ಎರಡು ಪ್ರತ್ಯೇಕ ಅಪಘಾತ ಪ್ರಕರಣ ; ನಾಲ್ವರಿಗೆ ಸಣ್ಣ-ಪುಟ್ಟ ಗಾಯ

0
471

ಮೂಡಿಗೆರೆ : ತಾಲ್ಲೂಕಿನಲ್ಲಿ ಎರಡು ಕಡೆ ನಡೆದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ನಾಲ್ವರಿಗೆ ಸಣ್ಣ-ಪುಟ್ಟ ಗಾಯಗಳಾಗಿರುವುದು ವರದಿಯಾಗಿದೆ.

ಧರ್ಮಸ್ಥಳಕ್ಕೆ ತೆರಳುತ್ತಿದ್ದ ಮಹೇಂದ್ರ ಸ್ಕ್ವಾರ್ಪಿಯೊ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಮರಕ್ಕೆ ಗುದ್ದಿದೆ.

ಆಂಧ್ರಪ್ರದೇಶದ ರಿಜಿಸ್ಟ್ರೇಶನ್ ಹೊಂದಿರುವ ವಾಹನ ಇದಾಗಿದ್ದು ತಾಲ್ಲೂಕಿನ ಮುಗ್ರಹಳ್ಳಿ ಬಸ್ ನಿಲ್ದಾಣದ ಬಳಿಯ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಈ ಘಟನೆ ಸಂಭವಿಸಿದ್ದು ಸ್ಕ್ವಾರ್ಪಿಯೊ ಕಾರಿನಲ್ಲಿ ನಾಲ್ವರಿಗೆ ಸಣ್ಣ-ಪುಟ್ಟ ಗಾಯಾಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮತ್ತೊಂದು ಅಪಘಾತವು ತಾಲ್ಲೂಕಿನ ಜನ್ನಾಪುರ – ಗೋಣಿಬೀಡು ಮಧ್ಯೆ ಸಂಚಾರಿಸುತ್ತಿದ ಸಾರಿಗೆ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಜಾರಿದೆ ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಅನಾಹುತಗಳು ಆಗದೆ ಎಲ್ಲಾ ಪ್ರಯಾಣಿಕರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here