ಎರಡು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ ಹೊಳೆಯಲ್ಲಿ ಶವವಾಗಿ ಪತ್ತೆ!

0
5392

ಹೊಸನಗರ: ಹೊಸನಗರದ ಚರ್ಚ್ ರಸ್ತೆಯ ನಿವಾಸಿ ಮಬ್ಬೂಲ್ ಅಹಮದ್ ಎಂ (31) ವರ್ಷ ಕಳೆದ ಎರಡು ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದು ಪಟ್ಟಣದ ಕಾಳಿಕಾಪುರ ರಸ್ತೆಯಲ್ಲಿರುವ ಕನ್ನರ್‌ಗುಂಡಿಯ ಹೊಳೆಯಲ್ಲಿ ಬುಧವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ ಕಳೆದ ಕೆಲವು ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿದ್ದು ಈತ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಹೇಳಲಾಗಿದೆ.

ಹೊಸನಗರದ ಇಕ್ಬಾಲ್ (ಶಾಮಿಯಾನ) ಪೀರೂಸಾಬ್ ಮತ್ತು ಸ್ಥಳೀಯರ ಸಹಾಯದಿಂದ ಶವವನ್ನು ದಡಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು.

ಹೊಸನಗರ ಪೋಲಿಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here