ಎಸಿಬಿ ಬಲೆಗೆ ನಾಡಕಛೇರಿ ಕಂದಾಯ ನಿರೀಕ್ಷಕ

0
733

ಸಾಗರ: ಭಾರಂಗಿ ಹೋಬಳಿಯ ಉಪತಹಶೀಲ್ದಾರ್ ನಾಡಕಛೇರಿಯ ಮೇಲೆ ಎಸಿಬಿ ಶಿವಮೊಗ್ಗ ಡಿವೈಎಸ್ಪಿ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷಕ ಕೃಷ್ಣಮೂರ್ತಿಯವರನ್ನು ಬಂಧಿಸಿದ್ದಾರೆ.

ಕಾನೂರು ವಾಸಿ ಪಿ.ಕೆ. ಎನ್ನುವವರಿಂದ ಕುಟುಂಬದ ಆಸ್ತಿ ಹಿಸ್ಸೆ ಸಂಬಂಧವಾಗಿ ಖಾತೆ ಮಾಡಿಕೊಡಲು 15,000 ರೂ. ಬೇಡಿಕೆಯನ್ನು ಕಂದಾಯ ನಿರೀಕ್ಷಕರು ಬೇಡಿಕೆ ಇಟ್ಟಿದ್ದರು. ಇಂದು 8.000 ರೂ. ನಗದು ಪಿ.ಕೆ. ಯವರಿಂದ ಪಡೆಯುತ್ತಿದ್ದಾಗ ಎಸಿಬಿ ದಾಳಿಗೆ ಸಿಲುಕಿ ಬಂಧನಕ್ಕೊಳಗಾಗಿದ್ದಾರೆ ಎಂದು ಡಿವೈಎಸ್ಪಿ ಲೋಕೇಶ್ ರವರು ಮಾಹಿತಿ ನೀಡಿದ್ದಾರೆ.

ದೂರುದಾರರನ್ನು ಸಂರಕ್ಷಿಸುವ ಜವಾಬ್ದಾರಿ ಇಲಾಖೆಯದ್ದಾಗಿದ್ದು, ಈ ನಿಟ್ಟಿನಲ್ಲಿ ದೂರುದಾರರ ಹೆಸರನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here