ಎಪಿಎಂಸಿ ಮಾರುಕಟ್ಟೆಯನ್ನು ಸಾಗರಕ್ಕೆ ಸಂಯೋಜಿಸಿರುವ ಕ್ರಮವನ್ನು ಖಂಡಿಸಿ ರಿಪ್ಪನ್‌ಪೇಟೆಯಲ್ಲಿ ಜೆಡಿಎಸ್ ಪ್ರತಿಭಟನೆ

0
268

ರಿಪ್ಪನ್‌ಪೇಟೆ: 2005-06 ರಲ್ಲಿ ಅಸ್ಥಿತ್ವಕ್ಕೆ ಬಂದಿದ್ದ ಹೊಸನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಒಂದು ವರ್ಷದ ಅವಧಿ ಮಾತ್ರ ನಾಮ ನಿರ್ದೇಶನ ಮಂಡಳಿ ಕಾರ್ಯನಿರ್ವಹಿಸಿದ್ದು ಉಳಿದ ಮೂರು ಅವಧಿಗೆ ಚುನಾಯಿತ ಪ್ರತಿನಿಧಿಗಳ ಆಡಳಿತ ಮಂಡಳಿ ಕಾರ್ಯನಿರ್ವಹಿಸಿದೆ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆದರ ನಿಗದಿಗೊಳಿಸಿ ನ್ಯಾಯ ಬದ್ದ ಮಾರುಕಟ್ಟೆ ಒದಗಿಸಿ ಸಹಾಯ ಮಾಡುವಂತೆ ದೀರ್ಘಕಾಲದಿಂದ ಹೋರಾಟ ಮಾಡುತ್ತಿದ್ದು ಹೊಸನಗರ ತಾಲ್ಲೂಕಿನ ರೈತರ ಮನವಿಗೆ ಸ್ಪಂದಿಸಿ ಸಾಗರ ಮಾರುಕಟ್ಟೆ ಸಮಿತಿಗೆ ಸಂಯೋಜನೆಗೊಂಡಿದ್ದ ಹೊಸನಗರ ತಾಲ್ಲೂಕ್ ಮಾರುಕಟ್ಟಯನ್ನು ಪ್ರತ್ಯೇಕಿಸಿ ರಾಜ್ಯದ ಉಪಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಹೊಸನಗರ ತಾಲ್ಲೂಕಿನ ಸ್ವಾಯುತ್ತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಮಂಜೂರು ಮಾಡಿದ್ದು ಈಗ ಏಕಾಏಕಿ ಪುನಃ ಸಾಗರ ಎಪಿಎಂಸಿ ಮಾರುಕಟ್ಟೆಗೆ ಸಂಯೋಜಿಸಿರುವ ಕ್ರಮವನ್ನು ವಿರೋಧಿಸಿ ಸೋಮವಾರ ರಾಜ್ಯ ಜೆಡಿಎಸ್ ಮಾಜಿ ಪ್ರಧಾನ ಕಾರ್ಯದರ್ಶಿ ಅರ್.ಎ.ಚಾಬುಸಾಬ್ ತಾಲ್ಲೂಕ್ ಜೆಡಿಎಸ್ ಅಧ್ಯಕ್ಷ ಎನ್.ವರ್ತೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ನಾಡಕಛೇರಿಯ ಉಪತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಹೊಸನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಸ್ಥಿತ್ವಕ್ಕೆ ಬಂದಮೇಲೆ ಕೃಷಿ ಮಾರುಕಟ್ಟಯಲ್ಲಿಯೇ ನ್ಯಾಯ ಬೆಲೆಯಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿದ್ದು ವಾರ್ಷೀಕ 5-6 ಕೋಟಿ ರೂಪಾಯಿಗಳಿಗೂ ಅಧಿಕ ವರಮಾನ ಸರ್ಕಾರಕ್ಕೆ ಜಮಾ ಆಗುತ್ತಿದೆ. ಸುವ್ಯವಸ್ಥೆಯ ಮಾರುಕಟ್ಟೆ ಪ್ರಾಂಗಣಗಳು ದಸ್ತಾನು ಮಳಿಗೆಗಳಿದ್ದು ಸರ್ವಕಾಲಕ್ಕೂ ಶೇಖರಿಸಿ ಸಂರಕ್ಷಿಸಬಲ್ಲ ಉನ್ನತ ಮಟ್ಟದ ತಾಂತ್ರಿಕ ಗೋದಾಮುಗಳಿವೆ ತಾಲ್ಲೂಕಿನ ರಿಪ್ಪನ್‌ಪೇಟೆ ಹೋಬಳಿ ಕೇಂದ್ರವಾದರೂ ಶಿವಮೊಗ್ಗ ಸಾಗರ-ತೀರ್ಥಹಳ್ಳಿ ಮುಂತಾದ ಊರುಗಳಿಗೆ ಸಂಪರ್ಕ ಕೇಂದ್ರವಾಗಿದ್ದು ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಶುಂಠಿ ಬೆಳೆಯುವ ಪ್ರದೇಶವಾಗಿದೆ. ರಿಪ್ಪನ್‌ಪೇಟೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣವು ಉತ್ನತ ಶ್ರೇಣಿಯ ತಾಂತ್ರಿಕ ಗೋದಾಮುಗಳನ್ನು ಹೊಂದಿದ್ದು ಆಹಾರ ಪದಾರ್ಥಗಳು ಕೆಡದಂತೆ ಇಡುವ ಶೈತ್ಯಾಗಾರ ಘಟಕಗಳು ರೈತರಿಗೆ ದೊಡ್ಡಪ್ರಮಾಣದಲ್ಲಿ ಸಹಕಾರಿಯಾಗಿದ್ದು ಇದನ್ನು ಹೊಸನಗರದಲ್ಲಿಯೇ ಉಳಿಸುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ವಿವರಿಸಿರುವ ಮನವಿಯನ್ನು ಸಲ್ಲಿಸುತ್ತಿರುವುದಾಗಿ ಪ್ರತಿಭಟನಾ ನಿರತರು ವಿವರಿಸಿದರು.

ಈ ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡ ಜಿ.ಎಸ್.ವರದರಾಜ್, ಜನಪರ ವೇದಿಕೆ ಅಧ್ಯಕ್ಷ ಆರ್.ಎನ್.ಮಂಜುನಾಥ, ಹೋರಾಟಗಾರ ಟಿ.ಆರ್.ಕೃಷ್ಣಪ್ಪ, ಮಂಜೋಜಿರಾವ್, ದೂನ ಕುಮಾರ, ಮಂಜುನಾಥ ಆಚಾರ್ ನೆವಟೂರು ಇನ್ನಿತರರು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here