ಎಪಿಎಂಸಿ ಹಸ್ತಾಂತರ ವಿರೋಧಿಸಿ ಸಹಕಾರಿ ಸಂಸ್ಥೆಯ ವತಿಯಿಂದ ಮೇ 31 ರಂದು ಪಾದಯಾತ್ರೆ: ವಾಟ್‌ಗೋಡು ಸುರೇಶ್

0
236

ಹೊಸನಗರ: ಸುಮಾರು 12ವರ್ಷಗಳಿಂದ ಲಾಭಂಶದಲ್ಲಿ ನಡೆಯುತ್ತಿರುವ ಹೊಸನಗರ ಕೃಷಿ ಮಾರುಕಟ್ಟೆಯನ್ನು ಏಕಾಏಕಿ ಸರ್ಕಾರ ಸಾಗರ ಕೃಷಿ ಮಾರುಕಟ್ಟೆಗೆ ಹಸ್ತಾಂತರಿಸುವುದನ್ನು ವಿರೋಧಿಸಿ ಹೊಸನಗರ ತಾಲ್ಲೂಕಿನ ನಾಲ್ಕು ಹೋಬಳಿ ಮೂಲಕ ಮೂರು ಹೋಬಳಿಯಿಂದ ಸಹಕಾರಿ ಸಂಘದ ಸದಸ್ಯರಿಂದ ಮೇ 31ನೇ ಮಂಗಳವಾರ ಪಾದಯಾತ್ರೆಯನ್ನು ನಡೆಸುವುದಾಗಿ ಸಹಕಾರಿ ಯುನಿಯನ್ ನಿರ್ದೇಶಕ ವಾಟ್‌ಗೋಡು ಸುರೇಶರವರು ಹೇಳಿದರು.

ಹೊಸನಗರ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಹೊಸನಗರ ತಾಲ್ಲೂಕಿನಲ್ಲಿ ಒಟು 20ಸಾವಿರ ರೈತ ಕುಟುಂಬಗಳಿಗೆ ಈ ಎಪಿಎಂಸಿ ಹಸ್ತಾಂತರಿಸುವುದರಿಂದ ತೊಂದರೆಯಾಗಲಿದೆ ಹೊಸನಗರ ಎಪಿಎಂಸಿಯಲ್ಲಿ ನಾಲ್ಕು ಹೋಬಳಿಯ ರೈತರು ಎರಡೆರಡು ಹೋಬಳಿಗಳು ಇಬ್ಬರು ಶಾಸಕರಿಗೆ ಸೇರುತ್ತದೆ ಈ ಹೋಬಳಿಗಳಲ್ಲಿ 3 ಗ್ರಾಮ ಪಂಚಾಯಿತಿ ಒಂದು ಪಟ್ಟಣ ಪಂಚಾಯಿತಿಗೆ ಒಳಪಡುತ್ತದೆ ನಮ್ಮ ಕ್ಷೇತ್ರಕ್ಕೆ ಇಬ್ಬಿಬ್ಬರು ಶಾಸಕರಾಗಿರುವುದರಿಂದ ಇಬ್ಬರು ಶಾಸಕರು ಹೊಸನಗರ ತಾಲ್ಲೂಕಿನ ಜನತೆಯನ್ನು ಕಡೆಗಣಸುತ್ತಿದ್ದಾರೆ ಇದೇ ರೀತಿ ಮುಂದುವರೆದರೇ ಹೊಸನಗರ ತಾಲ್ಲೂಕು ಕಛೇರಿಯು ಮಾಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ನಮ್ಮ ತಾಲ್ಲೂಕಿನಲ್ಲಿ ಒಟ್ಟು 17 ಸೊಸೈಟಿಗಳ ರೈತರು ದಿನನಿತ್ಯ ವ್ಯಾವಹಾರ ಎಪಿಎಂಸಿ ಮೂಲಕ ವ್ಯಾಪಾರ ಮಾಡುವುದರ ಜೊತೆಗೆ ವ್ಯವಹಾರಗಳು ಇಲ್ಲೆ ಇದೇ ರೈತರಿಗೆ ಸಾಲ ಬೇಕಾದರೆ ಈ ಸಂಸ್ತೆಗಳ ಮೂಲಕವೇ ಸಾಲ ಪಡೆದು ಅಡಿಕೆ ಮಾರಾಟದ ದಿನ ಸಾಲ ತಿಳುವಳಿ ಮಾಡಿಕೊಳ್ಳುತ್ತಾ ದಿನನಿತ್ಯ ತಮ್ಮ ದೈನಂದಿನ ಜೀವನ ನಡೆಸುತ್ತಿದ್ದಾರೆ.

