ಹೊಸನಗರ: ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆ ನಡೆದು ಸುಮಾರು ಎರಡು ವರ್ಷ ಕಳೆದಿದೆ. ಒಂದೂವರೆ ವರ್ಷಗಳ ಹಿಂದೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಕಾರ್ಯ ಮುಗಿದಿದ್ದು ಆದರೆ, ಹೊಸನಗರ ತಾಲ್ಲೂಕು ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಬಿಜೆಪಿ ಬೆಂಬಲಿತ ನಂದಾಕುಮಾರಿ ಆಯ್ಕೆಯಾಗಿದ್ದರು ಬಿಜೆಪಿ ಪಕ್ಷದ ಹೊಂದಾಣಿಕೆ ಹಾಗೂ ಹಿರಿಯ ಮುಖಂಡರ ನೇತೃತ್ವದಲ್ಲಿ ಅಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಒಪ್ಪಂದ ಮಾಡಿಕೊಂಡಿದ್ದು ನಂದಾಕುಮಾರಿ ಒಂದು ಕಾಲು ವರ್ಷ ಹಾಗೂ ಬಿಜೆಪಿಯ ಸವಿತಾ ರಮೇಶ್ರವರು ಒಂದು ಕಾಲು ವರ್ಷ ಎಂದು ಒಪ್ಪಂದ ಮಾಡಿಕೊಂಡಿದ್ದು ನಂದಾಕುಮಾರಿಯವರು ಒಂದು ಕಾಲು ವರ್ಷ ಆಡಳಿತ ಪೂರೈಸಿ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರ ಒಪ್ಪಂದದ ಪ್ರಕರ ಸವಿತಾ ರಮೇಶ್ರವರು ಜುಲೈ 6ನೇ ತಾರೀಖು ಅಧ್ಯಕ್ಷರ ಚುನಾವಣೆ ನಡೆಯಲಿದ್ದು ಸವಿತಾ ರಮೇಶ್ರವರು ಅಧ್ಯಕ್ಷರಾಗಲಿದ್ದಾರೆ ಎಂದು ಬಿಜೆಪಿ ಘೋಷಿಸಿದೆ.
ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತರು 7ಜನ ಸದಸ್ಯರಿದ್ದು ಕಾಂಗ್ರೆಸ್ ಬೆಂಬಲಿತ ಸದಸ್ಯರು 6ಜನ ಸದಸ್ಯರಿದ್ದಾರೆ. ಮುಂದಿನ ಅಧ್ಯಕ್ಷರ ಚುನಾವಣೆಯಲ್ಲಿ ಪೈಪೋಟಿ ನಡೆಯುವ ಎಲ್ಲ ಲಕ್ಷಣಗಳು ಕಾಣ ಸಿಗಲಿದೆ ಎಂದು ಹೇಳಲಾಗಿದೆ.
ಸವಿತಾ ರಮೇಶ್, ದಿವ್ಯಾ ಪ್ರವೀಣ್ರವರ ಮಧ್ಯೆ ಭಾರೀ ಪೈಪೋಟಿ :
ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಮಹಿಳಾ ಮೀಸಲಾತಿ ಸರ್ಕಾರ ಘೋಷಿಸಿದ್ದು ಅದರಂತೆ ಎರಡುವರೆ ವರ್ಷ ಮಹಿಳೆಯರೇ ಅಧ್ಯಕ್ಷರಾಗಬೇಕಾಗುತ್ತದೆ ಹಿಂದಿನ ಅಧ್ಯಕ್ಷರ ಸಾಲಿನ ಚುನಾವಣೆಯಲ್ಲಿ ದಿವ್ಯಾ ಪ್ರವೀಣ್ರವರು ಭಾರೀ ಪೈಪೋಟಿ ನೀಡಿದ್ದು ಕೂದಲೆಳೆಯ ಅಂತರದಿಂದ ಅಧ್ಯಕ್ಷ ಸ್ಥಾನ ಕೈತಪ್ಪಿ ಹೋಗಿದ್ದು ಮುಂದಿನ ತಿಂಗಳು ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಚುನಾವಣೆಯಲ್ಲಿ ಭಾರೀ ಪೈಪೋಟಿ ನಡೆಸಲಿದ್ದಾರೆ. ಅವರು ಅಧ್ಯಕ್ಷರಾಗಲೂ ಕೇವಲ ಒಂದು ಸದಸ್ಯರ ಬಲ ಸಾಕು ಅದನ್ನು ಶತಯಗಾತಾಯ ಪಡೆದೆ ಪಡೆಯುತ್ತೇವೆ ಎಂಬ ಹುಮ್ಮನಿಸಿನಿಂದ ಕಣಕ್ಕೆ ಇಳಿಯಲಿದ್ದಾರೆ.
