ಎಂ ಗುಡ್ಡೆಕೊಪ್ಪ ಗ್ರಾಪಂ ಸದಸ್ಯ ಶ್ರೀಧರ್‌ರವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ ಹಾಗೂ ಗ್ರಾಪಂಯ ಭ್ರಷ್ಠಾಚಾರದ ವಿರುದ್ಧ ಉನ್ನತ ತನಿಖೆ ನಡೆಸಲಿ: ಕಾಲಸಸಿ ಸತೀಶ್

0
924

ಹೊಸನಗರ: ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಪ್ರಭಾರ ಅಭಿವೃದ್ಧಿ ಅಧಿಕಾರಿ ಮುರುಗೇಶ್‌ರವರು ಲಂಚ ಪಡೆಯುವ ಸಂದರ್ಭದಲ್ಲಿ ಮಾ.30ರಂದು ಲೋಕಯುಕ್ತ ಬಲೆಗೆ ಬಿದ್ದಿದ್ದು ಮುರುಗೇಶ್ ವಿರುದ್ಧ ಕಲಂ 7 ಎ ಪಿ.ಸಿ ಆಕ್ಟ್ 1988 ರ ಪ್ರಕರಣ ದಾಖಲಿಸಿ ಲೋಕಯುಕ್ತ ಇಲಾಖೆ ತನಿಖೆ ಕೈಗೊಂಡಿದ್ದಾರೆ. ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಭ್ರಷ್ಠಾಚಾರಕ್ಕೆ ಕಡಿವಾಣ ಹಾಕಬೇಕು ಹಾಗೂ ನಡೆದ ಭ್ರಷ್ಠಾಚಾರಕ್ಕೆ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಬೇಕೆಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕಾಲಸಸಿ ಸತಿಶ್‌ರವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಹೊಸನಗರ ತಾಲ್ಲೂಕು ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ಆವರಣದಲ್ಲಿ ಪತ್ರಿಕಾಘೋಷ್ಠಿ ನಡೆಸಿ ಅವರು ಮಾತನಾಡಿ, ಲಂಚ ಪ್ರಕರಣದಲ್ಲಿ ಲೋಕಯುಕ್ತರಿಗೆ ದೂರು ನೀಡಿದ ಸತೀಶ್‌ರವರಿಗೆ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಸದಸ್ಯ ಶ್ರೀಧರ್‌ರವರು ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೇ ಇನ್ನೂ 5ವರ್ಷ ನಮ್ಮದೇ ಗ್ರಾಮ ಪಂಚಾಯಿತಿಯ ಆಡಳಿತ ಇರುವುದು ನೀವು ಹೇಗೆ ನಿಮ್ಮ ಜಾಗಕ್ಕೆ ಖಾತೆಯ ಜೊತೆಗೆ 9ಮತ್ತು 11 ಮಾಡಿಸಿಕೊಳ್ಳುತ್ತಿರಿ ಎಂದು ನೋಡುತ್ತೇವೆ ಎಂದು ಜೀವ ಹೆದರಿಕೆ ಹಾಕಿದ್ದಾರೆ ಅವರು ಈ ಬಗ್ಗೆ ಹೊಸನಗರ ಠಾಣೆಗೆ ದೂರು ದಾಖಲಿಸಿದರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ ತಕ್ಷಣ ದೂರು ದಾಖಲಿಸಿಕೊಳ್ಳಬೇಕು ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಶ್ರೀಧರ್‌ರವರ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.

