ಊಟ ಮುಗಿಸಿಕೊಂಡು ಶಿವಮೊಗ್ಗಕ್ಕೆ ವಾಪಸ್ ಆಗುವಾಗ ಹೊತ್ತಿ ಉರಿದ ಸ್ಕೋಡಾ ಕಾರು ! ಓರ್ವ ಮೃತ್ಯು, ಇಬ್ಬರಿಗೆ ಗಾಯ !!

0
1081

ಶಿವಮೊಗ್ಗ: ಸಕ್ರೆಬೈಲಿನ ಹತ್ತಿರ ಗಾಜನೂರು ರಸ್ತೆಯಲ್ಲಿ ಸ್ಕೋಡಾ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ‌ ಬೆಂಕಿ ಹೊತ್ತಿ ಉರಿದು ಕಾರಿನಲ್ಲಿದ್ದ ಮೂವರಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.

ಶಿವಮೊಗ್ಗದ ವೆಂಕಟೇಶ್ ನಗರದ ಸನ್ನತ್ (22) ಮೃತ ಯುವಕ ಎಂದು ಗುರುತಿಸಲಾಗಿದೆ. ಭದ್ರಾವತಿ ತಾಲೂಕಿನ ಉಜ್ಜನೀಪುರ ಗ್ರಾಮದ ನಿವಾಸಿ ಹನೋಕ್ ಹಾಗೂ ಜನ್ನಾಪುರದ ಋದ್ವಿಕ್ ಎಂಬುವವರು ಗಾಯಗೊಂಡಿದ್ದು ಇವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಡಗದ್ದೆಗೆ ಊಟಕ್ಕೆ ತೆರಳಿದ್ದ ಮೂವರು ಊಟ ಮುಗಿಸಿಕೊಂಡು ಶಿವಮೊಗ್ಗಕ್ಕೆ ತೆರಳುವಾಗ ಕೆಂಪೇಗೌಡರ ಹೊಟೇಲ್ ಮುಂದಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ತುಂಗಾನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹುಲಿಕಲ್ ಘಾಟ್’ನಲ್ಲಿ ಭಸ್ಮವಾದ ಕಾರು !

ಶಂಕರನಾರಾಯಣದಿಂದ ಹೊನ್ನಾಳಿಗೆ ತೆರಳುತ್ತಿದ್ದ ಕಾರೊಂದು ಹುಲಿಕಲ್ ಘಾಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಘಟನೆ ಇಂದು ಸಂಜೆ ಸಂಭವಿಸಿದೆ.

ಕಾರಿನಲ್ಲಿ ಚಾಲಕ ಸೇರಿದಂತೆ ಐದು ಮಂದಿ ಪ್ರಯಾಣಿಕರಿದ್ದು ಎಲ್ಲರೂ ಸುರಕ್ಷಿತವಾಗಿದ್ದು, ವಿಷಯ ತಿಳಿದು ಕೂಡಲೇ ಹೊಸನಗರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದರಾದರೂ ಅಷ್ಟರಲ್ಲಾಗಲೇ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿತ್ತು.

ಈ ಘಟನೆ ಉಡುಪಿ ಜಿಲ್ಲೆಯ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜಾಹಿರಾತು

LEAVE A REPLY

Please enter your comment!
Please enter your name here