ಎರಡೂವರೆ ತಿಂಗಳ ಮಗು ಸಾವು ! ಮೆಗ್ಗಾನ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೆಂದು ಪೋಷಕರ ಆರೋಪ

0
1316

ಶಿವಮೊಗ್ಗ : ಚಿಕಿತ್ಸೆ ಫಲಿಸದ ಹಿನ್ನಲೆಯಲ್ಲಿ ಎರಡೂವರೆ ತಿಂಗಳ ಗಂಡು ಮಗುವೊಂದು ಸಾವನ್ನಪ್ಪಿದ್ದು ಮಗುವಿನ ಸಾವಿಗೆ ಮೆಗ್ಗಾನ್ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಮಗುವಿನ ತಂದೆ, ತಾಯಿ ಆರೋಪಿಸಿದ್ದಾರೆ.

ಮೇ. 06 ರಂದು ಎರಡೂವರೆ ತಿಂಗಳಿನ ಮಗುವಿಗೆ ಕಫದ ತೊಂದರೆ ಉಂಟಾಗಿದ್ದರಿಂದ ಮಗುವನ್ನ ರಿಪ್ಪನ್‌ಪೇಟೆಯ ಕರಿಗೆರಸು ಗ್ರಾಮದ ಹಿಂಡ್ಲೆಮನೆಯಿಂದ ಮಗುವನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತೀರ್ಥಹಳ್ಳಿಯ ವೈದ್ಯರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ ಹಿನ್ನಲೆಯಲ್ಲಿ ನಿನ್ನೆ ಸಂಜೆ ಶಿವಮೊಗ್ಗದ‌ ಮೆಗ್ಗಾನ್ ಆಸ್ಪತ್ರೆಗೆ ಮಗುವನ್ನ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ 8.30 ರ ಸುಮಾರಿಗೆ ತಾಯಿ ಹಾಲು ಕುಡಿಸಿದ್ದು ನಂತರ ಬೆಳಿಗ್ಗೆ 09 ರ ಸುಮಾರಿಗೆ ವೈದ್ಯರು ಮಗುವಿಗೆ ಸೀರಿಯಸ್ ಎಂದು ಹೇಳಿದ್ದು ನಂತರ ಮಗು ಸಾವನ್ನಪ್ಪಿದೆ.

ಮಗು ಸಾವನ್ನಪ್ಪಿರುವುದು ಪೋಷಕರಿಗೆ ಆಕ್ರೋಶಕ್ಕೆ ಕಾರಣವಾಗಿದೆ. ಇದು ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ. ನಮಗೆ ಮಗು ಬೇಕು ಎಂದು ಮಗುವಿನ ತಂದೆ ಅರುಣ್ ಮತ್ತು ರೂಪ ಆಗ್ರಹಿಸಿದ್ದಾರೆ.

ಮಗುವನ್ನ ಪಿಎಂಗೆ ಕಳುಹಿಸಲಾಗಿದ್ದು ಪಿಎಂ ರಿಪೋರ್ಟ್ ನಲ್ಲಿ ವೈದ್ಯರ ನಿರ್ಲಕ್ಷ್ಯವೆಂದು ಬಂದರೆ ಪೋಷಕರು ಕ್ರಮಜರುಗಿಸಲಿ ಎಂಬುದು ಮೆಗ್ಗಾನ್ ಆಡಳಿತ ಮಂಡಳಿಯ ತಿಳಿದ್ದಾರೆ.

ಕಳೆದ ವರ್ಷ ಅರುಣ್ ಮತ್ತು ರೂಪ ದಂಪತಿಗಳಿಗೆ ವಿವಾಹವಾಗಿದ್ದು ಅರುಣ್ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೆಗ್ಗಾರು ಮೂಲದವರಾಗಿದ್ದು ರೂಪ ತಾಯಿಮನೆ ಹಿಂಡ್ಲೆಮನೆಗೆ ಹೆರಿಗೆಗಾಗಿ ಬಂದಿದ್ದರು. ಇವರಿಗೆ ಮೊದಲ ಮಗು ಇದಾಗಿದ್ದು, ಕಳೆದ ವಾರವಷ್ಟೆ ನಾಮಕರಣ ಶಾಸ್ತ್ರ ಮುಗಿದಿತ್ತು.

ಬೆಳಿಗ್ಗೆ ಹಾಲು ಕುಡಿಸಲಾಗಿದೆ. ಮಧ್ಯಾಹ್ನ ಅಷ್ಟುಹೊತ್ತಿಗೆ ಸಾವಾಗಿದೆ ಎಂದರೆ ಇದರ ನಿರ್ಲಕ್ಷತನ ವೈದ್ಯರದ್ದೇ ಎಂಬುದು ಅವರ ವಾದವಾಗಿದ್ದು, ಆಸ್ಪತ್ರೆ ಆವರಣದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಜಾಹಿರಾತು

LEAVE A REPLY

Please enter your comment!
Please enter your name here