ಎಳೆಯ ಮಕ್ಕಳಿಗೆ ಸಮಯ ಮೀಸಲಿಡಲು ಒತ್ತಾಯ: ಎ.ಎನ್. ಷಡಾಕ್ಷರಿ

0
133

ಚಿಕ್ಕಮಗಳೂರು: ಸಮಯವಿಲ್ಲ ಎನ್ನುವ ಸಬೂಬು ಸೋಮಾರಿಗಳ ಹಾಗೂ ನಿರಾಸಕ್ತರ ಇಂದಿನ ಯಾಂತ್ರಿಕ ಬದುಕಿನಲ್ಲಿ ಮಕ್ಕಳಿಗಾಗಿ ಯಾರು ಸಮಯವನ್ನು ಹೂಡಿಕೆ ಮಾಡುತ್ತಾರೋ ಅವರು ಭವಿಷ್ಯವನ್ನು ರೂಪಿಸುತ್ತಾರೆಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್. ಷಡಾಕ್ಷರಿ ತಿಳಿಸಿದರು.

ಕೋವಿಡ್ ಸಮಯದಲ್ಲಿ ಮಕ್ಕಳಿಗಾಗಿ ನಡೆಸಿದ ದಳಸಭೆಗಳಿಗಾಗಿ ರಾಜ್ಯ ಸಂಸ್ಥೆಯಿಂದ ತಲಾ 1000 ರೂ ಪ್ರೋತ್ಸಾಹ ಧನದ ಚೆಕ್‍ಗಳನ್ನು ದಳನಾಯಕರುಗಳಿಗೆ ವಿತರಿಸಿ ಮಾತನಾಡಿ, ನಾವು ಇತರರಿಗೆ ಅದರಲ್ಲೂ ಎಳೆಯ ಮಕ್ಕಳಿಗೆ ನೀಡಬಹುದಾದ ಅತ್ಯಮೂಲ್ಯ ಕೊಡುಗೆ ನಮ್ಮ ಸಮಯ ಎಂದು ಹೇಳಿದರು.

ಮಕ್ಕಳ ನಿಜವಾದ ವ್ಯಕ್ತಿತ್ವ ತೆರೆದುಕೊಳ್ಳುವುದು ತರಗತಿಯ ನಾಲ್ಕು ಗೋಡೆಗಳ ಆಚೆಗೆ, ಆದ್ದರಿಂದ ಪ್ರಕೃತಿಯ ಮಡಿಲಲ್ಲಿ ನಡೆಸುವ ಸ್ಕೌಟ್ಸ್, ಗೈಡ್ಸ್ ಕಾರ್ಯಕ್ರಮಗಳ ಮೂಲಕ ನಾವು ಮಕ್ಕಳ ಹೃದಯಕ್ಕೆ ಹತ್ತಿರವಾಗಬಹುದು ಹಾಗೂ ಅವರನ್ನು ತಿದ್ದುವ ಕಾರ್ಯ ಮಾಡಬಹುದೆಂದರು.

ಜಿಲ್ಲೆಯಾದ್ಯಂತ 2ಸಾವಿರ ಮಕ್ಕಳಿಗೆ ಬೇಸಿಗೆ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಇದು ಕೇವಲ ಮಕ್ಕಳಿಗೆ ಆಹ್ಲಾದಕರ ಅನುಭವ ನೀಡುವುದಲ್ಲದೆ ದಳನಾಯಕರುಗಳಿಗೆ ಶಿಬಿರ ಆಯೋಜನೆಯ ತರಬೇತಿ ನೀಡುವುದರ ಮೂಲಕ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯಕ ಎಂದರು. ಮೇ ತಿಂಗಳ ಕೊನೆಯ ವಾರದಲ್ಲಿ ದಳನಾಯಕರುಗಳ ತರಬೇತಿ ಶಿಬಿರ ನಡೆಸಲು ಆಯೋಜಿಸಲಾಗಿದ್ದು, ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.

ಜಿಲ್ಲಾ ಸಂಘಟಕ ಕಿರಣ್‍ಕುಮಾರ್ ಪ್ರಾಸ್ತಾವಿಸಿದರು. ಜಿಲ್ಲಾ ತರಬೇತಿ ಆಯುಕ್ತ ಸಂಧ್ಯಾರಾಣಿ ಸ್ವಾಗತಿಸಿ, ಜಿಲ್ಲಾ ಸಹ ಕಾರ್ಯದರ್ಶಿ ನೀಲಕಂಠಾಚಾರ್ಯ ವಂದಿಸಿದರು. ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ರಾಘವೇಂದ್ರ

ಜಾಹಿರಾತು

LEAVE A REPLY

Please enter your comment!
Please enter your name here