ಅಧ್ಯಕ್ಷರ ಚುನಾವಣೆಗೆ ಹಣದ ಹೊಳೆ ಹರಿಯುವ ಸಂಭವ :
ಈ ಭಾರೀ ನಡೆಯುವ ಅಧ್ಯಕ್ಷರ ಚುನಾವಣೆಯಲ್ಲಿ ಹಣದ ಹೊಳೆ ಹರಿಯುವ ಸಂಭವವಿದ್ದು ಸವಿತಾ ರಮೇಶ್ ಬೆಂಬಲಕ್ಕೆ ಶಾಸಕರಾದ ಹರತಾಳು ಹಾಲಪ್ಪ, ಗೃಹ ಮಂತ್ರಿಯಾದ ಆರಗ ಜ್ಞಾನೇಂದ್ರ, ಅಂಬೇಡ್ಕರ್ ನಿಗಮದ ನಿರ್ದೆಶಕರಾದ ಎನ್.ಆರ್. ದೇವಾನಂದ್, ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ಗಣಪತಿ ಬಿಳಗೋಡು, ಉಮೇಶ್ ಕಂಚುಗಾರ್, ಗುರುರಾಜ್ರವರಿದ್ದು ದಿವ್ಯಾ ಪ್ರವೀಣ್ರವರ ಪರವಾಗಿ ರಾಜಕೀಯ ಚಾಣಕ್ಯ ಕಲಗೋಡು ರತ್ನಾಕರ್, ರಾಜಕೀಯ ಪ್ರವೀಣ ಹಿರಿಯರಾದ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ ಹಾಗೂ ಕಿಮ್ಮನೇ ರತ್ನಾಕರ್, ಆರ್.ಎಂ. ಮಂಜುನಾಥ ಗೌಡ, ಹಾಲಗದ್ದೆ ಉಮೇಶ್, ತಾಲ್ಲೂಕು ಪಂಚಾಯಿತಿಯಲ್ಲಿ ಪಳಗಿದ ಮಾಜಿ ಸದಸ್ಯರಾದ ಚಂದ್ರಮೌಳಿ, ಎರಗಿ ಉಮೇಶ್, ಹಿರಿಯ ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀನಿವಾಸ್ ಕಾಮತ್, ಬಿ.ಜಿ.ನಾಗರಾಜ್ ಹಾಗೂ ಹೊಸನಗರ-ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪನವರನ್ನು ಎದುರು ಹಾಕಿಕೊಂಡು ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ಕಾರ್ಯಾಲಯವನ್ನು ಉದ್ಘಾಟಿಸುವುದರ ಜೊತೆಗೆ ಎಲ್ಲ ರಾಜಕೀಯ ನಾಯಕರುಗಳಿಗೆ ಎದೆಯೊಡ್ಡಿ ದಿಟ್ಟತನದಿಂದ ಕೆಲಸ ಮಾಡಿಸುವ ಹಾಗೂ ಇಂಥಹ ಕಠಿಣ ಪರಿಸ್ಥಿತಿಯಲ್ಲಿ ದಿಟ್ಟತನದಿಂದ ಎದುರಿಸಿ ಗೆಲ್ಲಿಸುವ ಅದೇ ಗ್ರಾಮ ಪಂಚಾಯಿತಿಯ ಸದಸ್ಯರುಗಳಾದ ಕಾಲಸಸಿ ಸತೀಶ್ ಹಾಗೂ ಮಹೇಂದ್ರರವರು ಜೊತೆಗಿರುವಾಗ ದಿವ್ಯಾ ಪ್ರವೀಣ್ರವರು ಸೋಲುವ ಮಾತೆಯಿಲ್ಲ ಎಂದು ಹೇಳಲಾಗಿದೆ.
ಏನೇ ಆಗಲಿ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಚುನಾವಣೆಯು ಜುಲೈ 6ರಂದು ನಡೆಯಲಿದ್ದು ಈ ಚುನಾವಣೆಗೆ ಮುಂಚಿತವಾಗಿ ಚುನಾವಣೆ ಪ್ರಕ್ರಿಯೇ ಪ್ರಾರಂಭವಾಗುತ್ತಿದ್ದಂತೆ ಸಿನಿಮಾ ನಾಟಕ ಪ್ರಾರಂಭವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಲಾಗುತ್ತಿದೆ.
Related