ಎಂ ಗುಡ್ಡೆಕೊಪ್ಪ ಗ್ರಾಪಂ ನೂತನ ಅಧ್ಯಕ್ಷರ ಆಯ್ಕೆಯಲ್ಲಿ ಏನೆಲ್ಲಾ ಹೈಡ್ರಾಮ ನಡೆಯಿತು ಗೊತ್ತಾ ?

0
1243

ಹೊಸನಗರ: ತಾಲ್ಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಸವಿತಾ ರಮೇಶ್‌ರವರು ಆಯ್ಕೆಯಾಗಿದ್ದಾರೆ.

ಎರಡುವರೆ ವರ್ಷದ ಕಾಲಾವಧಿಗಾಗಿ ಬಿಜೆಪಿ ಬೆಂಬಲಿತ ಪಕ್ಷದ ಇಬ್ಬರು ಸದಸ್ಯರನ್ನು ಒಂದುಕಾಲು ವರ್ಷ ಆಡಳಿತ ಚುಕ್ಕಾಣಿ ಹಿಡಿಯಬೇಕೆಂದು ಬಿಜೆಪಿಯ ಹಿರಿಯ ಮುಖಂಡರ ಆಶ್ವಾಸನೆಯ ಬೇರೆಗೆ ಹಿಂದಿನ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದ ನಂದಾಕುಮಾರಿಯವರು ಒಂದುಕಾಲು ವರ್ಷ ಆಡಳಿತ ನಡೆಸಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಎರಡನೇ ಅವಧಿಗಾಗಿ ಇಂದು ಗ್ರಾಮ ಪಂಚಾಯಿತಿಯ ಆವರಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿದ್ದು ಅಧ್ಯಕ್ಷರ ಚುನಾವಣೆಯಲ್ಲಿ ಸವಿತಾ ರಮೇಶ್‌ರವರು 4 ಮತಗಳ ಅಂತರದಿಂದ ಜಯಗಳಿಸಿದರು.

ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 13 ಸದಸ್ಯರ ಬಲವಿದ್ದು ಬಿಜೆಪಿ ಬೆಂಬಲಿತರು 7 ಸದಸ್ಯರು ಹಾಗೂ 6 ಕಾಂಗ್ರೆಸ್ ಬೆಂಬಲಿತ ಸದಸ್ಯರು ಇರಬೇಕಾಗಿತ್ತು. ಆದರೆ, ಸುಧಾರವರು ಚುನಾವಣಾ ಪ್ರಕ್ರಿಯೆಗೆ ಗೈರಾಗಿರುವುದರಿಂದ ಬಿಜೆಪಿಗೆ 7 ಸದಸ್ಯರ ಬಲ ಹಾಗೂ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ದಿವ್ಯಾ ಪ್ರವೀಣ್‌ರವರಿಗೆ 5 ಮತಗಳು ಪಡೆಯಬೇಕಾಗಿದ್ದು ಆದರೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಒಂದು ಮತವನ್ನು ಬೆಜೆಪಿಗೆ ಒಲವು ತೋರಿಸಿರುವುದರಿಂದ ಬಿಜೆಪಿ ಬೆಂಬಲತ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸವಿತಾ ರಮೇಶ್‌ರವರಿಗೆ 8 ಮತಗಳು ಹಾಗೂ ದಿವ್ಯಾ ಪ್ರವೀಣ್‌ರವರು 4 ಮತಗಳು ಪಡೆದರು.

ಈ ಚುನಾವಣೆಯ ಪ್ರಕ್ರಿಯೆಯನ್ನು ಹೊಸನಗರದ ಸಹಾಯಕ ಕೃಷಿ ಅಧಿಕಾರಿ ಶರಣಗೌಡ ಬೀರದಾರ್ ನಡೆಸಿಕೊಟ್ಟರು. ಸಹಾಯಕರಾಗಿ ಗ್ರಾಮ ಪಂಚಾಯಿತಿಯ ಪಿಡಿಓ ಅಂಬಿಕಾ, ಚಂದ್ರಶೇಖರ್, ಧರ್ಮರಾಜ್‌ರವರು ನಡೆಸಿಕೊಟ್ಟರು.

ಅಡ್ಡ ಮತದಾನ ಪಕ್ಷದಿಂದ ಬಹಿಷ್ಕಾರ :

ಎಂಗುಡ್ಡೆಕೊಪ್ಪ ಗಾಮ ಪಂಚಾಯಿತಿಯ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 6ಜನ ಸದಸ್ಯರಿದ್ದು ಸುಧಾರವರು ಚುನಾವಣೆಯ ಪ್ರಕ್ರಿಯೆಗೆ ಬಂದಿರಲಿಲ್ಲ ಆದರೆ 5 ಜನ ಸದಸ್ಯರಲ್ಲಿ ಒಬ್ಬರು ಬಿಜೆಪಿಗೆ ಅಡ್ಡ ಮತದಾನ ಮಾಡಿದ್ದು ಈ ಸದಸ್ಯರಿಗೆ ಪಕ್ಷದ ನಿಷ್ಠೆಯನ್ನು ಮರೆತು ಬಿಜೆಪಿ ಪಕ್ಷವನ್ನು ಬೆಂಬಲಿಸಿದ್ದಾರೆ‌. ಈ ಸದಸ್ಯರನ್ನು ಪತ್ತೆ ಮಾಡಿ ಸಭೆ ನಡೆಸಿ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸುವುದಾಗಿ ಕಾಂಗ್ರೆಸ್ ಪಕ್ಷದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿಯವರು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here