ಅಡಿಕೆ ವ್ಯಾಪಾರಿಗಳಿಗೆ ನಮ್ಮ ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳವ ಜವಾಬ್ದಾರಿ ನಮ್ಮ ಸಹಕಾರಿ ಸಂಸ್ಥೆಗಳ ಮೇಲಿದ್ದು ನನ್ನ ನೇತೃತ್ವದಲ್ಲಿ ಮೇ 31ರಂದು ಪಾದಯಾತ್ರೆ ಕೈಗೊಳ್ಳಲಾಗಿದೆ ಈ ಪಾದಯಾತ್ರೆ ಪಕ್ಷಾತೀತವಾಗಿದ್ದು ಹೊಸನಗರ ತಾಲ್ಲೂಕು ಬಟ್ಟೆಮಲ್ಲಪ್ಪದಿಂದ ಹೊಸನಗರ ರಿಪ್ಪನ್‌ಪೇಟೆಯಿಂದ ಹೊಸನಗರ ಹಾಗೂ ನಗರ ಹೋಬಳಿಯಿಂದ ಹೊಸನಗರಕ್ಕೆ ಪಾದಯಾತ್ರೆ ಕೈಗೊಂಡಿದ್ದು ಸಹಕಾರಿ ಕ್ಷೇತ್ರದಲ್ಲಿ ಎಲ್ಲ ಪಕ್ಷದವರು ಸಹಕಾರಿ ಕ್ಷೇತ್ರದ ಸದಸ್ಯರಾಗಿದು ಪಕ್ಷದ ಎಲ್ಲ ಪಕ್ಷದ ಸದಸ್ಯರು ಈ ಹೋರಾಟಕ್ಕೆ ಬರಬಹುದು ಇದು ಒಂದು ಪಕ್ಷದ ನಿಲುವಲ್ಲ ಹೊಸನಗರ ತಾಲ್ಲೂಕಿನ ರೈತರ ಸಮಸ್ಯೆಯಾಗಿದ್ದು ಎಲ್ಲ ಪಕ್ಷದವರು ಈ ಪಾದಯಾತ್ರಗೆ ಆಗಮಿಸಿ ಎಪಿಎಂಸಿ ಹಸ್ತಾಂತರವನ್ನು ತಪ್ಪಿಸಲು ಕೈಜೋಡಿಸಬೇಕೆಂದು ಕೇಳಿಕೊಂಡರು.

ಈ ಪತ್ರಿಕಾಘೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೆಶಕರಾದ ಎಂ.ಎಂ.ಪರಮೇಶ್, ತುಂಗಾ ಅಡಿಕೆ ಮಂಡಿಯ ಅಧ್ಯಕ್ಷರಾದ ವಿನಯ್‌ಕುಮಾರ್ ದುಮ್ಮ, ಪಟ್ಟಣ ಪಂಚಾಯಿತಿ ಸದಸ್ಯರಾದ ಹಾಲಗದ್ದೆ ಉಮೆಶ್, ಮಾವಿನಕಟ್ಟೆ ಸೊಸೈಟಿಯ ಅಧ್ಯಕ್ಷರಾದ ಲೇಖನಮೂರ್ತಿ, ಕೋಡೂರು ಸೊಸೈಟಿ ಅಧ್ಯಕ್ಷ ವಾಸುದೇವ ಹೆಚ್.ಕೆ., ಕೊಡಚಾದ್ರಿ ಅಡಿಕೆ ಮಂಡಿಯ ವ್ಯವಸ್ಥಾಪಕರಾದ ಬಾಲಚಂದ್ರ, ಸೊನಲೆ ಸುರೇಶ್, ಶಶಿಧರ್, ಬಾಣಿಕ ಜಯಮ್ಮ, ಈಶ್ವರಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here