ಎಸ್‌ಎಸ್‌ಎಲ್‌ಸಿಯಲ್ಲಿ 623 ಅಂಕ ಪಡೆದ ಎಂ.ಬಿ ದೀಪ್ತಿ ; ಅಭಿನಂದನೆ

0
615

ಹೊಸನಗರ: ಇಲ್ಲಿನ ಪಟ್ಟಣ ಪಂಚಾಯಿತಿ ವಾಟರ್ ಇಂಜಿನಿಯರ್ ಬಸವರಾಜ್ ರವರ ಪುತ್ರಿ ಎಂ.ಬಿ ದೀಪ್ತಿಯವರು 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 623ಅಂಕಗಳನ್ನು ಪಡೆಯುವುದರ ಜೊತೆಗೆ ಕನ್ನಡದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದು ಹೊಸನಗರ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

ಕನ್ನಡದಲ್ಲಿ 125ಕ್ಕೆ 125, ಇಂಗ್ಲೀಷ್‌ನಲ್ಲಿ 100ಕ್ಕೆ 99 ಅಂಕ, ಹಿಂದಿಯಲ್ಲಿ 100ಕ್ಕೆ 100ಅಂಕ, ಗಣಿತದಲ್ಲಿ 100ಕ್ಕೆ 100ಅಂಕ, ವಿಜ್ಞಾನದಲ್ಲಿ 100ಕ್ಕೆ 100ಅಂಕ ಹಾಗೂ ಸಮಾಜ ವಿಜ್ಞಾನದಲ್ಲಿ 100ಕ್ಕೆ 99ಅಂಕಗಳನ್ನು ಪಡೆದುಕೊಂಡಿದ್ದಾರೆ

ಅಭಿನಂದನೆ:

ಹೊಸನಗರ ಪಟ್ಟಣ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಬಸವರಾಜ್‌ರವರ ಮಗಳಾದ ಎಂ.ಬಿ ದೀಪ್ತಿಯವರು ಕನ್ನಡದಲ್ಲಿ 125ಕ್ಕೆ 125 ಹಾಗೂ ಮೂರು ಬೋಧನ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದು ಇವರನ್ನು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಹಾಗೂ ಸಿಬ್ಬಂದಿಗಳು, ಪಟ್ಟಣ ಪಂಚಾಯಿತಿ ಅಧ್ಯಕ್ಷ, ಸದಸ್ಯರುಗಳು ಅಭಿನಂದಿಸಿ ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಹೊಸನಗರ ತಾಲ್ಲೂಕಿಗೆ ಕೀರ್ತಿ ತರಲಿ ಎಂದು ಹಾರೈಸಿದ್ದಾರೆ.

ಹೆಚ್ಚು ಅಂಕ ಗಳಿಸಿದವರ ಕಡೆಗಣನೆ:

ತಾಲ್ಲೂಕಿನಲ್ಲಿ ಈ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 624, 623ಅಂಕಗಳಿಸಿದವರನ್ನು ರಾಜಕೀಯ ವ್ಯಕ್ತಿಗಳು ಕಡೆಗಣಿಸಿ ಇವರಿಗಿಂತ ಕಡಿಮೆ ಅಂಕ ಗಳಿಸಿದವರನ್ನು ಸನ್ಮಾನಿಸುತ್ತಿದ್ದು ತಾಲ್ಲೂಕಿಗೆ ಹೆಚ್ಚು ಅಂಕ ಗಳಿಸಿದವರನ್ನು ಕಡೆಗಣಿಸಲಾಗುತ್ತಿದೆ ಎಂದು ಹೆಚ್ಚು ಅಂಕಗಳಿಸಿದ ಕೆಲವು ವಿದ್ಯಾರ್ಥಿಗಳು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here