ಎಲ್‌ಕೆಜಿ – ಯುಕೆಜಿ, ಅಂಗನವಾಡಿಗಳಲ್ಲಿ ಇಂದಿನಿಂದ ಚಿಣ್ಣರ ಚಿಲಿಪಿಲಿ ಸದ್ದು

0
529

ಹೊಸನಗರ : ಮಾರಣಾಂತಿಕ ಕೊರೊನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಮುಚ್ಚಿರುವ ಅಂಗನವಾಡಿ, ಎಲ್‌ಕೆಜಿ – ಯುಕೆಜಿ ಶಾಲೆಗಳನ್ನು ಆರಂಭಿಸಲು ಸರ್ಕಾರ ಆದೇಶ ಹೊರಡಿಸಿದ್ದು ತಾಲೂಕಿನ 345 ಎಲ್‌ಕೆಜಿ – ಯುಕೆಜಿ ಅಂಗನವಾಡಿ ಕೇಂದ್ರಗಳು ಪುನರಾರಂಭಗೊಂಡ ಬಗ್ಗೆ ತಿಳಿದುಬಂದಿದೆ.

ಮಕ್ಕಳನ್ನು ಸ್ವಾಗತಿಸಲು ಅಂಗನವಾಡಿ ಕೇಂದ್ರಗಳನ್ನು ತಳಿರು-ತೋರಣ, ಹೂವುಗಳಿಂದ ಹಾಗೂ ಬಲೂನ್ ಗಳಿಂದ ಅಲಂಕರಿಸಲಾಗಿತ್ತು. ಎಲ್‌ಕೆಜಿ-ಯುಕೆಜಿ, ಅಂಗನವಾಡಿ ಚಿನ್ನರಿಗೆ ಹೂವು, ಸಿಹಿ ನೀಡಿ ಸ್ವಾಗತಿಸಲಾಯಿತು.

ಅಂಗನವಾಡಿ ಶಾಲಾ ಕಟ್ಟಡಗಳನ್ನು ರಾಸಾಯನಿಕಗಳನ್ನು ಸಿಂಪಡಿಸಿ ಸ್ವಚ್ಛಗೊಳಿಸಲಾಗಿದೆ. ಮಕ್ಕಳ ಪೋಷಕರ ಅನುಮತಿ ಪತ್ರ ಹಾಗೂ 2 ಡೋಸ್ ವ್ಯಾಕ್ಸಿನ್ ಕಡ್ಡಾಯವಾದ ಪೋಷಕರ ಮಕ್ಕಳಿಗೆ ಮಾತ್ರ ಅನುಮತಿ ಕಲ್ಪಿಸಲಾಗಿದೆ.

ಆರಂಭದಲ್ಲಿ ಮಕ್ಕಳಿಗೆ ಮಧ್ಯಾಹ್ನದವರೆಗೆ ಮಾತ್ರ ಶಾಲೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ಶಾಲೆಯ ವಾತಾವರಣಕ್ಕೆ ಹೊಂದಿಕೊಂಡ ನಂತರ ಪೂರ್ಣ ಪ್ರಮಾಣದ ಶಾಲೆಗಳು ನಡೆಯಲಿರುವುದಾಗಿಯೂ ತಿಳಿದುಬಂದಿದೆ.

ಜಾಹಿರಾತು

LEAVE A REPLY

Please enter your comment!
Please enter your name here