ಎಂ ಗುಡ್ಡೆಕೊಪ್ಪ ಗ್ರಾಪಂ ಜಾಗ ವಶಕ್ಕೆ…. ಮಹಿಳಾ ಸಭಾಭವನ ನಿರ್ಮಿಸುವ ಭರವಸೆ: ಮಹೇಂದ್ರ

0
795

ಹೊಸನಗರ: ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕೊಪ್ಪದ ಸರ್ಕಲ್ ಸಾಗರಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು 20 ಲಕ್ಷ ಬೆಲೆ ಬಾಳುವ ಜಾಗವಿದ್ದು ಅದನ್ನು ಬಲಾಡ್ಯರು ಬೇಲಿ ಹಾಕಿಕೊಂಡಿದ್ದರು‌.

ಆ ಜಾಗದಲ್ಲಿ ಒಂದು ಸಾರ್ವಜನಿಕ ಬಾವಿಯಿದ್ದು ಅದರ ನೀರು ಕುಡಿಯಲು ಯೋಗ್ಯವಿಲ್ಲವೆಂದು ಅಲ್ಲಿನ ಸಾರ್ವಜನಿಕರು ಉಪಯೋಗಿಸುತ್ತಿರಲಿಲ್ಲ. ಅದನ್ನು ಮನಗಂಡ ಆ ಭಾಗದ ಗ್ರಾಮ ಪಂಚಾಯಿತಿ ಸದಸ್ಯ ಮಹೇಂದ್ರರವರು ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಗವನ್ನು ಗ್ರಾಮ ಪಂಚಾಯಿತಿಯ ವಶಕ್ಕೆ ಪಡೆದು ಸುಮಾರು 20 ಅಡಿ ಅಗಲ 50 ಅಡಿ ಉದ್ದದ ಜಾಗಕ್ಕೆ ಕಲ್ಲುಕಂಬದ ಬೇಲಿ ನಿರ್ಮಿಸಿ ಗ್ರಾಮ ಪಂಚಾಯಿತಿಯ ಅಧೀನಕ್ಕೆ ಪಡೆದುಕೊಂಡಿದ್ದು ಮುಂದಿನ ದಿನದಲ್ಲಿ ಕುಡಿಯಲು ಯೋಗ್ಯವಿಲ್ಲದ ಬಾವಿಯನ್ನು ಸರಿ ಪಡಿಸಲಾಗುವುದು ಅಥವಾ ಯೋಗ್ಯವಾಗಿಲ್ಲವಾದಲ್ಲಿ ಮುಚ್ಚಿಸಲಾಗುವುದು. 20 ಅಡಿ ಉದ್ದ ಹಾಗೂ 50 ಅಗಲದ ಜಾಗದಲ್ಲಿ ಮುಂದಿನ ದಿನದಲ್ಲಿ ಗ್ರಾಮ ಪಂಚಾಯಿತಿಯ ಅನುದಾನದಲ್ಲಿ ಮಹಿಳಾ ಸಬಾಭವನ ನಿರ್ಮಿಸುವ ಯೋಜನೆಯನ್ನು ರೂಪಿಸಿಕೊಂಡಿದ್ದು ಎಲ್ಲ ಸದಸ್ಯರು ಒಪ್ಪಿದರೆ ಆ ಜಾಗದಲ್ಲಿ ಸಭಾ ಭವನ ಇಲ್ಲವೇ ಗ್ರಾಮಸ್ಥರಿಗೆ ಅನುಕೂಲಕ್ಕೆ ಬಳಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಹೇಂದ್ರ, ಗ್ರಾಮ ಪಂಚಾಯಿತಿ ಪಿಡಿಓ ಬಸವರಾಜ್, ಗ್ರಾಮ ಪಂಚಾಯಿತಿ ಅಧಿಕಾರಿ ವರ್ಗದ ಧರ್ಮಪ್ಪ ಗ್ರಾಮಸ್ಥರಾದ ಗಣೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ವರದಿ: ಹೆಚ್.ಎಸ್.ನಾಗರಾಜ್
ಜಾಹಿರಾತು

LEAVE A REPLY

Please enter your comment!
Please enter your name here