ಉಪವಿಭಾಗಾಧಿಕಾರಿ ನಾಗರಾಜ್ ಮಂಗಳೂರಿಗೆ ವರ್ಗಾವಣೆ !

0
371

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಚ್. ಎಲ್ ನಾಗರಾಜ್ ಅವರಿಗೆ ಸರ್ಕಾರ ಅಪರ ಜಿಲ್ಲಾಧಿಕಾರಿಯಾಗಿ ಬಡ್ತಿ ನೀಡಲಾಗಿ ಮಂಗಳೂರಿಗೆ ವರ್ಗಾಯಿಸಲಾಗಿದೆ.

ಜಿಲ್ಲೆಯಲ್ಲಿ ಉಪ ವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕೆರೆಗಳ ಸಂರಕ್ಷಣೆ, ಬಾಕಿ ಉಳಿದ ಪ್ರಕರಣಗಳ ಇತ್ಯರ್ಥಕ್ಕೆ ವಿಶೇಷ ಗಮನ ನೀಡಿ ಜನಮನ್ನಣೆ ಗಳಿಸಿವುದರ ಜೊತೆಗೆ ರಾಜ್ಯ ಸರ್ಕಾರದಿಂದ ಪ್ರಶಂಸೆಯನ್ನು ಸಹ ಗಳಿಸಿದ್ದರು.

ವಿಷನ್ ಚಿಕ್ಕಮಗಳೂರು ಎನ್ನುವ ತಂಡವೊಂದನ್ನು ರಚಿಸಿಕೊಂಡು, ಜಿಲ್ಲೆಯಲ್ಲಿನ ಕೆರೆಗಳ ಒತ್ತುವರಿ ತೆರವು ಗುಳಸಿ ಅಭಿವೃದ್ಧಿಗೆ ಆದ್ಯತೆ ಕೊಟ್ಟಿದ್ದರು.

ಆತ್ಮೀಯವಾಗಿ ಮಾತನಾಡಿ ಅವರು, ಬಡ್ತಿ ಸಿಕ್ಕಿರುವುದು ಸಂತಸದ ವಿಷಯ ಆದರೆ ಜಿಲ್ಲೆಯಿಂದ ವರ್ಗವಾಗಿ ಹೊಗುತ್ತಿರುವುದು ಬೇಸರ ತಂದಿದೆ ಎಂದರು.

ಜಾಹಿರಾತು

LEAVE A REPLY

Please enter your comment!
Please enter your name here