂರ್ತಿ ಅಮಾನುಷವಾಗಿ ನಡೆಸಿಕೊಂಡಿದ್ದಾರೆ ತೋರಿಕೆಗೆ ಮಾತ್ರ ಎಲ್ಲ ಜಾತಿ ಜನಾಂಗಕ್ಕೆ ನಾಯಕ ಎನ್ನುವುದು ಬೇಡ ಅಧಿಕಾರ ಶಾಶ್ವತ ಅಲ್ಲ, ಕೇವಲ ಭಾಷಣಗಳಲ್ಲಿ ಎಲ್ಲಾ ಜನಾಂಗದವರಿಗೆ ನ್ಯಾಯ ಒದಗಿಸುವಲ್ಲಿ ಶ್ರಮಿಸಿದ್ದಾರೆ ಎಂದು ಹೈಳಿಕೊಳ್ಳುವ ಇವರು, ಎಲ್ಲಿಂದಲೋ ಬಂದ ಯಡಿಯೂರಪ್ಪ ರವರಿಗೆ ತಾಲ್ಲೂಕಿನ ಬಂಜಾರ ಸಮಾಜದವರು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗದವರು ಎಲ್ಲರೂ ಸೇರಿ ಅವರ ಗೆಲುವಿಗೆ ಮತ ನೀಡಿದ್ದಾರೆ. ಒಂದು ವೇಳೆ ಇವರಿಗೆ ನ್ಯಾಯ ಸಿಗದಿದ್ದರೆ ಇವರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ಧಿಗೋಷ್ಠಿ ಮಲ್ಲಿಕ್ ನಾಯ್ಕ್, ಪಾರಿಬಾಯಿ, ಜಯಾಬಾಯಿ, ಸಾಕಿ ಬಾಯಿ ಮಂಜುಳಬಾಯಿ ಇದ್ದರು.