ಎರಡು ಬೈಕ್’ಗಳ ನಡುವೆ ಮುಖಾಮುಖಿ ಡಿಕ್ಕಿ ; ತಂದೆ ಸ್ಥಳದಲ್ಲೇ ಸಾವು ! ಮಗನ ಸ್ಥಿತಿ ಗಂಭೀರ

0
1322

ರಿಪ್ಪನ್‌ಪೇಟೆ: ಇಲ್ಲಿನ ಹೊಸನಗರ ರಸ್ತೆಯ ಗವಟೂರು ಬಳಿ ಇಂದು ಮಧ್ಯಾಹ್ನ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಪರಿಣಾಮ ಓರ್ವ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನಿಬ್ಬರು ತೀವ್ರ ಸ್ವರೂಪದ ಗಾಯಗೊಂಡು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಮೃತ ವೃದ್ದ ಹುಂಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊನ್ನೆಬೈಲು ಗ್ರಾಮದ ಗಣೇಶ (65) ಎಂದು ಗುರುತಿಸಲಾಗಿದೆ. ಒಂದೇ ಬೈಕ್ ನಲ್ಲಿ ತಂದೆ – ಮಗ ಪ್ರಯಾಣಿಸುತ್ತಿದ್ದರು. ಗಾಯಾಳುಗಳು ಮೃತನ ಮಗ ಮಹೇಂದ್ರ (ಮಣಿ) ಹಾಗೂ ಆನಂದಪುರ ಬಳಿಯ ಆಚಾಪುರದ ರಾಜು ಎಂದು ಗುರುತಿಸಲಾಗಿದೆ.

ಈ ಘಟನೆ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here