ಧ್ವನಿ ಸುರುಳಿ ಪ್ರಚಾರ:

ಮಾ. 28ರಂದು ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಶ್ರೀಧರ್, ಅಭಿವೃದ್ಧಿ ಅಧಿಕಾರಿ ಮುರುಗೇಶ್‌ರವರು ಹಾಗೂ ಲೋಕಯುಕ್ತರಿಗೆ ದೂರು ನೀಡಿದ ಸತೀಶ್‌ರವರ ಧ್ವನಿ ಸುರುಳಿ ಪ್ರಚಾರಗೊಂಡಿದ್ದು ಧ್ವನಿ ಸುರುಳಿಯಲ್ಲಿರುವಂತೆ ಮುರುಗೇಶ್ ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯ ಶ್ರೀಧರ್‌ರವರು ಮಾತನಾಡಿದ್ದು 9ಮತ್ತು 11 ಖಾತೆಯನ್ನು ಮಾಡಿಕೊಡಬೇಕಾದರೇ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ 50ಸಾವಿರ ಲಂಚ ನೀಡಬೇಕು ಈ ಹಿಂದೆ ಅಬ್ಬುಸಾಬ್‌ರವರು ಖಾತೆ ಮಾಡಿಸಿಕೊಳ್ಳುವಾಗ ಕಾರ್ಯನಿರ್ವಹಣಾಧಿಕಾರಿಗಳಿಗೆ 1ಲಕ್ಷ ರೂ. ನೀಡಿ ಖಾತೆ ಮಾಡಿಸಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರಾದ ಸವಿತಾ ರಮೇಶ್ ಹಾಗೂ ಓಂಕೇಶಗೌಡರವರಿಗೆ ಅವರ ಕ್ಷೇತ್ರವಾಗಿರುವುದರಿಂದ ಅವರಿಗೂ ಲಂಚ ಹಣ ನೀಡಬೇಕು ಎಂದು ಮಾತನಾಡಿದ ಬಗ್ಗೆ ಧ್ವನಿ ಸುರುಳಿ ನಮ್ಮ ಬಳಿ ಇದ್ದು ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಕ್ಷಣ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಲಿ ಇಲ್ಲವಾದರೆ ಇದು ಗೃಹ ಮಂತ್ರಿ ಆರಗ ಜ್ಞಾನೇಂದ್ರರವರಿಗೆ ಹಾಗೂ ಕ್ಷೇತ್ರದ ಶಾಸಕ ಹಾಲಪ್ಪನವರಿಗೆ ಕೆಟ್ಟ ಹೆಸರು ಬರುತ್ತದೆ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.

ಭ್ರಷ್ಠಾಚಾರದಲ್ಲಿ ಕಾರ್ಯರ್ನಿಹಣಾಧಿಕಾರಿ ಶಾಮೀಲು?

ಹೊಸನಗರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್‌ರವರು ಎಲ್ಲ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಭ್ರಷ್ಠಾಚಾರಕ್ಕೆ ನೇರ ಕಾರಣರಾಗಿದ್ದು ಇವರ ಮಾತು ಕೇಳುವ ಪಿಡಿಓಗಳನ್ನು ಪಿಡಿಒ ಕೇಳಿದ ಜಾಗಗಳಿಗೆ ಹಾಕುತ್ತಿದ್ದು ಪಿಡಿಓಗಳು ತಿಂಗಳ ಲಕ್ಕದಲ್ಲಿ ಲಂಚದಿಂದ ಬಂದಿರುವ ಹಣವನ್ನು ನೇರವಾಗಿ ಇವರ ಕೈಗೆ ಮುಟ್ಟಿಸುತ್ತಿದ್ದಾರೆ ಇವರ ಮಾತು ಕೇಳದ ಪಿಡಿಓಗಳ ಕೆಲಸ ಕಾರ್ಯಗಳು ಕುಠಿತಗೊಳ್ಳುತ್ತಿದೆ ಇವರ ವಿರುದ್ಧವು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಪತ್ರಿಕಾಘೋಷ್ಟಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಂದ್ರ, ಸುಧಾ, ಶಶಿಕಲಾ, ಬೇಬಿ ಮಂಜುನಾಥ್, ಅಣ್ಣಪ್ಪ, ಬೃಂದಾವನ ಪ್ರವೀಣ್, ಕೃಷ್ಣಮೂರ್ತಿಶೆಟ್ಟಿ, ರುದ್ರಪ್ಪ ಗೌಡ, ರಾಮಕೃಷ್ಣ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here