ಎತ್ತಿನಭುಜದಲ್ಲಿ ಕಾಣಿಸಿಕೊಂಡ ಕಾಡಾನೆ ಹಿಂಡು! ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಆತಂಕ !!

0
722

ಮೂಡಿಗೆರೆ : ತಾಲ್ಲೂಕಿನ ಎತ್ತಿನಭುಜ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಸ್ಥಳೀಯರು, ಪ್ರವಾಸಿಗರು ಎಚ್ಚರದಿಂದ ಇರಬೇಕಾದ ಅನಿರ್ವಾರತೆ ಬಂದಿದೆ.

ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಅನೇಕ ಭಾಗದಲ್ಲಿ ಕಾಡಾನೆಗಳು ಗೋಚರವಾಗುತ್ತಿರೋದೇ ಇದಕ್ಕೆ ಕಾರಣ.

ತಾಲ್ಲೂಕಿನ ಬೈರಾಪುರ ಗ್ರಾಮ ವಾರ್ಷಿಕವಾಗಿ ದಾಖಲೆ ಮಳೆ ಬೀಳುವ ಪ್ರದೇಶವಾಗಿದೆ. ಇಲ್ಲಿ ವಾರ್ಷಿಕ 200-300 ಇಂಚು ಮಳೆ ಸುರಿಯುತ್ತೆ. ದಟ್ಟ ಕಾನನ. ಇಲ್ಲಿನ ಶೋಲಾ ಕಾಡುಗಳು ವರ್ಷಪೂರ್ತಿ ನೀರನ್ನ ಹಿಡಿದಿಟ್ಟು ಹರಿಸುವುದರಿಂದ ಕಾಡು ಸದಾ ಹಚ್ಚಹಸಿರಿನಿಂದ ಕಂಗೊಳಿಸುತ್ತೆ. ಕಾಡುಪ್ರಾಣಿಗಳು ಯತೇಚ್ಛವಾಗಿವೆ. ಬೈರಾಪುರ ಗ್ರಾಮದ ಸುತ್ತಮುತ್ತ ಕಾಡಾನೆಗಳು ಹಿಂಡು ಪದೇಪದೆ ಕಾಣಿಸಿ ಕೊಳ್ಳುತ್ತಿರುವುದು ಸ್ಥಳಿಯರಲ್ಲಿ ಭಯ ತಂದಿದೆ. ಎತ್ತಿನಭುಜಕ್ಕೆ ಭೇಟಿ ನೀಡಿದ್ದ ಪ್ರವಾಸಿಗರಿಗೆ ಕಾಡಾನೆಗಳು ದರ್ಶನ ನೀಡಿವೆ.

ಮೂಡಿಗೆರೆ ತಾಲೂಕಿನ, ಬೈರಾಪುರ, ಸಾರಾಗೋಡು, ಕುಂದೂರು, ಗೌಡಹಳ್ಳಿ, ಕೋಗಿಲೆ, ಮೂಲರಹಳ್ಳಿ, ಗುತ್ತಿ, ಬೈರಾಪುರ, ಊರಬಗೆ ಸೇರಿದಂತೆ ಹತ್ತಾರು ಹಳ್ಳಿಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ. ಪ್ರತಿ ವರ್ಷ ಲಕ್ಷಾಂತರ ಮೌಲ್ಯದ ಬೆಳೆ ಕಾಡಾನೆ ಪಾಲಾಗುತ್ತಿದೆ. ಹಾಗಾಗಿ, ಈ ಭಾಗದ ಜನ, ಕಾಡಾನೆಗಳನ್ನ ಸ್ಥಳಾಂತರಿಸಿ, ಪರ್ಯಾಯ ಭೂಮಿ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿ ಎಷ್ಟೋ ವರ್ಷಗಳು ಸಂದಿದ್ದರೂ ಪ್ರಯೋಜನವಾಗಿಲ್ಲ .

ಮೂರ್ನಾಲ್ಕು ವರ್ಷದಲ್ಲಿ ನಾಲ್ಕೈದು ಜನ ಕಾಡಾನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಹೊಲಗದ್ದೆ, ತೋಟಗಳಲ್ಲಿದ್ದ ಆನೆಗಳು ಈಗೀಗ ನಾಡಿಗೂ ಬರುತ್ತದ್ದು ಹಳ್ಳಿಗರು ಭಯಗೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here